ಮುಂಬೈ ಮಳೆಯನ್ನು ಮೆಟ್ಟಿ ನಿಂತ ಮೇಕ್ ಇನ್ ಇಂಡಿಯಾ ಪ್ರೊಡಕ್ಟ್​​: ವಂದೇ ಭಾರತ್ ರೈಲಿನ ಅಬ್ಬರದ ವಿಡಿಯೋ ವೈರಲ್! Vande Bharat Express in Mumbai Monsoon

ಜಲಾವೃತ ಹಳಿಯ ಮೇಲೆ ನುಗ್ಗಿದ ವಂದೇ ಭಾರತ್!
ಜಲಾವೃತ ಹಳಿಯ ಮೇಲೆ ನುಗ್ಗಿದ ವಂದೇ ಭಾರತ್!
Published on

ಪ್ರಮುಖ ಮುಖ್ಯಾಂಶಗಳು

  • ಮುಂಬೈ ಭಾರಿ ಮಳೆಗೆ ರೈಲ್ವೆ ಹಳಿಗಳು ಜಲಾವೃತ
  • ನೀರಿನಲ್ಲೇ ಕಾರಂಜಿಯಂತೆ ನುಗ್ಗಿದ ವಂದೇ ಭಾರತ್!
  • ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ ಮೇಕ್ ಇನ್ ಇಂಡಿಯಾ ರೈಲು
ಮುಂಬೈ: ಹಿಂದೊಂದು ಕಾಲವಿತ್ತು ಮುಂಬೈನ ಮಳೆಗೆ ಬೈಕು ಕಾರುಗಳು ಹಾಳಾಗಲಿ ರೈಲುಗಳು ಸಹ ಗಂಟೆಗಟ್ಟಲೇ ನಿಲ್ದಾಣದಲ್ಲೇ ನಿಂತು ಬಿಡುತ್ತಿದ್ದವು. ಮಳೆ ನೀರಿನ ರಭಸವನ್ನು ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯ ಅಂದಿನ ರೈಲುಗಳಿಗೆ ಇರಲಿಲ್ಲ.
ಆದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾನಲ್ಲಿ ಭಾರತದ ಹೆಮ್ಮೆ ವಂದೇ ಭಾರತ್​ ರೈಲು ಮುಂಬೈನ ಮಳೆಯನ್ನು(Vande Bharat Express in Mumbai Monsoon) ಮೆಟ್ಟಿ ಸಾಗುತ್ತಿರುವ ವಿಡಿಯೋವೊಂದು ಸಖತ್​ ವೈರಲ್​ ಆಗುತ್ತಿದೆ.

ವಿಡಿಯೋನಲ್ಲೇನಿದೆ?

ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಮುಂಬೈನ ಕಂಜುರ್ ಮಾರ್ಗ್ ರೈಲ್ವೆ ಹಳಿಗಳು ಮಳೆ ನೀರಿನಿಂದ ಸಂಪೂರ್ಣ ಮುಳುಗಿ ಹೋಗಿತ್ತು. ಹಳಿ ಎಲ್ಲಿದೆ ಎಂದು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸೆಮಿ-ಹೈಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express), ರೈಲು ಹಳಿ ಮೇಲಿದ್ದ ನೀರಿನಲ್ಲಿ ಸುನಾಮಿಯಂತೆ ನುಗ್ಗಿ ಸಾಗಿರುವ ವಿಡಿಯೋ ಸೆರೆಯಾಗಿದೆ.
ರೈಲು ಎಷ್ಟು ವೇಗವಾಗಿ ನುಗ್ಗಿತೆಂದರೆ, ಹಳಿಯಲ್ಲಿದ್ದ ನೀರು ಎರಡು ಬದಿಗಳಲ್ಲಿ ಭಾರಿ ಕಾರಂಜಿಯಂತೆ ಚಿಮ್ಮಿದೆ. ಎಷ್ಟು ಎತ್ತರಕ್ಕೆ ಎಂದರೆ, ಪಕ್ಕದಲ್ಲಿದ್ದ ಫ್ಲೈಓವರ್ ಮತ್ತು ಸೇತುವೆಯ ಮೇಲಿದ್ದ ವಾಹನಗಳ ಮೇಲೆ ನೀರು ಹೋಗಿ ಬಿದ್ದಿದೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಂಚಿಕೆಯಾಗುತ್ತಿದ್ದಂತೆ ಮಿಲಿಯನ್‌ಗಟ್ಟಲೆ ವೀಕ್ಷಣೆ ಪಡೆದಿದೆ. ವಿಡಿಯೋ ನೋಡಿದ ನೆಟ್ಟಿಗರು ನಿಬ್ಬೆರಗಾಗಿದ್ದಾರೆ.
ಇದು ರೈಲೋ ಅಥವಾ ಹಡಗೋ? ಎಂದು ಕೆಲವರು ತಮಾಷೆ ಮಾಡಿದರೆ, ಇನ್ನು ಕೆಲವರು ಭಾರತೀಯ ರೈಲ್ವೆಯ ಮೇಕ್ ಇನ್ ಇಂಡಿಯಾ ಇಂಜಿನಿಯರಿಂಗ್ ತಂತ್ರಜ್ಞಾನವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಇಷ್ಟು ನೀರಿದ್ದರೂ ಯಾವುದೇ ಶಾರ್ಟ್ ಸರ್ಕ್ಯೂಟ್ ಇಲ್ಲದೆ, ಎಂಜಿನ್ ಕೆಡದೆ ರೈಲು ಸಾಗಿದ್ದು ನಿಜಕ್ಕೂ ಗ್ರೇಟ್ ಎಂದಿದ್ದಾರೆ.
ಮೆಚ್ಚುಗೆಯ ನಡುವೆ ಹೆಚ್ಚಿದ ಆತಂಕ!
ಒಂದೆಡೆ ರೈಲಿನ ಸಾಮರ್ಥ್ಯಕ್ಕೆ ಫುಲ್ ಮಾರ್ಕ್ಸ್ ಸಿಗುತ್ತಿದ್ದರೆ, ಮತ್ತೊಂದೆಡೆ ಮುಂಬೈನ ಮೂಲಸೌಕರ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ಕೇವಲ ಒಂದೇ ಒಂದು ದಿನದ ಭಾರಿ ಮಳೆಗೆ ಇಡೀ ರೈಲ್ವೆ ಹಳಿಗಳು ಕೆರೆಯಂತಾದರೆ ಸಾಮಾನ್ಯ ಜನರ ಕಥೆ ಏನು? ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಸೇತುವೆಯ ಮೇಲಿದ್ದ ವಾಹನಗಳಿಗೆ ನೀರು ಚಿಮ್ಮಿರುವುದರಿಂದ ಭಾರಿ ಅಪಘಾತಗಳು ಸಂಭವಿಸುವ ಸಾಧ್ಯತೆಯೂ ಇತ್ತು ಎಂದು ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ.

ಮುಂಬೈಗೆ ರೆಡ್ ಅಲರ್ಟ್!

ಕಳೆದ 23 ಗಂಟೆಗಳಲ್ಲಿ ಮುಂಬೈನ ಕೆಲವು ಭಾಗಗಳಲ್ಲಿ ಬರೋಬ್ಬರಿ 250 ರಿಂದ 300 ಮಿಮೀ ಭಾರಿ ಮಳೆಯಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಭಾರತ ಹವಾಮಾನ ಇಲಾಖೆ ಮುಂಬೈ ಮತ್ತು ರಾಯಗಡ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಕೊಂಕಣ, ಗೋವಾ ಮತ್ತು ಗುಜರಾತ್ ಭಾಗಗಳಲ್ಲೂ ಮುಂದಿನ ದಿನಗಳಲ್ಲಿ ಇಂತಹುದೇ ಭಾರಿ ಮಳೆಯಾಗುವ ಮುನ್ಸೂಚನೆ ಇದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net