ಮದುವೆಗೆ ಬಂದವರು ವಧು-ವರರ ಹೆಸರು ಕೇಳಿ ದಂಗು: ಇಂಥಾ ಪ್ರಸಂಗ ಇದುವರೆಗೂ ನಡೆದೇ ಇಲ್ಲ ಎಂದ ನೆಟ್ಟಿಗರು! Bride And Groom

ಪೂರ್ವ ಚೀನಾದ ಜೆಜಿಯಾಂಗ್ ಪ್ರಾಂತ್ಯದಲ್ಲಿ ಈ ವಿಶಿಷ್ಟ ಮದುವೆ ಜರುಗಿದೆ. ಅಕ್ಟೋಬರ್ 6ರಂದು ಮದುವೆಯಾದ ಈ ಜೋಡಿಯ ಹೆಸರು 'ಝು ಜಿಯಾಚಾಂಗ್' (Zhu Xiaochong). ವರನಿಗೆ 33 ವರ್ಷ ವಯಸ್ಸಾಗಿದ್ದರೆ, ವಧುವಿಗೆ 28 ವರ್ಷ.
Bride And Groom
ಸಾಂದರ್ಭಿಕ ಚಿತ್ರ
Published on: 

ಬೀಜಿಂಗ್​: ಸಾಮಾನ್ಯವಾಗಿ ಮದುವೆಗಳು ಅಂದರೆ ಅದರ ಆಡಂಬರ, ಉಡುಗೊರೆಗಳು ಸೇರಿದಂತೆ ವಿಭಿನ್ನ ಆಚರಣೆಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ. ಆದರೆ, ಇಲ್ಲೊಂದು ಜೋಡಿಯ ಮದುವೆ ಎಲ್ಲರ ಗಮನ ಸೆಳೆಯಲು ಕಾರಣವಾಗಿರುವುದು ಅವರ 'ಹೆಸರು'! ಹೌದು, ತಮಾಷೆ ಅನ್ನಿಸಿದರೂ ಇದು ಸತ್ಯ; ವಧು ಮತ್ತು ವರ ( Bride And Groom ) ಇಬ್ಬರ ಹೆಸರೂ ಅಚ್ಚರಿಯ ರೀತಿಯಲ್ಲಿ ಒಂದೇ ಆಗಿದ್ದು, ಈ ಅಪರೂಪದ ಮದುವೆ ಈಗ ಜಾಗತಿಕ ಮಟ್ಟದಲ್ಲಿ ಸಖತ್ ಚರ್ಚೆಗೆ ಗ್ರಾಸವಾಗಿದೆ.

ಪೂರ್ವ ಚೀನಾದ ಜೆಜಿಯಾಂಗ್ ಪ್ರಾಂತ್ಯದಲ್ಲಿ ಈ ವಿಶಿಷ್ಟ ಮದುವೆ ಜರುಗಿದೆ. ಅಕ್ಟೋಬರ್ 6ರಂದು ಮದುವೆಯಾದ ಈ ಜೋಡಿಯ ಹೆಸರು 'ಝು ಜಿಯಾಚಾಂಗ್' (Zhu Xiaochong). ವರನಿಗೆ 33 ವರ್ಷ ವಯಸ್ಸಾಗಿದ್ದರೆ, ವಧುವಿಗೆ 28 ವರ್ಷ. ಇಬ್ಬರ ಹೆಸರು ಮಾತ್ರವಲ್ಲ, ಚೈನೀಸ್ ಭಾಷೆಯ ಲಿಪಿಯಲ್ಲಿಯೂ ಇಬ್ಬರ ಹೆಸರನ್ನು ಒಂದೇ ರೀತಿಯ ಅಕ್ಷರಗಳಿಂದ ಬರೆಯಲಾಗಿದೆ ಎಂಬುದು ಮತ್ತೊಂದು ವಿಶೇಷ.

Also Read
3 ಬಾರಿ ಮದುವೆಯಾದ ತಾಯಿ, ಅಸ್ಥಿರ ಬಾಲ್ಯ, ಸ್ನೇಹಿತನ ಹೆಂಡತಿಯೊಂದಿಗೆ ಲವ್​: ಯಾರು ಈ ಇಮ್ರಾನ್ ಖಾನ್? Imran Khan
Bride And Groom

ಈ ಅಪರೂಪದ ಸಂಗತಿಯು ಬೆಳಕಿಗೆ ಬಂದದ್ದು ಆ ಜೋಡಿಯ ಮದುವೆಯ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗ. ಮದುವೆಗೆ ಬಂದಿದ್ದ ಕೆಲ ದೂರದ ಸಂಬಂಧಿಕರು ಪೋಸ್ಟರ್‌ನಲ್ಲಿ ವಧು ಮತ್ತು ವರನ ಹೆಸರು ಒಂದೇ ಇರುವುದನ್ನು ನೋಡಿ ಗೊಂದಲಕ್ಕೀಡಾಗಿದ್ದರು. ಆಯೋಜಕರು ಯಾವುದೋ ಎಡವಟ್ಟು ಮಾಡಿದ್ದಾರೆ ಎಂದು ಆರಂಭದಲ್ಲಿ ಅವರು ಭಾವಿಸಿದ್ದರು. ಆದರೆ ವಿಚಾರ ತಿಳಿದು, ವಧು-ವರರಿಬ್ಬರ ಹೆಸರು ಒಂದೇ ಎಂಬುದನ್ನು ಕಂಡು ಅವರೆಲ್ಲರೂ ಆಶ್ಚರ್ಯಚಕಿತರಾದರು.

ವಿಶೇಷವೆಂದರೆ, ಈ ದಂಪತಿ ವೃತ್ತಿಜೀವನದಲ್ಲೂ ಒಂದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಬ್ಬರೂ ವಿಮಾನಯಾನ ವಲಯದಲ್ಲೇ ಕೆಲಸ ಮಾಡುತ್ತಿದ್ದಾರೆ. ಇವರ ಈ ಕಾಕತಾಳೀಯ ಹೊಂದಾಣಿಕೆಯನ್ನು ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಷ್ಟು ನಿಖರವಾದ ಹೊಂದಾಣಿಕೆ ಇರುವುದು ದೇವರೇ ಇವರನ್ನು ಒಂದಾಗಿಸಲು ಮಾಡಿರುವ ಸೃಷ್ಟಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ, ಇವರ ಹೆಸರುಗಳ ಸಾಮ್ಯತೆಯನ್ನು ನೋಡಿ, ಮುಂದಿನ ದಿನಗಳಲ್ಲಿ ಇವರ ಮಗುವಿಗೆ 'ಕಾಂಗ್‌ಕಾಂಗ್' ಎಂದು ಹೆಸರಿಡಬೇಕು ಎಂದು ಕೆಲವರು ತಮಾಷೆಯಾಗಿಯೂ ಸಲಹೆ ನೀಡಿದ್ದಾರೆ.

ಮತ್ತೊಂದೆಡೆ, ಸಾಮಾಜಿಕ ಜಾಲತಾಣದಲ್ಲಿ ಈ ಮದುವೆಯ ಕುರಿತು ತಮಾಷೆಯ ಚರ್ಚೆಗಳ ಜೊತೆಗೆ ಕೆಲವರು ಕಳವಳಗಳನ್ನೂ ವ್ಯಕ್ತಪಡಿಸಿದ್ದಾರೆ. ಗಂಡ ಮತ್ತು ಹೆಂಡತಿ ಇಬ್ಬರ ಹೆಸರು ಸಂಪೂರ್ಣವಾಗಿ ಒಂದೇ ಆಗಿದ್ದರೆ, ದೈನಂದಿನ ಜೀವನದಲ್ಲಿ ಅಂಚೆ ಕಚೇರಿ, ಬ್ಯಾಂಕ್ ಕೆಲಸಗಳು ಅಥವಾ ಅಧಿಕೃತ ದಾಖಲೆಗಳಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಬಹುದು ಎಂದು ಕೆಲ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಚಿಕ್ಕಪುಟ್ಟ ಗೊಂದಲಗಳು ಮುಂದೆ ದಾಂಪತ್ಯ ಜೀವನದಲ್ಲಿ ಸಮಸ್ಯೆಗೆ ಕಾರಣವಾಗಬಹುದೇ ಎಂಬ ಪ್ರಶ್ನೆಯನ್ನೂ ಕೆಲವರು ಮುಂದಿಟ್ಟಿದ್ದಾರೆ.

Also Read
ವರ್ಚುವಲ್ ಮೀಟಿಂಗ್‌ನಲ್ಲಿ ಐಎಎಸ್ ಅಧಿಕಾರಿ ದರ್ಪ: ಮಹಿಳಾ ಅಧಿಕಾರಿಗೆ ನಿಂದನೆ, ವಿಡಿಯೋ ವೈರಲ್! Kumar Rajeev Ranjan
Bride And Groom

ಏನೇ ಆಗಲಿ, ಇಂದಿನ ಆಧುನಿಕ ಜಗತ್ತಿನಲ್ಲಿ ಇಂತಹ ಕಾಕತಾಳೀಯಗಳು ಅತ್ಯಂತ ವಿರಳ. ಹೆಸರು ಮಾತ್ರವಲ್ಲದೆ ವೃತ್ತಿಯೂ ಒಂದೇ ಆಗಿರುವ ಈ ವಿಚಿತ್ರ ಜೋಡಿಯ ಮದುವೆ ಪೋಸ್ಟರ್ ಈಗ ಇಂಟರ್ನೆಟ್‌ನಲ್ಲಿ ಹಲ್‌ಚಲ್ ಸೃಷ್ಟಿಸಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net