ಅಧ್ಯಕ್ಷರ ಕೊಲೆಗೆ ಮುಂದಾದ ಆರೋಪಿ ಬಂಧನ; ಪೆನ್ ಹಿಡಿದಿದ್ದ ಶಿಕ್ಷಕ ಗನ್​ ಹಿಡಿದಿದ್ಯಾಕೆ? ಯಾರು ಈ ಕೋಲ್​ ಅಲೆನ್​? Cole Tomas Allen

ಆರೋಪಿ ಕೋಲ್​ ಥಾಮಸ್ ಅಲೆನ್​ ಬಂಧನ
ಆರೋಪಿ ಕೋಲ್​ ಥಾಮಸ್ ಅಲೆನ್​ ಬಂಧನ
Published on

ಪ್ರಮುಖ ಮುಖ್ಯಾಂಶಗಳು

  • ಶನಿವಾರ (ಏ.25) ಅಮೆರಿಕ ಅಧ್ಯಕ್ಷರ ಮೇಲೆ ಗುಂಡಿನ ದಾಳಿ
  • ಆರೋಪಿ ಕೋಲ್​ ಥಾಮಸ್ ಅಲೆನ್​ ಬಂಧನ
  • ಪೆನ್​ ಹಿಡಿದಿದ್ದ ಶಿಕ್ಷಕ ಗನ್​ ಹಿಡಿದಿದ್ಯಾಕೆ?
  • ಯಾರು ಈ ಕೋಲ್​ ಅಲೆನ್​?
ವಾಷಿಂಗ್​ಟನ್​: ಅಮೆರಿಕದ ರಾಜಧಾನಿ ವಾಷಿಂಗ್​ಟನ್​ ಡಿ.ಸಿಯಲ್ಲಿನ ಹಿಲ್ಟನ್ ಹೋಟೆಲ್‌ನಲ್ಲಿ ನಡೆದ ವರದಿಗಾರರೊಂದಿಗಿನ ಹೈಪ್ರೊಫೈಲ್​ ಔತಣಕೂಟದಲ್ಲಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮೇಲೆ ನಡೆದಿರುವ ಹತ್ಯೆ ಯತ್ನ ಆರೋಪದಲ್ಲಿ ಕೋಲ್ ಥಾಮಸ್​​ ಅಲೆನ್​​ (Cole Tomas Allen) ಎಂಬಾತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಯಾರು ಈ ಕೋಲ್​ ಥಾಮಸ್​ ಅಲೆನ್​?

ಸದ್ಯ ದೊರೆತಿರುವ ಮಾಹಿತಿ ಪ್ರಕಾರ, ಬಂಧಿತ ಕೋಲ್​ ಅಲೆನ್​ ಕಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಮೆಕಾನಿಕಲ್​ ಎಂಜಿನಿಯರಿಂಗ್​ನಲ್ಲಿ 2017 ರಲ್ಲಿ ಪದವಿ ಪಡೆದಿದ್ದು, ​ಕಾಲಿಫೋರ್ನಿಯಾ ರಾಜ್ಯ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಇವರು ಸಿ 2 (C2) ಎಂಬ ಶೈಕ್ಷಣಿಕ ಸಂಸ್ಥೆಯಲ್ಲಿ ಪಾರ್ಟ್​ ಟೈಮ್​ಗೆ ಬೋಧಕ ಸಿಬ್ಬಂದಿಯಾಗಿ ಕೆಲಸಮಾಡುತ್ತಿದ್ದು, 2024 ರಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಾಗೆಯೇ ಈ ಅಲೆನ್​​, 2014 ರಲ್ಲಿ ನಾಸಾ ದ ಪ್ರೊಪಲ್ಷನ್ ಪ್ರಯೋಗಾಲಯದ ಬೇಸಿಗೆ ಸಂಶೋಧನಾ ಶಿಬಿರದ ಫೆಲ್ಲೊಶಿಫ್​ನಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ.
ಇದರ ಜೊತೆಗೆ, ಅಲೆನ್​​ ವಿಡಿಯೋ ಗೇಮ್​ಗಳನ್ನು ಡೆವಲಪರ್​ ಆಗಿ ಸಹ ಕೆಲಸ ಮಾಡಿದ್ದು, ಯುದ್ಧ ಹಾಗೂ ಹೊಡೆದಾಟದ ಗೇಮ್​ಗಳನ್ನು ಸೃಷ್ಟಿಸುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾನೆ ಎಂದು ತಿಳಿದಿದೆ. ಹಾಗೆಯೇ ಈ ಕೋಲ್ ಅಲೆನ್​​ 2024 ರಲ್ಲಿ ಡೆಮೊಕ್ರಾಟಿಕ್​ ಪಕ್ಷದ ಕಮಾಲಾ ಹ್ಯಾರಿಸ್​ಗೆ ಬೆಂಬಲ ಸೂಚಿಸಿ 25 ಡಾಲರ್​ನ್ನು ದೇಣಿಗೆ ರೂಪದಲ್ಲಿ ನೀಡಿದ್ದ ಎಂದು ಮಾಹಿತಿ ದೊರೆತಿದೆ.

ಬಾಲ್​ರೂಮ್​ ಪ್ರವೇಶಿಸುವ ಮೊದಲೇ ಬಂಧಿಸಿದ ಭದ್ರತಾ ಸಿಬ್ಬಂದಿ!

ಈ ಔತಣಕೂಟದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಪತ್ನಿ ಮೆಲೆನಿಯಾ ಟ್ರಂಪ್​, ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್​ ಸೇರಿದಂತೆ ಸುಮಾರು 2,500 ಹೈ ಪ್ರೊಫೈಲ್​ ಜನರು ಹಾಜರಿದ್ದರೆಂದು ತಿಳಿದು ಬಂದಿದೆ.
ಬಂಧಿತ ಆರೋಪಿ ಸೆಕ್ಯರಿಟಿ ಚೆಕ್​ಪಾಯಿಂಟ್​ನ್ನು ದಾಟಿ ಬಂದೂಕನ್ನು ಹಿಡಿದು ಬಾಲ್​ರೂಮ್​ನತ್ತ ಓಡುತ್ತಿದ್ದಾಗ ಭದ್ರತಾ ಸಿಬ್ಬಂದಿಗಳು ಆತನನ್ನು ವಶಕ್ಕೆ ಪಡೆದಿರುವುದಾಗಿ ವಾಷಿಂಗ್​ಟನ್​ ಡಿ.ಸಿ ಪೊಲೀಸ್​ ಮುಖ್ಯಸ್ಥ ಜೇಫ್ರಿ ಕ್ಯಾರೋಲ್​ ತಿಳಿಸಿದ್ದಾರೆ.
ಆತನನ್ನು ವಶಕ್ಕೆ ಪಡೆದ ಕೂಡಲೇ ಅರೆ ಬೆತ್ತಲೆ ಮಾಡಿ ನೆಲದ ಮೇಲೆ ಮಲಗಿಸಿ, ಸ್ಪೋಟಕ ವಸ್ತುಗಳೇನಾದರೂ ಇದ್ದವೆ ಎಂದು ಪರೀಕ್ಷಿಸಲಾಗಿದೆ. ಆದರೆ ಅವನ ಬಳಿ ಯಾವುದೇ ಸ್ಪೋಟಕಗಳು ಕಂಡು ಬಂದಿಲ್ಲ. ಅಲೇನ್​ ಬಳಿ ಇದ್ದ ಶಾಟ್​ಗನ್​, ಹ್ಯಾಂಡ್​ಗನ್​ ಹಾಗೂ ಹಲವಾರು ಚಾಕುಗಳನ್ನು ವಶಕ್ಕೆ ತೆಗೆದು ಕೊಂಡಿರುವುದಾಗಿ ಕ್ಯಾರೋಲ್​ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲು; ಸೋಮವಾರ ಹಾಜರು

ಭದ್ರತಾ ಸಿಬ್ಬಂದಿ ಅಲೆನ್​​ನ್ನು ತಡೆಯಲು ಯತ್ನಿಸಿದಾಗ ಗುಂಡಿನ ದಾಳಿ ನಡೆಸಿದ್ದಾನೆ. ಭದ್ರತಾ ಸಿಬ್ಬಂದಿಗಳು ಬುಲೆಟ್​ಪ್ರೂಫ್​ ಜಾಕೆಟ್​ ಧರಿಸಿದ್ದ ಕಾರಣ ಯಾವುದೇ ಅಪಾಯ ಸಂಭವಿಸಲಿಲ್ಲ ಎಂದು ಯುಎಸ್ ಅಟಾರ್ನಿ ಜೀನೈನ್ ಪಿರೊ ಹೇಳಿದ್ದಾರೆ.
ಬಂಧಿತ ಆರೋಪಿ ಕೋಲ್ ಥಾಮಸ್​​ ಅಲೆನ್​​ನನ್ನು ಸೋಮವಾರ (ಏ.27) ಫೆಡರಲ್​ ನ್ಯಾಯಾಲಯದ ಮುಂದೆ ಹಾಜರು ಪಡಿಸುವುದಾಗಿ ತಿಳಿಸಿದ್ದಾರೆ. ಅದೇ ರೀತಿ ತನಿಖೆ ನಡೆಯುತ್ತಿದ್ದು, ಇವನ ಮೇಲೆ ಕಾರ್ಯುಕ್ರಮಕ್ಕೆ ಬಂದೂಕಿದಾರಿಯಾಗಿ ಬಂದಿರುವ ಹಾಗೂ ಕೊಲೆ ಯತ್ನ ಮಾಡಿರುವ ಹಿನ್ನಲೆ ಪ್ರಕರಣವನ್ನು ದಾಖಲಿಸಿ ಕೊಳ್ಳಲಾಗಿದೆ ಎಂದು ಪಿರೊ ತಿಳಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net