ಈ ಘಟನೆ ಕುರಿತಂತೆ ಮಾತನಾಡಿರುವ ಹೋರಾಟಗಾರರ ನಾಯಕ ಸರ್ದಾರ್ ಉಮತ್ ನಜೀರ್, ನಮ್ಮ ಮೇಲೆ ಪಾಕಿಸ್ತಾನಿ ರೇಂಜರ್ಗಳು ಮತ್ತೊಮ್ಮೆ ದಾಳಿ ನಡೆಸಿದ್ದಾರೆ. ಈ ಬಾರಿ ಬಂದಿದ್ದ ರೇಂಜರ್ಗಳು ಮಸೀದಿ ಮೇಲೆ ದಾಳಿ ಮಾಡಿ, ಮಸೀದಿ ಆವರಣವನ್ನು ಧ್ವಂಸಮಾಡಿ, ಅಲ್ಲಿದ್ದ ವಸ್ತುಗಳನ್ನು ಜಫ್ತಿ ಮಾಡಿ, ಕುರಾನ್ ಸೇರಿದಂತೆ ಇನ್ನುಳಿದ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಇಸ್ರೇಲ್, ಗಾಜಾ ಮೇಲೆ ಯಾವ ಅತ್ಯಾಚಾರ ಮಾಡುತ್ತಿದೆಯೋ, ಅದೇ ರೀತಿಯ ವರ್ತನೆಯನ್ನು ಪಾಕಿಸ್ತಾನ, ಪಾಕ್ ಆಕ್ರಮಿತ ಪ್ರದೇಶದಲ್ಲಿರುವ ನಮ್ಮ ಮೇಲೆ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ, (ಏಜನ್ಸೀಸ್).