ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ನುಗ್ಗಿದ ಡೆಲಿವರಿ ಬಾಯ್: ಒಂಟಿ ಮಹಿಳೆಯೊಂದಿಗೆ ಅನುಚಿತ ವರ್ತನೆ; ಪೊಲೀಸರಿಂದ ಬಂಧನ! Delivery Boy Misbehaves
ಮನೆಯಲ್ಲಿದ್ದ ಒಂಟಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ ಆಸಾಮಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ನುಗ್ಗಿದ ಡೆಲಿವರಿ ಬಾಯ್
ಮನೆಯಲ್ಲಿದ್ದ ಒಂಟಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ ಆಸಾಮಿ
ತನ್ನ ಖಾಸಗಿ ಅಂತವನ್ನು ತೋರಿಸಿ ವಿಕೃತಿ ಮೆರೆದ ಮಲ್ಲಿಕಾರ್ಜುನ್ ಬಂಧನ
ಘಟನೆ ವಿಡಿಯೋ ಹಂಚಿಕೊಂಡ ಸಂತೃಸ್ತೆ ಫಾತಿಮಾ
ಬೆಂಗಳೂರು: ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ಅಕ್ರಮ ಪ್ರವೇಶ ಮಾಡಿದ ಡೆಲಿವರಿ ಏಜೆಂಟ್ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ (Delivery Boy Misbehaves) ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಮನೆಗೆ ಆನ್ಲೈನ್ನಲ್ಲಿ ತರಿಸಿದ್ದ ಪಾರ್ಸೆಲ್ಅನ್ನು ನೀಡಲು ಬಂದಿದ್ದ ಮಲ್ಲಿಕಾರ್ಜುನ್ ಕಾಮತ್ ಎಂಬ ಇ-ಕಾಮರ್ಸ್ ಡೆಲಿವರಿ ಹುಡುಗನನ್ನು ಬಂಧಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಆಗಿದ್ದೇನು?
ನಿಲೋಫರ್ ಫಾತಿಮಾ ಎಂಬ ಯುವತಿ ಇ-ಕಾಮರ್ಸ್ ಸೈಟ್ನಿಂದ ಕೆಲ ವಸ್ತುಗಳನ್ನು ಆರ್ಡ್ರ್ ಮಾಡಿದ್ದಳು. ಅದನ್ನು ತಲುಪಿಸಲು ಬಂದ ಮಲ್ಲಿಕಾರ್ಜುನ್ ಕಾಮತ್, ಆರ್ಡ್ರ್ ನೀಡಿದ ಬಳಿಕ ಶೌಚಾಲಯವನ್ನು ಬಳಸುವುದಾಗಿ ಕೇಳಿದ್ದಾನೆ. ಮನೆಯಲ್ಲಿ ಒಬ್ಬಳೇ ಇದ್ದ ಕಾರಣ ಬೇಡ, ಬೇಕಿದ್ದರೆ ಪಕ್ಕದಲ್ಲಿ ಪುರುಷರ ಫ್ಲಾಟ್ ಇದೆ ಅವರ ಬಳಿ ವಿನಂತಿಸಿಕೊಳ್ಳಿ ಎಂದು ಫಾತಿಮಾ ಹೇಳಿದ್ದಾರೆ.
ಆದರೆ ಫಾತಿಮಾ ಮಾತಿಗೆ ಕ್ಯಾರೆ ಎನ್ನದ ಮಲ್ಲಿಕಾರ್ಜುನ್, ಅಕ್ರಮವಾಗಿ ಮನೆಯನ್ನು ಪ್ರವೇಶಿಸಿ, ಶೌಚಾಲಯವನ್ನು ಬಳಸಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಡೆಲಿವರಿ ಬಾಯ್, ತನ್ನ ಖಾಸಗಿ ಅಂಗವನ್ನು ಮಹಿಳೆಗೆ ತೋರಿಸಿ, ಅಶ್ಲೀಲ ಸನ್ನೆಗಳನ್ನು ಮಾಡಿದ್ದಾನೆ.
ಇವನ ಈ ಕೃತ್ಯವನ್ನು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದ ಫಾತಿಮಾ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಘಟನೆಯನ್ನು ಹಂಚಿಕೊಂಡಿದ್ದಾರೆ. ನನ್ನ ಮನೆಯಲ್ಲಿ ನನಗೆ ಸುರಕ್ಷಿತಳಾಗಿಲ್ಲ ಎನ್ನುವಂತೆ ಅನ್ನಿಸಿದೆ, ಅವನು ನನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ, ನನಗೆ ಬಹಳ ಭಯವಾಗುತ್ತಿದೆ ಎಂದು ಫಾತಿಮಾ ಭಾವುಕಳಾಗಿ ವಿಡಿಯೋ ಹಂಚಿಕೊಂಡಿದ್ದಾರೆ.
ಫಾತಿಮಾಳ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ಕೂಡಲೇ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸರು, ಆತನ ಬಗ್ಗೆ ಸಂಪೂರ್ಣ ವಿವಿರವನ್ನು ನೀಡುವಂತೆ ಫಾತಿಮಾರಲ್ಲಿ ಹೇಳಿದ್ದಾರೆ. ಫಾತಿಮಾ ನೀಡಿದ ಮಾಹಿತಿ ಹಾಗೂ ದೂರನ್ನು ಆಧರಿಸಿ ಮಾರತಳ್ಳಿ ವ್ಯಾಪ್ತಿಯಲ್ಲಿ ಈ ಮಲ್ಲಿಕಾರ್ಜುನ ಕಾಮತ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ, (ಏಜನ್ಸೀಸ್).