ಬಿಸಿಲಿನ ಝಳಕ್ಕೆ ಉತ್ತರ ಕೊರಿಯಾ ತತ್ತರ: ದಿನಕ್ಕೆ ಒಂದು ಲೀಟರ್​ ಬಿಯರ್​ ಕುಡಿಯಲು ಸೂಚನೆ; ವೈದ್ಯಕೀಯ ವರದಿ ಹೇಳುವುದೇನು? Beer Drinking in North Korea

ಬಾಯಾರಿಕೆ ನೀಗಿಸಲು ದಿನಕ್ಕೆ 1 ಲೀಟರ್ ಬಿಯರ್ ಕುಡಿಯುವಂತೆ ಸರ್ಕಾರ ಆದೇಶ
ಬಾಯಾರಿಕೆ ನೀಗಿಸಲು ದಿನಕ್ಕೆ 1 ಲೀಟರ್ ಬಿಯರ್ ಕುಡಿಯುವಂತೆ ಸರ್ಕಾರ ಆದೇಶ
Published on

ಪ್ರಮುಖ ಮುಖ್ಯಾಂಶಗಳು

  • ಉತ್ತರ ಕೊರಿಯಾದಲ್ಲಿ ವಿಪರೀತ ಬಿಸಿಲಿನ ಝಳ!
  • ಬಾಯಾರಿಕೆ ನೀಗಿಸಲು ದಿನಕ್ಕೆ 1 ಲೀಟರ್ ಬಿಯರ್ ಕುಡಿಯುವಂತೆ ಸರ್ಕಾರ ಆದೇಶ
  • ಆದರೆ, ಬಿಯರ್​ ಸೇವನೆ ಬಗ್ಗೆ ವೈದ್ಯಕೀಯ ವರದಿ ಹೇಳುವುದೇನು?
ಪ್ಯೊಂಗ್ಯಾಂಗ್: ಉತ್ತರ ಕೊರಿಯಾದಲ್ಲಿ ಉಷ್ಣಾಂಶ ಮಿತಿ ಮೀರುತ್ತಿರುವ ಹಿನ್ನಲೆಯಲ್ಲಿ ಅಲ್ಲಿನ ಸರ್ಕಾರ, ಪ್ರಜೆಗಳಿಗೆ ಬಿಸಿಲಿನ ತಾಪದಿಂದ ನೆಮ್ಮದಿ ಪಡೆಯಲು ಬಿಯರ್ (Beer Drinking in North Korea)​ ಸೇವಿಸುವಂತೆ ಸೂಚಿಸಿದೆ ಎಂದು ವರದಿಯಾಗಿದೆ.
ಸರ್ಕಾರಿ ಸುದ್ದಿ ವಾಹಿನಿಯಾದ ನಾರ್ಥ್ ಕೊರಿಯಾ ನ್ಯೂಸ್​​ನಲ್ಲಿ, ದಿನಕ್ಕೆ ಒಂದು ಲೀಟರ್​ ಬಿಯರ್​ ಕುಡಿದರೆ, ಬಿಸಿಲಿನ ತಾಪದಿಂದ ನೆಮ್ಮದಿ ಸಿಗುತ್ತದೆ ಎಂದು ಹೇಳಲಾಗಿದೆ.

ನೀರು, ಟೀ, ಬಿಯರ್​ ಕುಡಿಯುತ್ತಿರಿ!

ದೇಶದಲ್ಲಿ ಸೂರ್ಯನ ಶಾಖ ದಿನಕಳೆದಂತೆ ಹೆಚ್ಚಾಗುತ್ತಿದ್ದು, ಅಧಿಕ ಬಿಸಿಲಿನಿಂದ ಜನ ತತ್ತರಿಸುತ್ತಿದ್ದಾರೆ. ಹೀಗಾಗು ಉತ್ತರ ಕೊರಿಯಾ ಸರ್ಕಾರ ಅಲ್ಲಿಯ ಜನರಿಗೆ ದಿನಕ್ಕೆ ಒಂದು ಲೀಟರ್​ ಬಿಯರ್​ ಮತ್ತು ಕಾಲ-ಕಾಲಕ್ಕೆ ನೀರನ್ನು ಮತ್ತು ಚಹವನ್ನು ಸೇವಿಸುತ್ತಿರಿ ಎಂದು ಸೂಚನೆ ನೀಡಿದೆ.

ಇದರ ಜೊತೆಗೆ ಮಂಜುಗಡ್ಡೆ ಪೌಂಡರ್​ ಅನ್ನು, ಹಣ್ಣಿನ ರಸವನ್ನು ಮತ್ತು ಹಸುವಿನ ಹಾಲನ್ನು ಹೆಚ್ಚಿನದಾಗಿ ಸೇವಿಸಿದರೆ ಅಧಿಕ ತಾಪದಿಂದ ನೆಮ್ಮದಿ ಸಿಗಲಿದೆ ಎಂದು ಉತ್ತರ ಕೊರಿಯಾದ ಸುದ್ದಿ ವಾಹಿನಿ ಅಲ್ಲಿನ ಜನರಿಗೆ ತಿಳಿಸಿದೆ.


ಬಿಯರ್​ ಕುಡಿದರೆ ದೇಹ ತಂಪಾಗುತ್ತಾ?


ಈ ಸುದ್ದಿ ಈಗ ಪ್ರಪಂಚದಾದ್ಯಂತ ಎಲ್ಲಡೆಗೆ ವೈರಲ್​ ಆಗಿದ್ದು, ಜನರು ನಿಜಕ್ಕೂ ಬಿಯರ್ ಕುಡಿದರೆ ದೇಹ ತಂಪಾಗುತ್ತಾ? ಎಂಬ ಪ್ರಶ್ನೆ ಮತ್ತೆ ಬೆರಗನ್ನು ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ವೈದ್ಯಕೀಯ ತಜ್ಞರ ಪ್ರಕಾರ ಬಿಯರ್​​ ಕುಡಿದರೆ ದೇಹ ತಂಪಾಗುವ ಬದಲು ಇನ್ನಷ್ಟು ಹಿಟ್​ ಆಗುತ್ತದೆ.
ಬಿಯರ್​ ಅನ್ನು ಮುಖ್ಯವಾಗಿ ಸಿರಿ ಧಾನ್ಯಗಳಿಂದ ಮಾಡಿರುತ್ತಾರೆ. ಅವುಗಳಲ್ಲಿ ಅಧಿಕ ಉಷ್ಣಾಂಶವಿರುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿ ಅಲ್ಕೋಹಾಲ್​ ಅಂಶವಿರುವ ಕಾರಣ ಅದನ್ನು ಜೀರ್ಣ ಮಾಡಲು ಲಿವರ್​ ಅತ್ಯಧಿಕ ಶ್ರಮ ವಹಿಸಬೇಕಾಗುತ್ತದೆ. ಹೀಗಾಗಿ ಬಿಯರ್​ ಸೇವನೆಯಿಂದ ದೇಹಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ತಿಳಿದು ಬಂದಿದೆ.
ಬಿಯರ್​ ಅನ್ನು ಹೆಚ್ಚಾಗಿ ಫ್ರೀಜ್​ನಲ್ಲಿಟ್ಟು, ಐಸ್​ಚಿಲ್ಡ್​​ ಮಾಡಿ ಕುಡಿಯುವುದರಿಂದ ಬಿಯರ್​ ದೇಹಕ್ಕೆ ತಂಪಿನಾಂಶವನ್ನು ನೀಡಲಾಗುತ್ತದೆ ಎಂದು ಭಾವಿಸಲಾಗುತ್ತದೆ. ಆದರೆ ನಿಜಾರ್ಥದಲ್ಲಿ ಬಿಯರ್​ ಕುಡಿದರೆ ದೇಹ ಇನ್ನಷ್ಟು ಬೆಚ್ಚಗಾಗುತ್ತದೆ. ಅದರಲ್ಲೂ ಬೇಸಿಗೆ ಸಮಯದಲ್ಲಿ ಬಿಯರ್​ ಸೇವನೆ ಸೂಕ್ತವಲ್ಲ ಎಂದು ವೈದ್ಯರು ತಿಳಿಸಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net