ಮೋಹನ್ ಭಾಗವತ್ ಅಮೆರಿಕ ಭೇಟಿ: RSS ವಿರುದ್ಧ USCIRF ಗರಂ, ಸಂಘಕ್ಕೆ ನಿರ್ಬಂಧದ ಆಗ್ರಹ! Mohan Bhagwat

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಮೆರಿಕ ಭೇಟಿ
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಮೆರಿಕ ಭೇಟಿ
Published on

ಪ್ರಮುಖ ಮುಖ್ಯಾಂಶಗಳು

  • ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅಮೆರಿಕ ಭೇಟಿ
  • ಮೋಹನ್ ಭಾಗವತ್ ಆಗಮನಕ್ಕೆ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗ ವಿರೋಧ
ವಾಷಿಂಗ್ಟನ್​​: ಆಗಸ್ಟ್​ 29 ರಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್​ ಭಾಗವತ್ (Mohan Bhagwat)​ ನ್ಯೂಯಾರ್ಕ್​ಗೆ ಆಗಮಿಸಲಿದ್ದು, ಇದನ್ನು ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ವಿರೋಧಿಸಿ, ಆರ್​ಎಸ್​ಎಸ್​ ಕಾರ್ಯಚಟುವಿಕೆ ಮೇಲೆ ನಿರ್ಬಂಧ ಹೇರುವಂತೆ ಒತ್ತಾಯಿಸಿದೆ.
ಮೋಹನ್​ ಭಾಗವತ್​, ಅಮೇರಿಕನ್ ಹಿಂದೂಸ್ ಫಾರ್ ಎಂಗೇಜ್‌ಮೆಂಟ್ ಅಂಡ್ ಡೈಲಾಗ್ ಎಂಬ ಸಂಸ್ಥೆ ನಡೆಸಲಿದ್ದ ಸಾರ್ವತ್ರಿಕ ಏಕತೆ ಆಚರಣೆ (Universal Oneness Celebrations) ಗಳು ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಧಾರ್ಮಿಕ ಅಲ್ಪಸಂಖ್ಯಾತರ ವಿರೋಧಿ ಭಾಷಣ!

ಆರ್​ಎಸ್​ಎಸ್​ ಮುಖ್ಯಸ್ಥರಾದ ಮೋಹನ್​ ಭಾಗವತ್​ ಈ ಕಾರ್ಯಕ್ರಮಕ್ಕೆ ಆಗಮಿಸಿದರೆ, ಅಲ್ಲಿ ಅವರು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿ ಮಾಡಿಕೊಂಡು, ಅವರ ವಿರುದ್ಧ ಭಾಷಣ ಮಾಡುತ್ತಾರೆಂದು ಈ ಸಂಸ್ಥೆ ಅನುಮಾನ ವ್ಯಕ್ತಪಡಿಸಿದೆ.
ಎಕ್ಸ್​​ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ಯುಎಸ್ ಆಯೋಗ (USCIRF) ಅಧ್ಯಕ್ಷ ಜಿನೆ ಮಿಲ್ಸ್​​​ ಹಾಗೂ ಆಸಿಫ್​ ಮೊಹಮ್ಮದ್​​, ಭಾರತದ ಪ್ರಧಾನಿ ಕೂಡ ಇದೇ ಆರ್​ಎಸ್​ಎಸ್​ ಹಿನ್ನಲೆಯುಳ್ಳವರಾಗಿದ್ದಾರೆ. ಸಂಘದೊಂದಿಗೆ ಸಂಪರ್ಕದಲ್ಲಿರುವವರು ಕ್ರಿಶ್ಚಿಯನ್​ ಹಾಗೂ ಇಸ್ಲಾಂ ಸಮುದಾಯವನ್ನು ಗುರಿ ಮಾಡಿಕೊಂಡು ವಿರೋಧಿ ಹೇಳಿಕೆ ನೀಡುತ್ತಾರೆಂದು ಬರೆದುಕೊಂಡಿದ್ದಾರೆ.

USCIRF ಹೇಳಿಕೆಗೆ RSS ತಿರುಗೇಟು!

ಅಮೆರಿಕದ ಈ ಧಾರ್ಮಿಕ ಸಂಸ್ಥೆಯ ಹೇಳಿಕೆಯನ್ನು ತಳ್ಳಿಹಾಕಿರುವ ಭಾರತ, ನಮ್ಮ ದೇಶದಲ್ಲಿ ಎಲ್ಲಾ ಧರ್ಮದವರು ಒಗ್ಗಟ್ಟಾಗಿಯೇ ಇದ್ದೆವೆ. ನಮ್ಮಲ್ಲಿ ಯಾವುದೇ ಧಾರ್ಮಿಕ ಅಸಹಿಷ್ಣುತೆಯಿಲ್ಲ. ಭಾರತದ ಒಂದು ಸಂಘಟನೆಯ ಮುಖ್ಯಸ್ಥರು ನಿಮ್ಮ ದೇಶಕ್ಕೆ ಬಂದು ಅಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಲಯ ಅವಕಾಶ ನೀಡುವುದಿಲ್ಲ ಎಂದರೆ, ನಿಮ್ಮಲ್ಲಿ ಯಾವ ಮಟ್ಟದ ಧಾರ್ಮಿಕ ಸ್ವಾತಂತ್ರ್ಯವಿದೆ ಎಂದು ತಿಳಿಯುತ್ತದೆ ಎಂದು ಆರ್​ಎಸ್​ಎಸ್​ ತಿರುಗೇಟು ನೀಡಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net