ಅಮೆರಿಕ-ಇರಾನ್ ಶಾಂತಿ ಮಾತುಕತೆಗೆ ಇಸ್ರೇಲ್ ಕುತ್ತು: ಲೆಬನಾನ್ ರಾಜಧಾನಿ ಮೇಲೆ ಭೀಕರ ವೈಮಾನಿಕ ದಾಳಿ! Israel Airstrike Lebanon
ಅಮೆರಿಕ-ಇರಾನ್ ಶಾಂತಿ ಮಾತುಕತೆ ನಡುವೆ ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಧ್ಯಪ್ರಾಚ್ಯದಲ್ಲಿ ಮತ್ತೆ ಹೆಚ್ಚಿದ ಯುದ್ಧದ ಭೀತಿ!
ಅಮೆರಿಕ-ಇರಾನ್ ಶಾಂತಿ ಮಾತುಕತೆ ನಡುವೆ ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ
ಬೈರುತ್ನಲ್ಲಿದ್ದ ಹಿಜ್ಬೊಲ್ಲಾ ಅಡ್ಡೆ ಗುರಿಯಾಗಿಸಿ ನಡೆದ ದಾಳಿ
ಬೈರುತ್: ಒಂದು ಕಡೆ ಅಮೆರಿಕ ಇರಾನ್ ಜೊತೆ ಶಾಂತಿ ಮಾತುಕತೆ ನಡೆಸಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಶಮನ ಮಾಡಲು ಪ್ರಯತ್ನಿಸುತ್ತಿದ್ದರೆ, ಇನ್ನೊಂದು ಕಡೆ ಇಸ್ರೇಲ್ ಮತ್ತೆ ಲೆಬನಾನ್ (Israel Airstrike Lebanon) ಮೇಲೆ ದಾಳಿ ಮಾಡಿದೆ.
ಅಮೆರಿಕ ಮತ್ತು ಇರಾನ್ ಸುಮಾರು ನೂರು ದಿನಗಳನ್ನು ಕಳೆದಿರುವ ಈ ಸಂಘರ್ಷವನ್ನು ನಿಲ್ಲಿಸಲು, ಮಾತುಕತೆಗೆ ಮುಂದಾದ ಸಮಯದಲ್ಲಿ ಇಸ್ರೇಲ್ ನಡೆಸಿರುವ ಈ ದಾಳಿ ಶಾಂತಿ ಒಪ್ಪಂದಕ್ಕೆ ಮತ್ತೆ ಕುತ್ತುತರುವ ಸಮಸ್ಯೆಯಿದೆ ಎಂದು ಹೇಳಲಾಗುತ್ತಿದೆ.
ಲೆಬನಾನ್ನ ರಾಜಧಾನಿ ಆಗಿರುವ ಬೈರುತ್ ನಗರದ ಹೊರವಲಯ ಪ್ರದೇಶವಾದ ದಹಿಯೇ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.
ಈ ದಹಿಯೇ ಮೇಲೆ ಲೆಬನಾನಿನ ಶಸಸ್ತ್ರ ಗುಂಪಾದ ಹಿಜ್ಬೊಲ್ಲಾದ ಹಿಡಿತವಿದ್ದು, ಆದ್ದರಿಂದ ಇದನ್ನು ಗುರಿಯಾಗಿಸಿ ಇಸ್ರೇಲ್ ಮಿಸೈಲ್ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಇಸ್ರೇಲ್ ಪ್ರತಿಕ್ರಿಯೆ
ಈ ದಾಳಿ ಬಗ್ಗೆ ಮೌನ ಮುರಿದಿರುವ ಇಸ್ರೇಲ್ ಪ್ರಧಾನಮಂತ್ರಿ ಬೆಂಜಾಮಿನ್ ನೆತನ್ಯಾಹು, ಮತ್ತು ರಕ್ಷಣಾ ಸಚಿವ ಕಾಟ್ಜ್, ಹಿಜ್ಬೊಲ್ಲಾ ನಮ್ಮ ಪ್ರದೇಶದ ಮೇಲೆ ಡ್ರೋನ್ ದಾಳಿ ನಡೆಸಿದ ಹಿನ್ನಲೆ ಈ ದಾಳಿಯನ್ನು ನಾವು ಕೈಗೊಂಡಿದ್ದೆವೆಂದು ಹೇಳಿದ್ದಾರೆ.
ಉತ್ತರ ಇಸ್ರೇಲ್ ಮೇಲೆ ಹಿಜ್ಬೊಲ್ಲಾ ನಡೆಸಿದ ಡ್ರೋನ್ ದಾಳಿಯಲ್ಲಿ ಯಾವುದೇ ಸಾವು-ನೋವುಗಳು ವರದಿಯಾಗಿರಲಿಲ್ಲ. ಈಗ ಇಸ್ರೇಲ್ ನಡೆಸಿರುವ ದಾಳಿಯನ್ನು ನೋಡಿ ಸುಮ್ಮನೆ ಇರದ ಲೆಬನಾನ್ ಮತ್ತೆ ಪ್ರತಿದಾಳಿ ನಡೆಸಲಿದೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್).