ಕ್ರೀಡಾ ತಜ್ಞರ ಪ್ರಕಾರ ಫುಟ್ಬಾಲ್ ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲಿ ಜನಪ್ರಿಯವಾಗಿದೆ. FIFA ವಿಶ್ವಕಪ್ ಅನ್ನು ಕೋಟ್ಯಂತರ ಜನರು ನೇರವಾಗಿ ವೀಕ್ಷಿಸುತ್ತಾರೆ. ಜಾಹೀರಾತು, ಪ್ರಸಾರ ಹಕ್ಕುಗಳು ಮತ್ತು ಪ್ರಾಯೋಜಕತ್ವಗಳಿಂದ FIFAಗೆ ಅಪಾರ ಆದಾಯ ಬರುತ್ತದೆ. ಇನ್ನೊಂದೆಡೆ ಕ್ರಿಕೆಟ್ ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗಿದೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ, ನ್ಯೂಜಿಲೆಂಡ್ ಹಾಗೂ ಕೆಲವು ರಾಷ್ಟ್ರಗಳಲ್ಲಿ ಮಾತ್ರ ಕ್ರಿಕೆಟ್ ಹೆಚ್ಚು ಜನಪ್ರಿಯವಾಗಿದೆ.ಈ ಕಾರಣದಿಂದ FIFA ವಿಶ್ವಕಪ್ನ ಆದಾಯ ಮತ್ತು ಬಹುಮಾನ ಮೊತ್ತ ICC ಟೂರ್ನಿಗಳಿಗಿಂತ ಬಹಳ ಹೆಚ್ಚಾಗಿದೆ.