ಈ ಬಾರಿಯ ವಿಶ್ವಕಪ್ನಲ್ಲಿ ಬ್ರೆಜಿಲ್, ಅರ್ಜೆಂಟಿನಾ, ಫ್ರಾನ್ಸ್, ಇಂಗ್ಲೆಂಡ್, ಜರ್ಮನಿ, ಸ್ಪೇನ್, ಪೋರ್ಟುಗಲ್ ಹಾಗೂ ನೆದರ್ಲೆಂಡ್ಸ್ ತಂಡಗಳು ಪ್ರಶಸ್ತಿ ಗೆಲ್ಲುವ ಪ್ರಮುಖ ಸ್ಪರ್ಧಿಗಳಾಗಿವೆ. ಜೂನ್ 14ರಂದು ಬ್ರೆಜಿಲ್ ಮತ್ತು ಮೊರಾಕೊ ನಡುವಿನ ಪಂದ್ಯ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಜೂನ್ 17ರಂದು ಅರ್ಜೆಂಟಿನಾ ಮತ್ತು ಅಲ್ಜೀರಿಯಾ ಮುಖಾಮುಖಿಯಾಗಲಿವೆ. ಜೂನ್ 18ರಂದು ಇಂಗ್ಲೆಂಡ್ ಮತ್ತು ಕ್ರೊಯೇಶಿಯಾ ನಡುವಿನ ಪಂದ್ಯವೂ ವಿಶೇಷ ಗಮನ ಸೆಳೆಯುತ್ತಿದೆ.ಜೂನ್ 17ರಂದು ಫ್ರಾನ್ಸ್ ಮತ್ತು ಸೆನೆಗಲ್ ನಡುವಿನ ಪಂದ್ಯ ನಡೆಯಲಿದ್ದು, ಹಾಲಿ ವಿಶ್ವ ಫುಟ್ಬಾಲ್ ದಿಗ್ಗಜರ ಪ್ರದರ್ಶನವನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.