ಸೋಷಿಯಲ್​ ಮೀಡಿಯಾ ಮೂಲಕ ಡಿಜಿಟಲ್​ ಜಿಹಾದ್​​: ದಾವೂದ್​ ಸಂಪರ್ಕವಿದ್ದ 9 ಜನರ ಬಂಧನ; ಯಾರು ಈ ಶಹಜಾದ್ ಭಟ್ಟಿ? Shahzad Bhatti

ಭಾರತ ವಿರುದ್ಧದ ಸಂಚಿನ ರೂವಾರಿ ಶಹಜಾದ್ ಭಟ್ಟಿ
ಭಾರತ ವಿರುದ್ಧದ ಸಂಚಿನ ರೂವಾರಿ ಶಹಜಾದ್ ಭಟ್ಟಿ
Published on

ಪ್ರಮುಖ ಮುಖ್ಯಾಂಶಗಳು

  • ಭಾರತದಲ್ಲಿ ಉಗ್ರ ಕೃತ್ಯಕ್ಕೆ ಮುಂದಾಗಿದ್ದ 9 ಜನರ ಬಂಧನ
  • ಬಂಧಿತರಿಗೆ ಪಾಕಿಸ್ತಾನದ ಐಎಸ್​ಐ ಹಾಗೂ ದಾವೂದ್​ ಇಬ್ರಾಹಿಂ ಲಿಂಕ್​​
  • ಸೋಷಿಯಲ್​ ಮೀಡಿಯಾ ಸ್ಟಾರ್​ ಶಹಜಾದ್ ಭಟ್ಟಿ ಮೂಲಕ ಪಾಕ್​ ಸಂಪರ್ಕ
ಪಾಕಿಸ್ತಾನ: ಶನಿವಾರ (ಮೇ.30) ದೆಹಲಿ ಪೊಲೀಸರ ವಿಶೇಷ ಕಾರ್ಯಪಡೆಯು ಪಾಕಿಸ್ತಾನದ ಗುಪ್ತಚರ ಸಂಘಟನೆ ಐಎಸ್​ಐ ಹಾಗೂ ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಜೊತೆ ಸಂಪರ್ಕ ಹೊಂದಿದ್ದ 9 ಜನರನ್ನು ಬಂಧಿಸಿತ್ತು. ಬಂಧಿತರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಸ್ಪೋಟಕಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಬಂಧಿತರ ವಿಚಾರಣೆಯಲ್ಲಿ ಕೆಲ ಆಘಾತಕಾರಿ ಸಂಗತಿಗಳು ಹೊರ ಬಿದ್ದಿವೆ.

ದಾಳಿಯ ಹಿಂದಿದೆ ಭಟ್ಟಿಯ ಕೈವಾಡ!

ಬಂಧಿತ ಆರೋಪಿಗಳ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಇವರಿಗೆ ಪಾಕಿಸ್ತಾನದ ಸೋಷಿಯಲ್​ ಮೀಡಿಯಾ ಇನ್ಫ್ಲ್ಯೂಎನ್ಸರ್ ಶಹಜಾದ್ ಭಟ್ಟಿ (Shahzad Bhatti) ಮೂಲಕ ಐಎಸ್​ಐ ಹಾಗೂ ಭೂಗತ ಲೋಕದ ಪಾತಕಿಗಳ ಪರಿಚಯವಾಗಿರುವ ಸಂಗತಿ ತಿಳಿದು ಬಂದಿದೆ.
ಈ ಶಹಜಾದ್ ಭಟ್ಟಿಯ ಮಾತಿಗೆ ಮರುಳಾಗಿ, ಇವನಿಂದ ಪ್ರೇರಿತರಾದ ಬಂಧಿತರು ಭಾರತದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್​, ಪಂಜಾಬ್​ ಮೊದಲಾದ ಸ್ಥಳಗಳಲ್ಲಿ ಭಯೋತ್ಪಾದಕ ಕೃತ್ಯವನ್ನು ನಡೆಸಲು ಸಂಚನ್ನು ರೂಪಿಸಿ ಶಸ್ತ್ರಾಸ್ತ್ರಗಳ ಸಂಗ್ರಹಣೆಯಲ್ಲಿ ತೊಡಗಿದ್ದರೆಂಬ ಮಾಹಿತಿ ಹೊರಬಿದ್ದಿದ್ದೆ.

ಯಾರು ಈ ಶಹಜಾದ್ ಭಟ್ಟಿ?

ಪಾಕಿಸ್ತಾನ ಮೂಲದ ವ್ಯಕ್ತಿಯಾಗಿರುವ ಈ ಶಹಜಾದ್ ಭಟ್ಟಿ ಸೋಷಿಯಲ್​ ಮೀಡಿಯಾನಲ್ಲಿ ತನ್ನನ್ನು ತಾನು ಇಸ್ಲಾಂ ಹಾಗೂ ಪಾಕಿಸ್ತಾನದ ಉತ್ತರಾಧಿಕಾರಿ ಎಂಬಂತೆ ಬಿಂಬಿಸಿಕೊಳ್ಳುತ್ತಾನೆ.
ತಾನೊಬ್ಬ ಪಾಕಿಸ್ತಾನ ಮೂಲಕ ಉದ್ಯಮಿ ಎಂದು ಹೇಳಿಕೊಳ್ಳುವ ಈತ ಪಾಕ್​ನ ಸಿಂಧ್​ ಪ್ರಾಂತ್ಯಕ್ಕೆ ಸೇರಿದವನಾಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ವಿರುದ್ಧ ಮಾತನಾಡುತ್ತಾ, ಪಾಕಿಸ್ತಾನವನ್ನು ಹೊಗಳುತ್ತಾ, ಧಾರ್ಮಿಕ ಭಯೋತ್ಪಾದಕತೆಗೆ ಕುಮ್ಮಕ್ಕು ನೀಡುವ ವಿಡಿಯೋಗಳನ್ನು ಈತ ಹರಿ ಬಿಡುತ್ತಾನೆ.
2013 ರಲ್ಲಿ ದರೋಡೆ ಹಾಗು ಕಳ್ಳತನದ ಆರೋಪದಲ್ಲಿ ಈ ಶಹಜಾದ್ ಭಟ್ಟಿ ಪಾಕ್​ ಪೊಲೀಸರಿಗೆ ಅತಿಥಿಯಾಗಿದ್ದ ಎಂದು ಹೇಳಲಾಗುತ್ತದೆ, ಕಳ್ಳತನದ ಜೊತೆಗೆ ಅತ್ಯಾಚಾರದ ಆರೋಪಗಳು ಸಹ ಇವನ ಮೇಲಿದೆ. 2018 ರಲ್ಲಿ ಟಿಕ್​ಟಾಕ್​ ಟ್ರೆಂಡ್​ ಸಮಯದಲ್ಲಿ ಸೋಷಿಯಲ್ ಮೀಡಿಯಾ ಪ್ರವೇಶಿಸಿದ ಇತ ಇಸ್ಲಾಂ ಬಗ್ಗೆ ಹಾಗೂ ಪಾಕಿಸ್ತಾನ ಮತ್ತು ಭಾರತದ ಬಗ್ಗೆ ವಿಡಿಯೋ ಮಾಡಿ ಹರಿಬಿಡಲು ಪ್ರಾರಂಬಿಸಿದ.
ಕೆಲ ಮೂಲಗಳ ಪ್ರಕಾರ, ಇವನು ಲಾಹೋರ್​ ಭೂಗತ ಜಗತ್ತಿನಲ್ಲಿ ಸಹ ಸಕ್ರೀಯನಾಗಿದ್ದು, ಇವನಿಗೆ ಪಾಕಿಸ್ತಾನದ ಗುಪ್ತಚರ ಸಂಘಟನೆ ಐಎಸ್​ಐ ಲಿಂಕ್​ ಇದೆ ಎಂದು ಹೇಳಲಾಗುತ್ತದೆ. ಅದೇ ರೀತಿ ಇವನಿಗೆ ಭಾರತದ ಗ್ಯಾಂಗ್​ಸ್ಟರ್​ ಲಾರೆನ್ಸ್ ಬಿಷ್ಣೋಯ್​ ಜೊತೆ ಸಂಪರ್ಕವಿತ್ತು, ಆದರೆ 2025 ರಲ್ಲಿ ಪಹಲ್ಗಾಮ್ ದಾಳಿ ಬಳಿಕ ಬಿಷ್ಣೋಯ್​ ಗ್ಯಾಂಗ್​ ಜೊತೆ ಇತನ ಸ್ನೇಹ ಸಂಬಂಧ ಅಷ್ಟು ಸರಿಯಿಲ್ಲ ಎಂದು ಹೇಳಲಾಗುತ್ತದೆ.
ಇನ್ನೊಂದು ವರದಿ ಪ್ರಕಾರ, ಪಾಕಿಸ್ತಾನದ ಐಎಸ್​ಐ ಇವನ ಬೆಂಬಲಕ್ಕೆ ನಿಂತಿದ್ದು, ಸೋಷಿಯಲ್​ ಮೀಡಿಯಾ ಪ್ರಭಾವದ ಮೂಲಕ ಭಾರತದಲ್ಲಿರುವ ಯುವಕರನ್ನು ತಮ್ಮತ್ತ ಸೆಳೆದು ಡಿಜಿಟಲ್​ ಜಿಹಾದ್​ ನಡೆಸಲು ಇತನಿಗೆ ಸಹಕಾರ ನೀಡುತ್ತಿದೆ ಎಂದೂ ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಬಂಧಿತ ಅಪರಾಧಿಗಳಿಗೆ ಹಾಗೂ ಈ ಶಹಜಾದ್ ಭಟ್ಟಿಗೆ ಸಂಪರ್ಕವಿತ್ತು ಎಂದು ತನಿಖೆ ಹೇಳುತ್ತಿದ್ದು, ಇತನನ್ನು ಅವರು ಹೇಗೆ ಸಂಪರ್ಕಿಸಿದರು, ಶಸ್ತ್ರಾಸ್ತ್ರಗಳನ್ನು ಹೇಗೆ? ಎಲ್ಲಿಂದ ಖರೀದಿಸಿರು? ಇವರ ಯೋಜನೆ ಇನ್ನು ಏನೇನಿತ್ತು? ಎನ್ನುವುದು ಸಂಪೂರ್ಣ ತನಿಖೆ ನಂತರ ತಿಳಿಯಬೇಕಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net