ಫೆಬ್ರವರಿ ಕೊನೆಯಲ್ಲಿ ಯುದ್ಧ ಆರಂಭವಾದಾಗಿನಿಂದಲೂ ಚೀನಾ ಈ ಬಗ್ಗೆ ತಟಸ್ಥವಾಗಿತ್ತು. ಆದರೆ, ಈಗ ಅಮೆರಿಕವು ಇರಾನ್ ಬಂದರುಗಳಿಗೆ ವಿಧಿಸಿರುವ ನೌಕಾ ದಿಗ್ಬಂಧನದಿಂದ ಚೀನಾದ ಆರ್ಥಿಕತೆಗೂ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಮೌನ ಮುರಿದಿರುವ ಜಿನ್ಪಿಂಗ್, ವಿಶ್ವವು ಮತ್ತೆ ಕಾಡಿನ ಕಾನೂನಿಗೆ ಮರಳಲು ನಾವು ಬಿಡುವುದಿಲ್ಲ. ಅಂತಾರಾಷ್ಟ್ರೀಯ ನಿಯಮಗಳನ್ನು ಗಾಳಿಗೆ ತೂರಿ ಆಕ್ರಮಣ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.