

ಪ್ರಮುಖ ಮುಖ್ಯಾಂಶಗಳು
ಅದರೆ, ಇತ್ತೀಚೆಗೆ ಬೆಲ್ಜಿಯಂ ದೇಶದ ಮನೆಯೊಂದರಲ್ಲಿ ಭರ್ತಿ 100 ಕೋಟಿ ರೂಪಾಯಿ ಮೌಲ್ಯದ (100 Crore Gold in Belgium) ಚಿನ್ನದ ನಾಣ್ಯ ಮತ್ತು ಗಟ್ಟಿಗಳು ಪತ್ತೆಯಾಗಿದೆ.
ಈ ಕೆಲಸದಲ್ಲಿ ನಿರತನಾಗಿದ್ದ ಕೊಬೆ ಎಂಬ ಕಾರ್ಮಿಕನಿಗೆ ಮೊದಲು ಒಂದು ಪೌಂಡ್ನ ನಾಣ್ಯ ಕಾಣಿಸಿದೆ. ನೂರಾರು ವರ್ಷದ ಪುರಾತನ ಬಂಗಲೆ, ಯಾವುದೇ ಹಳೆಯ ನಾಣ್ಯವಿರಬೇಕೆಂದು ಆತ ಭಾವಿಸಿದ್ದಾನೆ. ಆದರೆ ಡ್ರಿಲ್ಲಿಂಗ್ ಕೆಲಸ ಮುಂದುವರಿದಂತೆ ಚಿನ್ನದ ನಾಣ್ಯಗಳು ಹಾಗೂ ಚಿನ್ನದ ಬಿಸ್ಕತ್ತುಗಳ ಮಳೆಯೇ ಸುರಿದಿದೆ. ಇದನ್ನು ನೋಡಿ ದಂಗಾದ ಕಾರ್ಮಿಕರು ಕೂಡಲೇ ತಮ್ಮ ಮ್ಯಾನೇಜರ್ನನ್ನು ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ.
ಹಾಗೂ ಇಷ್ಟೊಂದು ನಿಧಿಯನ್ನು ಸಾಗಿಸುವುದು ಕಷ್ಟವಿತ್ತು, ಹಾಗೆಯೇ ಅದು ಕಳ್ಳತನ ಎನಿಸಿಕೊಳ್ಳುತ್ತಿತ್ತು. ಆದರೆ ನನ್ನ ಜನ ಅದಕ್ಕೆ ಯಾವುದೇ ಅವಕಾಶವನ್ನು ನೀಡದೇ ಅಧಿಕಾರಿಗಳಿಗೆ ಮಾಹಿತಿ ತಲುಪಿಸಿದ್ದಾರೆಂದು ಹೇಳಿದ್ದಾರೆ.