

ಪ್ರಮುಖ ಮುಖ್ಯಾಂಶಗಳು
ಆದರೆ ತಲುಪಿದ ಆಹಾರವನ್ನು ತೆರೆದು ನೋಡಿದಾಗ, ಅದು ಸಂಪೂರ್ಣವಾಗಿ ಹಳಸಿಹೋಗಿದ್ದು, ಭೀಕರ ದುರ್ವಾಸನೆ ಬೀರುತ್ತಿತ್ತು. ಈ ಬಗ್ಗೆ ಗ್ರಾಹಕರು ನೇರವಾಗಿ ಆಹಾರ ಸುರಕ್ಷತಾ ಇಲಾಖೆಗೆ ದೂರು ದಾಖಲಿಸಿದ್ದಾರೆ.
ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಸಿಟಿ ಸೆಂಟರ್‌ನಲ್ಲಿರುವ ಕೆಎಫ್‌ಸಿ ಶಾಖೆಗೆ ಮುತ್ತಿಗೆ ಹಾಕಿ ಪರಿಶೀಲನೆ ನಡೆಸಿದ್ದಾರೆ. ಅಡುಗೆ ಕೋಣೆ, ಸ್ಟೋರ್ ರೂಂ, ಕೋಲ್ಡ್ ಸ್ಟೋರೇಜ್, ಡೀಪ್ ಫ್ರೀಜರ್ ಹಾಗೂ ಫ್ರೈಡ್ ಚಿಕನ್ ಸ್ಟಾಕ್ ಇರುವ ಜಾಗಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.