ಅದು ಎರಡು ಲಕ್ಷದ ಪೋನ್​, ಫೋಟೊ ಬರುತ್ತೆ ಬಿಡಿ: ಗೆಳತಿ ಸಮ್ರೀನ್​ ಜತೆ ಏರ್​ಪೋರ್ಟ್​ನಲ್ಲಿ ಅರ್ಷದೀಪ್ ಪ್ರತ್ಯಕ್ಷ; ಪಾಪಾರಾಜಿಗಳಿಗೆ ಹೇಳಿದ್ದೇನು? Arshdeep Singh on Paparazzi

ಗೆಳತಿ ಸಮ್ರೀನ್ ಕೌರ್ ಜತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಕ್ರಿಕೆಟಿಗ ಅರ್ಷದೀಪ್ ಸಿಂಗ್
ಗೆಳತಿ ಸಮ್ರೀನ್ ಕೌರ್ ಜತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಕ್ರಿಕೆಟಿಗ ಅರ್ಷದೀಪ್ ಸಿಂಗ್
Published on

ಪ್ರಮುಖ ಮುಖ್ಯಾಂಶಗಳು

  • ಗೆಳತಿ ಸಮ್ರೀನ್ ಕೌರ್ ಜತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಕ್ರಿಕೆಟಿಗ ಅರ್ಷದೀಪ್ ಸಿಂಗ್
  • ಪಾಪರಾಜಿಗಳ ಜತೆ ನಡೆಸಿದ ತಮಾಷೆಯ ಸಂಭಾಷಣೆ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ (Arshdeep Singh on Paparazzi) ತಮ್ಮ ಅದ್ಭುತ ಬೌಲಿಂಗ್ ಜತೆಗೆ ಆಗಾಗ್ಗೆ ತಮ್ಮ ತಮಾಷೆಯ ಸ್ವಭಾವದಿಂದಲೂ ಸುದ್ದಿಯಾಗುತ್ತಿರುತ್ತಾರೆ. ಸದ್ಯ ವಿಮಾನ ನಿಲ್ದಾಣದಲ್ಲಿ ತಮ್ಮ ಗೆಳತಿ ಸಮ್ರೀನ್ ಕೌರ್ ಜತೆ ಕಾಣಿಸಿಕೊಂಡಿರುವ ಅರ್ಷದೀಪ್, ಪಾಪರಾಜಿಗಳ ಜತೆ ನಡೆಸಿದ ಹಾಸ್ಯಮಯ ಸಂಭಾಷಣೆಯೊಂದು ಈಗ ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್ ಆಗುತ್ತಿದೆ.

ಗೆಳತಿ ಸಮ್ರೀನ್ ಜತೆ ಏರ್‌ಪೋರ್ಟ್‌ನಲ್ಲಿ ಪ್ರತ್ಯಕ್ಷ!

ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಬೌಲರ್ ಆಗಿರುವ ಅರ್ಷದೀಪ್ ಸಿಂಗ್, ನಟಿ ಹಾಗೂ ಮಾಡೆಲ್ ಸಮ್ರೀನ್ ಕೌರ್ ಜತೆ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದ ವೇಳೆ ಅಲ್ಲಿ ಕಾಯುತ್ತಿದ್ದ ಕ್ಯಾಮೆರಾ ಕಣ್ಣುಗಳಿಗೆ ಅತಿಥಿಯಾಗಿದ್ದಾರೆ. ಜೋಡಿಯು ಹೊರಬರುತ್ತಿದ್ದಂತೆ ನೆರೆದಿದ್ದ ಫೋಟೋಗ್ರಾಫರ್‌ಗಳು ಏಕಾಏಕಿ ಫೋಟೋಗಳಿಗೆ ಪೋಸ್ ನೀಡುವಂತೆ ಮುತ್ತಿಗೆ ಹಾಕಿದ್ದಾರೆ.
ಜನರ ಗುಂಪು ಹಾಗೂ ಕ್ಯಾಮೆರಾಗಳ ಅಬ್ಬರವನ್ನು ನೋಡಿ ಕೊಂಚ ಹೊತ್ತು ನಿಂತ ಅರ್ಷದೀಪ್, ಫೋಟೋಗ್ರಾಫರ್‌ಗಳ ಜತೆ ಮಾತನಾಡಿ ಮುಂದುವರಿದಿದ್ದಾರೆ. ಆದರೆ ಫೋಟೋ ಸಾಕು ಎನಿಸಿದರೂ ಬಿಡದೆ ಮತ್ತಷ್ಟು ಫೋಟೋಗಳಿಗಾಗಿ ಪಾಪರಾಜಿಗಳು ಹಿಂದೆ ಬಿದ್ದಾಗ, ಅರ್ಷದೀಪ್ ನೀಡಿದ ಕಮೆಂಟ್ ಎಲ್ಲರ ಮುಖದಲ್ಲೂ ನಗು ಮೂಡಿಸಿದೆ.

ಪಾಪರಾಜಿಗಳಿಗೆ ಅರ್ಷದೀಪ್ ತಮಾಷೆಯ ಮಾತು!

ಛಾಯಾಗ್ರಾಹಕರು ನಿರಂತರವಾಗಿ ಫೋಟೋ ಕ್ಲಿಕ್ಕಿಸುವಂತೆ ವಿನಂತಿಸುತ್ತಿದ್ದಾಗ, ತಾಳ್ಮೆಯಿಂದ ನಗುತ್ತಲೇ ಅರ್ಷದೀಪ್, ಎರಡು ಲಕ್ಷ ರೂಪಾಯಿ ಪೋನ್​ಗಳು ನಿಮ್ಮಲಿವೇ, ನಮ್ಮ ಪೋಟೊ ಬಂದೇ ಬರುತ್ತೆ, ಚಿಂತೆ ಬೇಡ ಎಂದಿದ್ದಾರೆ.

ಅವರ ಈ ಮುಕ್ತ ಹಾಗೂ ಹಾಸ್ಯಭರಿತ ಪ್ರತಿಕ್ರಿಯೆ ಕೇಳಿ ಅಲ್ಲಿದ್ದ ಎಲ್ಲರೂ ನಕ್ಕಿದ್ದಾರೆ. ಮೈದಾನದಲ್ಲಿ ಎಷ್ಟೇ ಗಂಭೀರವಾಗಿ ವಿಕೆಟ್ ವೇಟೆಯಲ್ಲಿರುವ ಬೌಲರ್ ಆದರೂ, ವೈಯಕ್ತಿಕ ಬದುಕಿನಲ್ಲಿ ಎಷ್ಟು ಸರಳ ಹಾಗೂ ತಮಾಷೆಯ ಮನುಷ್ಯ ಎಂಬುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ. ಸಿಬ್ಬಂದಿಯನ್ನು ಮಾತನಾಡಿಸಿ ಕೆಲವೇ ಕ್ಷಣಗಳಲ್ಲಿ ಅವರು ಅಲ್ಲಿಂದ ತೆರಳಿದ್ದಾರೆ.


ಅರ್ಷದೀಪ್-ಸಮ್ರೀನ್ ಪ್ರೇಮಕಥೆ

ಇನ್ನು ಅರ್ಷದೀಪ್ ಜತೆ ಕಾಣಿಸಿಕೊಂಡ ಸಮ್ರೀನ್ ಕೌರ್ ಯಾರೆಂಬ ಕುತೂಹಲ ಅಭಿಮಾನಿಗಳಲ್ಲಿ ಬಹಳ ದಿನಗಳಿಂದಲೇ ಇತ್ತು. ಕೆಲವು ತಿಂಗಳುಗಳ ಹಿಂದೆ ಅರ್ಷದೀಪ್ ತಮ್ಮ ಸ್ನ್ಯಾಪ್‌ಚಾಟ್‌ನಲ್ಲಿ ಯುವತಿಯೋರ್ವಳ ಕೈ ಹಿಡಿದಿರುವ ಫೋಟೋ ಹಾಕುವ ಮೂಲಕ ವದಂತಿಗಳಿಗೆ ಮುನ್ನುಡಿ ಬರೆದಿದ್ದರು. ಆ ಹಸ್ತದ ಮೇಲೆ ಇದ್ದ ಹಚ್ಚೆಯನ್ನು ಗಮನಿಸಿದ ಅಭಿಮಾನಿಗಳು ಅದು ಸಮ್ರೀನ್ ಕೌರ್ ಅವರದ್ದೇ ಎಂದು ಗುರುತಿಸಿದ್ದರು.
ಅಲ್ಲದೆ, ಐಪಿಎಲ್ 2026ರ ಪಂದ್ಯಗಳ ವೇಳೆ ಸಮ್ರೀನ್ ಪಂಜಾಬ್ ಕಿಂಗ್ಸ್ ಪಂದ್ಯಗಳಲ್ಲಿ ಸ್ಟ್ಯಾಂಡ್ಸ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಈ ಜೋಡಿಯ ಗುಪ್ತ ಪ್ರೇಮಕಥೆ ಹೊರಬಂದಿತ್ತು. ಕೊನೆಗೂ ಜುಲೈ ತಿಂಗಳಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಸಮ್ರೀನ್ ಜತೆಗಿನ ಸುಂದರ ಫೋಟೋ ಹಂಚಿಕೊಂಡಿದ್ದ ಅರ್ಷದೀಪ್, "ನನ್ನ ವ್ಯಕ್ತಿ" ಎಂದು ಬರೆಯುವ ಮೂಲಕ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಜಗತ್ತಿಗೆ ಸಾರಿದ್ದರು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net