ತೊಗರ್ಸಿ ವೃತ್ತದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ

cc camera
ತೊಗರ್ಸಿ ಗ್ರಾಮದಲ್ಲಿ ಸಿಸಿ ಕ್ಯಾಮರಾ ಅಳವಡಿಸಿರುವುದು.
Published on

ಶಿಕಾರಿಪುರ: ಸಮೀಪದ ತೊಗರ್ಸಿಯಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಜಾಸ್ತಿಯಾದ ಹಿನ್ನೆಲೆಯಲ್ಲಿ ತೊಗರ್ಸಿ ಗ್ರಾಮ ಪಂಚಾಯಿತಿಯಿಂದ ವೃತ್ತದಲ್ಲಿ ನಾಲ್ಕು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಯಿತು.

ತೊಗರ್ಸಿ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಬೆಳ್ಳಿ ವಸ್ತುಗಳು ಕಳವಾದ ನಂತರ ನಾಲ್ಕೈದು ಮನೆಗಳಲ್ಲಿ ಕಳ್ಳತನ ಮಾಡಲಾಗಿತ್ತು. ಇದು ಗ್ರಾಪಂ ಮತ್ತು ಪೊಲೀಸ್ ಸಿಬ್ಬಂದಿಗೆ ತಲೆನೋವಾಗಿತ್ತು. ಈ ಹಿನ್ನೆಲೆಯಲ್ಲಿ ಕ್ಯಾಮರಾ ಅಳವಡಿಸಲಾಗಿದೆ.
ವೃತ್ತದಲ್ಲಿ ದೇವಸ್ಥಾನದ ಕಡೆಗೆ ಒಂದು, ದೇವಸ್ಥಾನದ ವಿರುದ್ಧ ದಿಕ್ಕಿಗೆ ಇನ್ನೊಂದು, ಆನವಟ್ಟಿ ಕಡೆಗೆ ಮತ್ತೊಂದು, ನಾಲ್ಕನೇ ಕ್ಯಾಮರಾವನ್ನು ಶಿರಾಳಕೊಪ್ಪ ರಸ್ತೆ ಕಡೆಗೆ ಅಳವಡಿಸಲಾಗಿದೆ. ಮುಂದೆ ಗ್ರಾಮ ಪಂಚಾಯಿತಿ ಎದುರಿಗೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ರಾಜ್ಯ ಹೆದ್ದಾರಿ ಹಾದುಹೋಗಿರುವುದರಿಂದ ವಾಹನಗಳು ಅತಿ ವೇಗವಾಗಿ ಸಂಚರಿಸುತ್ತವೆ. ಇದರಿಂದ ಅಪಘಾತಗಳಾಗಿ ವಾಹನಗಳನ್ನು ನಿಲ್ಲಿಸದಂತೆ ಪರಾರಿಯಾಗುತ್ತಿದ್ದರು. ಈಗ ಸಿಸಿ ಕ್ಯಾಮರಾ ಅಳವಡಿಕೆಯಿಂದ ಕಡಿವಾಣ ಬೀಳಲಿದೆ.
ಗ್ರಾಪಂ ಅಧ್ಯಕ್ಷ ಎಸ್.ನಿರಂಜನ್ ಮಾತನಾಡಿ, ಇದು ನನ್ನ ಬಹುದಿನಗಳ ಕನಸಾಗಿತ್ತು. ನಿರಂತರ ಕಳ್ಳತನ ಪ್ರಕರಣಗಳಿಂದ ಜನ ಆತಂಕಗೊಂಡಿದ್ದರು. ಕ್ಯಾಮರಾ ಅಳವಡಿಕೆಯಿಂದ ವ್ಯಾಪಾರಿಗಳು, ಜನರಲ್ಲಿ ಆತಂಕ ಕೊಂಚ ದೂರವಾದಂತಿದೆ. ಹೆದ್ದಾರಿಯಲ್ಲಿ ಕೆಲವರು ಅಪಘಾತ ಮಾಡಿ ಪರಾರಿಯಾಗುತ್ತಿದ್ದರು. ಈಗ ಅದು ಸಾಧ್ಯವಾಗುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net