ಇನ್​ಸ್ಟಾಗ್ರಾಮ್​​ ಲವ್​, ಯುವತಿ ನೋಡ್ತಿದ್ದಂತೆ ನೀನು ಬೇಡಾ ಎಂದ; ಮದುವೆ ಆಗದಿದ್ದರೆ ಸಾಯ್ತೀನೆಂದು ಬಿಲ್ಡಿಂಗ್ ತುದಿಗೆ ನಿಂತಳು

instagram love
Published on

ಮೈಸೂರು: ಪ್ರೀತಿಸಿದ ಯುವಕ ಕೈ ಕೊಟ್ಟಿದ್ದಕ್ಕೆ ಮಹಿಳೆಯೊಬ್ಬಳು ಮದುವೆ ಆಗದಿದ್ದರೆ ಬಿಲ್ಡಿಂಗ್ ಮೇಲಿಂದ ಸಾಯ್ತೀನಿ ಎಂದು ಕಟ್ಟಡದ ತುದಿಯಲ್ಲಿ ನಿಂತು ಬೆದರಿಕೆ ಹಾಕಿದ್ದಾಳೆ. ಈ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ಬಿಹಾರ ಮೂಲದ ಆಸಿಬೂರ್ ರೆಹಮಾನ್ ಹಾಗೂ ನಾಸಿಂ ಬೇಗಂ (31) ನಡುವೆ ಕಳೆದ ಒಂದು ವರ್ಷದಿಂದ ಇನ್​​ಸ್ಟಾಗ್ರಾಮ್​ ಮೂಲಕವಾಗಿ ಲವ್ ಆಗಿದೆ. ಆಸಿಬೂರ್ ರೆಹಮಾನ್, ಹಿಮ್ಮಾವು ಗ್ರಾಮದಲ್ಲಿ ವಾಸವಾಗಿದ್ದು, ಏಷಿಯನ್ ಪೈಂಟ್ಸ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡ್ತಿದ್ದಾನೆ.

ಬಿಹಾರದಿಂದ ನಂಜನಗೂಡಿಗೆ ಬಂದಿರುವ ನಾಸಿಂ ಬೇಗಂನನ್ನು ಕಂಡ ಮೇಲೆ ಆಸಿಬೂರ್ ರೆಹಮಾನ್ ನಿರಾಕರಣೆ ಮಾಡಿದ್ದಾನೆ. ಇದಕ್ಕೆ ಕಾರಣ ವಯಸ್ಸಿನ ಅಂತರ ಹೆಚ್ಚಿದೆ ಎಂದು ಮದುವೆಯಾಗಲು ಸಾಧ್ಯವಿಲ್ಲ ಎಂದು ಯುವಕ ಹೇಳಿದ್ದಾನೆ.

ಈ ವೇಳೆ ಯುವಕನ ಮಾತಿನಿಂದ ಸಿಟ್ಟಿಗೆದ್ದ ಯುವತಿ ಮದುವೆ ಮಾಡಿಕೊಳ್ಳುವಂತೆ  ಹೈಡ್ರಾಮ ಮಾಡಿದ್ದಾಳೆ. ಮದುವೆ ಆಗು ಇಲ್ಲದಿದ್ದರೆ ಬಿಲ್ಡಿಂಗ್ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನು ಮಾಡಿದ್ದು, ನಂಜನಗೂಡು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ವಶದಲ್ಲಿ ಮಹಿಳೆ ಇದ್ದಾಳೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net