More

    ನೀರಿನ ಕೊರತೆಗೆ ವಿನೂತನ ಉಪಾಯ; ಎಸಿ ನೀರು ಹೀಗೆ ಬಳಸಿ ಎಂದ್ರು ಆನಂದ್ ಮಹೀಂದ್ರಾ

    ನವದೆಹಲಿ: ಸುಡು.. ಸುಡು ಬೀಸಿಲು ಹೆಚ್ಚಾಗಿದೆ. ಬೀಸಿಲಿನ ಧಗೆ ಜತೆ ನೀರಿನ ಕೊರತೆ ಕೂಡಾ ಉಂಟಾಗಿದೆ. ಬೆಂಗಳೂರಿನ ಸದ್ಯದ ನೀರಿನ ಪರಿಸ್ಥಿತಿಯ ಬಗ್ಗೆ ಹೇಳಬೇಕಾಗಿಲ್ಲ. ನೀರಿನ ಕೊರತೆಗೆ ಸಂಬಂಧಿಸಿದ ಸುದ್ದಿಗಳನ್ನು ನಾವು ಕೇಳಿದ್ದೇವೆ, ನೋಡಿದ್ದೇವೆ ಈ ಹಿನ್ನೆಲೆಯಲ್ಲಿ ನೀರನ್ನು ಮಿತವಾಗಿ ಬಳಸುವುದು ಹೇಗೆ ಎಂಬ ಚರ್ಚೆ ಶುರುವಾಗಿದೆ. ಇದರೊಂದಿಗೆ, ನೀರನ್ನು ಉಳಿಸುವುದು ಹೇಗೆ ಎನ್ನುವ ಪ್ರಶ್ನೆಗೆ ಉದ್ಯಮಿ ಆನಂದ್ ಮಹೀಂದ್ರಾ ಅವರು ತಿಳಿಸಿದ್ದಾರೆ.

    ಬೇಸಿಗೆಯಲ್ಲಿ ಎಸಿ ಬಳಸುವುದು ಸಾಮಾನ್ಯ. ಆದರೆ ಎಸಿಗಳಿಂದ ಹೊರಬರುವ ನೀರು ವ್ಯರ್ಥವಾಗುತ್ತಿದೆ.  ಈ ನೀರನ್ನು ಸರಿಯಾದ ರೀತಿಯಲ್ಲಿ ಬಳಸಬಹುದು ಎಂಬುದನ್ನು ಈ ವೀಡಿಯೋದಲ್ಲಿ ತೋರಿಸಲಾಗಿದೆ.

    ಎಸಿ ಘಟಕದಿಂದ ಹೊರ ಬರುವ ನೀರೆಲ್ಲ ಪೈಪ್ ನಲ್ಲಿ ತುಂಬುವ ವ್ಯವಸ್ಥೆ ಮಾಡಲಾಗಿದೆ. ಅದರ ಕೊನೆಯಲ್ಲಿ ಸಣ್ಣ ಟ್ಯಾಪ್ ಅನ್ನು ಅಳವಡಿಸಲಾಗಿದೆ. ಈ ರೀತಿಯಲ್ಲಿ ಎಸಿಯಿಂದ ಹೊರಬರುವ ನೀರನ್ನು ಕೆಳಗೆ ಟ್ಯಾಪ್ ಮೂಲಕ ಯಾವುದಾದರೂ ಪಾತ್ರೆಗಳಿಗೆ ಹಿಡಿದಿಟ್ಟುಕೊಳ್ಳಬಹುದು. ಅಥವಾ ಎಸಿ ಕಂಡೆನ್ಸರ್​ನಿಂದ ಸಣ್ಣ ಪೈಪ್ ಮೂಲಕ ನೇರವಾಗಿ ಯಾವುದಾದರೂ ದೊಡ್ಡ ಡ್ರಮ್​ಗೆ ಬಂದು ಬೀಳುವಂತೆಯೂ ಮಾಡಬಹುದು. ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿರುವ ಆನಂದ್ ಮಹೀಂದ್ರಾ ಅವರು, ‘ಭಾರತದಲ್ಲಿ ಎಸಿ ಬಳಸುವ ಎಲ್ಲೆಡೆ ಇದೇ. ಆದ್ರೆ ಈ ರೀತಿಯ ವ್ಯವಸ್ಥೆ ಮಾಡಬೇಕು. ನೀರು ಅಮೂಲ್ಯವಾದುದು. ಇದನ್ನು ಎಚ್ಚರಿಕೆಯಿಂದ ಸಂಗ್ರಹಿಸಬೇಕು ಎಂದಿದ್ದಾರೆ. ನೀರನ್ನು ಕೊಂಚ ಮಟ್ಟಿಗೆ ಆದ್ರು ಹೇಗೆ ಉಳಿಸ ಬಹುದು ,ಮತ್ತು ಹೇಗೆ ಮರು ಬಳಕೆ ಮಾಡಬಹುದು ಎನ್ನುವುದನ್ನು ಇಲ್ಲಿ ತೋರಿಸಲಾಗಿದೆ.

    ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ನೀರಿನ ಬವಣೆ ನೀಗಿಸಲು ಇದು ಕೂಡ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ನೀರನ್ನು ತೋಟಗಾರಿಕೆ ಹಾಗೂ ಇತರೆ ವಾಷಿಂಗ್ ಉದ್ದೇಶಗಳಿಗೂ ಬಳಸಬಹುದು ಎಂಬುದು ನೆಟಿಜನ್ ಗಳ ಅಭಿಪ್ರಾಯವಾಗಿದೆ.

    ಗಾಯಕಿ ಮಂಗ್ಲಿ ಕಾರಿಗೆ ಭೀಕರ ಅಪಘಾತ; ಮೂವರು ಆಸ್ಪತ್ರೆಗೆ ಶಿಫ್ಟ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts