ಪೌರ ಕಾರ್ಮಿಕರು ದೇಶದ ಬೆನ್ನೆಲುಬು

02 BIRUR 01 purasabhe
ಬೀರೂರು ಪುರಸಭೆ ಸಭಾಂಗಣದಲ್ಲಿ ಮಹಿಳಾ ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು. ವನಿತಾ, ನಳಿನಾ ನಾಗರಾಜ್, ಸವಿತಾ ರಮೇಶ್, ಜಿ.ಪ್ರಕಾಶ್ ಇದ್ದರು.
Published on

ಬೀರೂರು: ದೇಶದ ಉನ್ನತ ಸ್ಥಾನದಿಂದ ಪೌರ ಕಾರ್ಮಿಕರವರೆಗೆ ಎಲ್ಲ ಕ್ಷೇತ್ರದಲ್ಲೂ ಮಹಿಳೆ ತನ್ನದೇ ಆದ ಛಾಪು ಮೂಡಿಸಿದ್ದು ಹೆಣ್ಣು ಅಬಲೆಯಲ್ಲ ಸಬಲೆ ಎಂಬುದನ್ನು ಸಾಬೀತುಪಡಿಸಿದ್ದಾಳೆ ಎಂದು ಪುರಸಭೆ ನೂತನ ಅಧ್ಯಕ್ಷೆ ವನಿತಾ ಮಧುಬಾವಿಮನೆ ಹೇಳಿದರು.
ಪುರಸಭೆ ಸಭಾಂಗಣದಲ್ಲಿ ಸೋಮವಾರ ಇನ್ನಿರ್ ವ್ಹೀಲ್ ಸಂಸ್ಥೆಯಿಂದ ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ರಕ್ಷಣೆಗೆ ಸೈನಿಕರು, ಅನ್ನ ನೀಡುವ ರೈತರು ಹೇಗೆ ಬೆನ್ನೆಲುಬಾಗಿದ್ದಾರೋ ಅದೇ ರೀತಿ ಪೌರ ಕಾರ್ಮಿಕರು ಕೂಡ ದೇಶದ ಬೆನ್ನೆಲುಬು. ಪಟ್ಟಣದ ಸೌಂದರ್ಯ ಹೆಚ್ಚಿಸುವಲ್ಲಿ ಶ್ರಮ ವಹಿಸುವ ಅವರು ಕರೋನಾ ಸಂದರ್ಭದಲ್ಲಿ ್ರಂಟ್‌ಲೈನ್ ವಾರಿಯರ್ಸ್‌ ಆಗಿ ಕಾರ್ಯನಿರ್ವಹಿಸಿದರು. ಅವರಿಗೆ ಗೌರವ ಸೂಚಿಸುತ್ತಿರುವುದು ಶ್ಲಾಘನೀಯ ಎಂದರು.
ಪುರಸಭೆ ಮಾಜಿ ಅಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ, ಇನ್ನರ್ ವ್ಹೀಲ್ ಸಮಾಜಮುಖಿ ಕೆಲಸಗಳಿಂದ ಗುರುತಿಸಿಕೊಂಡಿದ್ದು ಸಾಮಾಜಿಕ ಕಳಕಳಿಯ ಮನೋಭಾವ ಹೊಂದಿದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾತನಾಡಿ, ಕುಟುಂಬಗಳ ಸಂಪೂರ್ಣ ಜವಾಬ್ದಾರಿ ಹೊಂದಿರುವ ಮಹಿಳೆ ಮಕ್ಕಳ ಲಾಲನೆ ಪಾಲನೆ, ಕುಟುಂಬದ ನಿರ್ವಹಣೆಯ ಜತೆಗೆ ಹಲವು ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾಳೆ. ಸರ್ಕಾರದ ಆದೇಶದಂತೆ ಸೆ.15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತದೆ. ಅಂದು ಮಾನವ ಸರಪಳಿ ರಚಿಸುವ ಮೂಲಕ ಬೆಂಬಲ ಸೂಚಿಸಬೇಕು. ಇದಕ್ಕೆ ಎಲ್ಲ ಸಂಘ ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಇನ್ನರ್ ವ್ಹೀಲ್ ಅಧ್ಯಕ್ಷೆ ನಳಿನಾ ನಾಗರಾಜ್ ಮಾತನಾಡಿದರು. ವನಿತಾ ಮಧುಬಾವಿಮನೆ ಅವರನ್ನು ಇನ್ನರ್‌ವ್ಹೀಲ್‌ಯಿಂದ ಸನ್ಮಾನಿಸಲಾಯಿತು. ಪುರಸಭೆ ಸದಸ್ಯರಾದ ಬಿ.ಆರ್.ಮೋಹನ್ ಕುಮಾರ್, ಮಾನಿಕ್ ಬಾಷಾ, ರಘು, ರವಿಕಾಂತ್ ರಾತೋಡ್, ರಾಗಿಣಿ, ಕೃಷ್ಣವೇಣಿ, ಸುಧಾ, ಕಲ್ಪಾನಾ ಪತ್ರೆ, ಗಾಯತ್ರಿ ಚಂದ್ರಶೇಖರ್, ಸ್ವರ್ಣಾ ಗುರುನಾಥ, ಪುಷ್ಪಾ ಇನ್ನಿತರರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net