

ಕರೊನಾ ಸೋಂಕಿತ ವ್ಯಕ್ತಿಯ ಸೀನು, ಕೆಮ್ಮುವಿಕೆಯಿಂದ ವೈರಾಣು ಎಂಟು ಮೀಟರ್ವರೆಗೂ ಸಿಡಿಬಲ್ಲದು ಮತ್ತು ಇದು ಗಾಳಿಯಲ್ಲಿ ಒಂದು ತಾಸು ಇರಬಲ್ಲದು ಎಂದು ಅಮೆರಿಕದ ಮಸಾಚುಸೆಟ್ಸ್ ತಾಂತ್ರಿಕ ಸಂಸ್ಥೆಯ (ಎಂಐಟಿ) ವಿಜ್ಞಾನಿಗಳು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಮೆರಿಕದ ರೋಗ ನಿಯಂತ್ರಣ ಸಂಸ್ಥೆ ಕೇಂದ್ರ ಸೂಚಿಸಿರುವ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯಷ್ಟೆ ಕರೊನಾ ತಡೆಗೆ ಸಾಲುವುದಿಲ್ಲ. ಹೆಚ್ಚುವರಿ ಜಾಗ್ರತೆ ಅವಶ್ಯಕ ಎಂದು ಎಂಐಟಿ ತಜ್ಞರು ತಿಳಿಸಿದ್ದಾರೆ.