More

    1-2 ಲಕ್ಷ ಸಾವು ಖಚಿತ; ಎದುರಿಸಲು ಸಿದ್ಧರಾಗಿರಿ: ಅಮೆರಿಕನ್ನರಿಗೆ ವೈಟ್​ಹೌಸ್​ ಎಚ್ಚರಿಕೆ

    ಜಗತ್ತಿನಾದ್ಯಂತ ಕರೊನಾ ಕಳವಳ ಹೆಚ್ಚಾಗುತ್ತಿದ್ದಂತೆಯೇ ಅಮೆರಿಕದಿಂದ ಇನ್ನಷ್ಟು ಬೆಚ್ಚಿ ಬೀಳಿಸುವ ಸುದ್ದಿ ಹೊರಬಿದ್ದಿದೆ. ಮುಂದಿನ ದಿನಗಳಲ್ಲಿ ಕರೊನಾ ವೈರಸ್​ನಿಂದ ಇಡೀ ರಾಷ್ಟ್ರದಲ್ಲಿ 1ರಿಂದ 2 ಲಕ್ಷ ಸಾವುಗಳು ಸಂಭವಿಸುವ ಸಾಧ್ಯತೆ ಇದ್ದು, ಆ ಸನ್ನಿವೇಶವನ್ನು ಎದುರಿಸಲು ಸಿದ್ಧರಾಗಿರುವಂತೆ ಅಮೆರಿಕನ್ನರಿಗೆ ವೈಟ್​ಹೌಸ್​ ಎಚ್ಚರಿಕೆ ನೀಡಿದೆ.

    ಕರೊನಾ ಹಾವಳಿಯನ್ನು ಎದುರಿಸಲು ಯಾವುದೇ ಮಂತ್ರದಂಡ ನಮ್ಮಲ್ಲಿಲ್ಲ. ಚಿಕಿತ್ಸೆ, ಲಸಿಕೆಯಂತೂ ಇಲ್ಲವೇ ಇಲ್ಲ. ಮುಂದಿನ 30 ದಿನಗಳಲ್ಲಿ ಈ ಮಹಾಮಾರಿಯನ್ನು ಮಣಿಸಲು ನಮ್ಮ ಸಾಮಾಜಿಕ ನಡವಳಿಕೆಗಳಿಂದ ಮಾತ್ರವೇ ಸಾಧ್ಯ ಎಂದಿದ್ದಾರೆ ಶ್ವೇತಭವನದ ಕರೊನಾ ವೈರಸ್​ ರೆಸ್ಪಾನ್ಸ್​ ಕೋಆರ್ಡಿನೇಟರ್​ ಡಾ. ಡೆಬೋರಾ ಬ್ರಕ್ಸ್​.

    ಇದೇ ವೇಳೆ, ಸಾರ್ವಜನಿಕರು ಅನುಸರಿಸಬೇಕಾದ ಸಾಮಾಜಿಕ ಅಂತರ, ಮನೆಯಲ್ಲಿ ಇರುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಟ್ರಂಪ್​ ಆಡಳಿತ ಪ್ರಕಟಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಮನವಿ ಮಾಡಿದರು.

    ಅಮೆರಿಕದಲ್ಲಿ ನ್ಯೂಯಾರ್ಕ್​, ಕನೆಕ್ಟಿಕಟ್​ ಮತ್ತು ನ್ಯೂಜೆರ್ಸಿ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿವೆ. ಉಳಿದ ಪ್ರದೇಶಗಳೂ ಅವುಗಳ ಸ್ಥಿತಿಯತ್ತ ಸಾಗುತ್ತಿವೆ. ಹಾಗಾಗಿ ಲಾಕ್​ಡೌನ್​ ಇನ್ನಷ್ಟು ಬಿಗಿಯಾಗಲಿದೆ. ಆದರೆ ಅಗತ್ಯ ಸಂದರ್ಭಗಳಲ್ಲಿ ಮನೆಯಿಂದ ಹೊರಗೆ ಬರಲು ಜನರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.

    ಆಗಸ್ಟ್​ ಮೊದಲ ವಾರದವರೆಗೆ ಅಮೆರಿಕದಾದ್ಯಂತ 84 ಸಾವಿರ ಜನ ಕೊರೊನಾದಿಂದ ಸಾಯಬಹುದೆಂದು ವಾಷಿಂಗ್ಟನ್​ ವಿಶ್ವವಿದ್ಯಾಲಯದ ಇನ್ಸ್​ಟಿಟ್ಯೂಟ್​ ಆಫ್​ ಹೆಲ್ತ್​ ಮೆಟ್ರಿಕ್ಸ್​ ಆ್ಯಂಡ್​ ಇವ್ಯಾಲುವೇಷನ್​ (ಐಎಚ್​ಎಂಇ) ಅಭಿಪ್ರಾಯಪಟ್ಟಿದೆ. (ಏಜೆನ್ಸೀಸ್​)

    ಪರಿಹಾರ ನಿಧಿಗೆ ನೀವಾಗೇ ದೇಣಿಗೆ ಕೊಡಿ; ಇಲ್ಲಾಂದ್ರೆ ಸಂಬಳದಲ್ಲಿ‌ ಹಿಡಿತೇವೆ ನೋಡಿ! – ಕೇರಳ ಸರ್ಕಾರದ ವಿಲಕ್ಷಣ ವರಸೆ

    ಕರೊನಾ ಕುರಿತ ಭಯಾನಕ ಮಾಹಿತಿ ಬಿಚ್ಚಿಟ್ಟ ನೂತನ ಸಂಶೋಧನೆ: ಎಚ್ಚರ ವಹಿಸದಿದ್ರೆ ಸೋಂಕು ಖಂಡಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts