ಬೋಯಿಂಗ್ ವಿಮಾನ ಹೈಜ್ಯಾಕ್​? ಪ್ರಯಾಣ ಆರಂಭಿಸಿದ ನಾಲ್ಕೇ ನಿಮಿಷಗಳಲ್ಲಿ ​ಸಂಪರ್ಕ ಕಡಿತ

flight
Published on

ಜಕಾರ್ತಾ: ಇಂಡೋನೇಷಿಯಾದ ವಿಮಾನ ನಿಲ್ದಾಣದಿಂದ ಹೊರಟ ವಿಮಾನವೊಂದು, ಹಾರಾಟ ಆರಂಭಿಸಿ ನಾಲ್ಕೇ ನಿಮಿಷಗಳಲ್ಲಿ ರಾಡಾರ್​ ಸಂಪರ್ಕ ಕಡಿತವಾಗಿಸಿಕೊಂಡಿದೆ. ವಿಮಾನದ ಪತ್ತೆಗಾಗಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಲಾಗಿದೆ.

ಶ್ರೀವಿಜಯ ಏರ್​ ಎಸ್​ಜೆ-182, ಬೋಯಿಂಗ್​​ 737-500 ವಿಮಾನವು ಜಕಾರ್ತಾದಿಂದ ಮಧ್ಯಾಹ್ನ 12.07ಕ್ಕೆ (6.37 ಯುಟಿಎಸ್​) ಹೊರಟಿದೆ. 56 ಪ್ರಯಾಣಿಕರು ಮತ್ತು ಆರು ಸಿಬ್ಬಂದಿ ವಿಮಾನದಲ್ಲಿ ಪ್ರಯಾಣ ಆರಂಭಿಸಿದೆ. ವಿಮಾನ ಹಾರಾಟ ಆರಂಭಿಸಿ 10 ಸಾವಿರ ಅಡಿ ಎತ್ತರಹೋಗುವಷ್ಟರಲ್ಲಿ ವಿಮಾನದ ರಾಡಾರ್ ಸಂಪರ್ಕ ಕಡಿತಗೊಂಡಿದೆ. 12.11ರಿಂದ ವಿಮಾನ ಸಂಪರ್ಕ ಸಾಧ್ಯವಾಗಿಲ್ಲ.

ಈ ವಿಮಾನವು 1994ರ ಮೇ ತಿಂಗಳಲ್ಲಿ ಮೊದಲ ಹಾರಾಟ ನಡೆಸಿತ್ತು. 26 ವರ್ಷಗಳಿಂದ ಯಾವುದೇ ತೊಂದರೆಯಿಲ್ಲದೆ ಜನರನ್ನು ಹೊತ್ತೊಯ್ಯುತ್ತಿದ್ದುದ್ದಾಗಿ ತಿಳಿಸಲಾಗಿದೆ. "ಕಾಣೆಯಾದ ವಿಮಾನವು ಪ್ರಸ್ತುತ ತನಿಖೆಯಲ್ಲಿದೆ ಮತ್ತು ರಾಷ್ಟ್ರೀಯ ಶೋಧ ಮತ್ತು ಪಾರುಗಾಣಿಕಾ ಸಂಸ್ಥೆ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿಯ ಸಮನ್ವಯದಲ್ಲಿದೆ" ಎಂದು ಇಂಡೋನೇಷ್ಯಾದ ಸಾರಿಗೆ ಸಚಿವಾಲಯದ ವಕ್ತಾರ ಅದಿತಾ ಐರಾವತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಮಾನ ಸಮುದ್ರದೊಳಗೆ ಬಿದ್ದಿದೆಯೇ ಎನ್ನುವ ಅನುಮಾನಗಳು ವ್ಯಕ್ತವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net