

ನವದೆಹಲಿ; ಆರ್ಮಿ ಡೆಂಟಲ್ ಕಾರ್ಪ್ಸ್ ನಲ್ಲಿ ಶಾರ್ಟ್ ಸರ್ವೀಸ್ ಕಮಿಷನ್ಡ್ ಆಫೀಸರ್ ಆಗಲು ಅರ್ಹ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು 43 ಸ್ಥಾನಗಳಿವೆ. ಅಂಗೀಕೃತ ಕಾಲೇಜು/ ಸಂಸ್ಥೆಯಿಂದ ಅಂತಿಮ ಬಿಡಿಎಸ್ನಲ್ಲಿ ಶೇ. 55 ಅಂಕ ಗಳಿಸಿ (ಅಥವಾ ಎಂಡಿಎಸ್) ಪಾಸಾಗಿರಬೇಕು. ಒಂದು ವರ್ಷದ ಕಡ್ಡಾಯ ರೋಟರಿ ಇಂಟರ್ನ್ಷಿಪ್ ಮುಗಿಸಿರಬೇಕು. ಗರಿಷ್ಠ ವಯೋಮಿತಿ 45 ವರ್ಷ ನಿಗದಿಪಡಿಸಲಾಗಿದೆ. ಆನ್ಲೈನ್ ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗೆ ವೆಬ್ಸೈಟ್ e www.joinindianarmy.nic.in ಸಂಪರ್ಕಿಸಬಹುದು. ಜುಲೈ 30ರ ವರೆಗೆ ಅರ್ಜಿ ಸಲ್ಲಿಸಬಹುದು.