ಡಿಐಎಟಿಯಲ್ಲಿ ಲೈಬ್ರರಿ ಟ್ರೇನಿ ಆಗಲಿಚ್ಛಿಸುವಿರಾ? ಇಲ್ಲಿವೆ ನೋಡಿ ಆಯ್ಕೆ ಮಾನದಂಡಗಳು

library
Published on

ಪುಣೆ: ಇಲ್ಲಿಯ ಡಿಫೆನ್ಸ್ ಇನ್​ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಟೆಕ್ನಾಲಜಿ (ಡಿಐಎಟಿ) ಯಲ್ಲಿ ಗ್ರಂಥಾಲಯ ತಂತ್ರಗಳು ಮತ್ತು ಸೇವೆಗಳ ಕುರಿತು ತರಬೇತಿ ನೀಡಲಾಗುತ್ತದೆ.

ಈ ನಿಟ್ಟಿನಲ್ಲಿ ಲೈಬ್ರರಿ ಟ್ರೇನೀ ಆಗಲಿಚ್ಛಿಸುವ ಸ್ನಾತಕೋತ್ತರ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಎರಡು ಖಾಲಿ ಸ್ಥಾನಗಳಿವೆ. ಅಭ್ಯರ್ಥಿಗಳು ಅಂಗೀಕೃತ ವಿವಿಯಿಂದ ಎಂಎಲ್​ಐಎಸ್​​ಸಿ ಪೂರೈಸಿರಬೇಕು. ಕಂಪ್ಯೂಟರ್ ಪರಿಣತಿ, ಗ್ರಂಥಾಲಯ ಸಾಫ್ಟವೇರ್​ ಕುರಿತ ತಿಳಿವಳಿಕೆ ಇರಬೇಕು. ಗರಿಷ್ಠ ವಯೋಮಿತಿ 25 ವರ್ಷ ಪೂರೈಸಿಬೇಕು. ಮಾಸಿಕ ಗೌರವ ಧನ 20 ಸಾವಿರ ರೂ. ನೀಡಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜುಲೈ 17 ರೊಳಗಾಗಿ ಇ ಮೇಲ್ ಗೆ : library@diat.ac.in / recruit@diat.ac.in ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ https://diat.ac.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net