ಇಲ್ಲಿ ತೆರೆದಿದೆ, ಭಾರತದ ಮೊಟ್ಟಮೊದಲ ಆಲ್ಕೊಹಾಲ್​ ಮ್ಯೂಸಿಯಂ!

alcohol
Published on

ಪಣಜಿ: ವಿಶೇಷವಾಗಿ ಮದ್ಯಪ್ರಿಯರಲ್ಲಿ ಆಸಕ್ತಿ ಮೂಡಿಸಬಲ್ಲ ಭಾರತದ ಮೊಟ್ಟಮೊದಲ 'ಆಲ್ಕೊಹಾಲ್​ ಮ್ಯೂಸಿಯಂ' ಗೋವಾದಲ್ಲಿ ನಿರ್ಮಾಣವಾಗಿದೆ. ಉತ್ತರ ಗೋವಾದ ಕ್ಯಾಂಡೋಲಿಂನಲ್ಲಿ ನಂದನ್​ ಕುಡ್​ಚಡ್ಕರ್ ಎಂಬ ಸ್ಥಳೀಯ ಬಿಸಿನೆಸ್​ಮನ್​ ಈ 'ಆಲ್​ ಎಬೌಟ್ ಆಲ್ಕೊಹಾಲ್​' ಎಂಬ ಮ್ಯೂಸಿಯಂಅನ್ನು ತೆರೆದಿದ್ದಾರೆ.

ಈ ಮ್ಯೂಸಿಯಂನಲ್ಲಿ ಶತಮಾನಗಳ ಹಿಂದಿನ ಆಲ್ಕೊಹಾಲ್ ಬಾಟಲಿಗಳು, ಗ್ಲಾಸ್​ಗಳು ಮತ್ತು ಉತ್ಪಾದನಾ ಯಂತ್ರಗಳನ್ನು ಜೋಡಿಸಲಾಗಿದೆ. ಗೋವಾದ ಖ್ಯಾತ ಹಾಗೂ ಪಾರಂಪರಿಕ ಡ್ರಿಂಕ್​ ಆದ ಫೇನಿ ಬಗ್ಗೆ ಕೂಡ ಜಗತ್ತಿಗೆ ತಿಳಿಸುವ ಪ್ರಯತ್ನ ಇದಾಗಿದೆ ಎಂದು ಕುಡ್​ಚಡ್ಕರ್​ ಹೇಳಿದ್ದಾರೆಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net