

ನವದೆಹಲಿ: ಭಾರತೀಯ ವ್ಯಕ್ತಿಯೊಬ್ಬನಿಗೆ ಸಿಂಗಾಪುರದಲ್ಲಿ ಗಲ್ಲು ಶಿಕ್ಷೆ ವಿಧಿಸಲು ನಿರ್ಧರಿಸಲಾಗಿದೆ. ಭಾರತೀಯ ಮೂಲದ ತಂಗರಾಜು ಸುಪ್ಪಯ್ಯ (46) ಶಿಕ್ಷೆಗೆ ಈಡಾಗಿರುವ ವ್ಯಕ್ತಿ. ಈತ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದ.
ಮಾದಕ ವಸ್ತು ಕಳ್ಳಸಾಗಣೆ ಅಪರಾಧ ಎದುರಿಸುತ್ತಿರುವ ತಂಗರಾಜು ಸುಪ್ಪಯ್ಯ ಅವರನ್ನು ಬುಧವಾರ ಗಲ್ಲಿಗೇರಿಸಲು ನಿರ್ಧರಿಸಲಾಗಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಒಂದು ಕೆ.ಜಿ.ಗೂ ಅಧಿಕ ತೂಕದ ಗಾಂಜಾ ಸಾಗಣೆ ಮಾಡಿದ್ದ ಆರೋಪದಡಿ ಅಲ್ಲಿನ ಪೊಲೀಸರು 2014ರಲ್ಲಿ ತಂಗರಾಜುವನ್ನು ಬಂಧಿಸಿದ್ದರು. ನಂತರ ಆತನಿಗೆ 2018ರ ಅ. 9ರಂದು ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು.