

ಇವಳೆಂಥಾ ಅಮ್ಮ ಎನ್ನಿಸದೆ ಇರದು ಈ ಸುದ್ದಿ ಓದಿದರೆ ! ಸ್ನಾನಕ್ಕೆಂದು ಹೋದವಳಿಗೆ ಅಲ್ಲೇ ಮಗು ಹುಟ್ಟಿದೆ. ಆದರೆ ಈ ಮಹಿಳೆ ಹೆದರಿ ಕಿಟಕಿಯಿಂದ ಹೊರಗೆ ಎಸೆದಿದ್ದಾಳೆ...
ಅಮೆರಿಕದಲ್ಲಿ ಘಟನೆ ನಡೆದಿದ್ದು, ನ್ಯೂಯಾರ್ಕ್ ಪೋಸ್ಟ್ ಈ ಸುದ್ದಿಯನ್ನು ವರದಿ ಮಾಡಿದೆ. ಮಹಿಳೆಯ ಹೆಸರು ಸಬಿತಾ ಡೂಕ್ರಾಮ್. 23 ವರ್ಷದ ಈಕೆ ನ್ಯೂಯಾರ್ಕ್ನ ಕ್ವೀನ್ಸ್ ನಗರದಲ್ಲಿ ವಾಸವಾಗಿದ್ದಳು.
ಶನಿವಾರ ಸ್ನಾನಕ್ಕೆಂದು ಹೋದ ಇವಳಿಗೆ ಬಾತ್ರೂಂನಲ್ಲಿಯೇ ಹೆರಿಗೆಯಾಗಿದೆ. ಮಗು ಹೊರಬರುತ್ತಿದ್ದಂತೆ ತೀವ್ರ ಗಾಬರಿಗೆ ಒಳಗಾದ ಸಬಿತಾ ಅದನ್ನು ತೆಗೆದು ಕಿಟಕಿಯಿಂದ ಆಚೆಗೆ ಎಸೆದಿದ್ದಾಳೆ. ನಂತರ ಸ್ನಾನದ ಮನೆಯನ್ನು ಸ್ವಚ್ಛಗೊಳಿಸಿ, ಅಲ್ಲಿಂದ ಈಚೆಗೆ ಬಂದಿದ್ದಾಳೆ.
ಹೊರಗೆ ಬಿದ್ದ ಪುಟ್ಟ ಮಗು ಅದೃಷ್ಟವಶಾತ್ ಬದುಕುಳಿದಿದೆ. ಶಿಶು ಅಳುವುದನ್ನು ಕೇಳಿದ ಪಕ್ಕದ ಮನೆಯವರು ಅದನ್ನು ರಕ್ಷಿಸಿ, ಆರೋಗ್ಯ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಇದೀಗ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ. ಮಿದುಳಿನ ಒಳಗೆ ರಕ್ತಸ್ರಾವ ಆಗುತ್ತಿದ್ದು, ಊದುಕೊಂಡಿದೆ. ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ:ಅಶ್ಲೀಲ ಫೋಟೋಗಾಗಿ ವಿದ್ಯಾರ್ಥಿನಿಯರ ದುಂಬಾಲು ಬಿದ್ದಿ ಧರ್ಮಬೋಧಕನಿಗೆ ಎದುರಾಯ್ತು ಕಂಟಕ!
ಅದಾದ ಬಳಿಕ ಸಬಿತಾಳನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಕೆಲವು ತಪಾಸಣೆ ಮಾಡಲಾಗಿದೆ. ನಂತರ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ನಾನು ಬಾತ್ರೂಂಗೆ ಹೋಗಿದ್ದೆ. ಅಲ್ಲಿಯೇ ಮಗು ಹೊರಬಂದಿತು. ನನಗೆ ಏನಾಯಿತು ಎಂಬುದೇ ಗೊತ್ತಾಗಲಿಲ್ಲ. ಕ್ಷಮಿಸಿ, ತೀವ್ರ ಗಾಬರಿಯಾಗಿ ಅದನ್ನು ಎಸೆದುಬಿಟ್ಟೆ. ಮಗುವನ್ನು ಪರೀಕ್ಷಿಸಲೂ ಇಲ್ಲ. ನಂತರ ಸ್ನಾನ ಮಾಡಿ, ಮಲಗಿಬಿಟ್ಟೆ ಎಂದು ಸಬಿತಾ ಪೊಲೀಸರಿಗೆ ಉತ್ತರಿಸಿದ್ದಾಳೆ. ಇದನ್ನೂ ಓದಿ: ಅಂಕಲ್ನಿಂದಲೇ ನಿರಂತರ ಅತ್ಯಾಚಾರ: ಗರ್ಭಿಣಿ ಬಾಲಕಿಯ ಗರ್ಭಪಾತದ ವೇಳೆ ನಡೆಯಿತು ದುರಂತ!
ಸದ್ಯ ಸಬಿತಾ ವಿರುದ್ಧ ಕೊಲೆ ಯತ್ನ ಕೇಸ್ ದಾಖಲಾಗಿದೆ. ವಿಚಾರಣೆ ವೇಳೆ ಪೊಲೀಸರ ದಾರಿ ತಪ್ಪಿಸಲು ವಿರೋಧಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದೂ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ. (ಏಜೆನ್ಸೀಸ್)