ಭಾರತೀಯ ಮೂಲದ ವಿದ್ಯಾರ್ಥಿಗೆ ಒಂದೇ ದಿನದಲ್ಲಿ 6 ಸಲ ಹೃದಯಸ್ತಂಭನ!

Heart Attack (1)
Published on

ನವದೆಹಲಿ: ಭಾರತೀಯ ಮೂಲದ ಅಮೆರಿಕನ್ ವಿದ್ಯಾರ್ಥಿ ಒಂದೇ ದಿನ ಆರು ಸಲ ಹೃದಯಸ್ತಂಭನಕ್ಕೆ ಒಳಗಾದ ಪ್ರಕರಣವೊಂದು ನಡೆದಿದೆ. ಆರು ಬಾರಿ ಕಾರ್ಡಿಯಾಕ್ ಅರೆಸ್ಟ್ ಆದರೂ ಅದೃಷ್ಟವಶಾತ್​ ಈತ ಬದುಕುಳಿದಿದ್ದಾನೆ.

ಸೀಟಲ್​ನ ಅತುಲ್ ರಾವ್ ಎಂಬ 21 ವರ್ಷದ ವಿದ್ಯಾರ್ಥಿ ಲಂಡನ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಒಂದೇ ದಿನದಲ್ಲಿ ಆರು ಬಾರಿ ಹೃದಯಸ್ತಂಭನಕ್ಕೆ ಒಳಗಾಗಿದ್ದಾನೆ. ತಕ್ಷಣದ ವೈದ್ಯಕೀಯ ನೆರವು ಹಾಗೂ ತುರ್ತುಚಿಕಿತ್ಸೆಯಿಂದಾಗಿ ಈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈತನ ಶ್ವಾಸಕೋಶದಲ್ಲಿ ರಕ್ತಹೆಪ್ಪುಗಟ್ಟಿದ್ದ ಪರಿಣಾಮವಾಗಿ ಹೃದಯಕ್ಕೆ ರಕ್ತದ ಪರಿಚಲನೆಯಲ್ಲಿ ಏರುಪೇರಾಗಿತ್ತು. ಇದರಿಂದ ಪಲ್ಮನರಿ ಎಂಬಾಲಿಸಂ ಉಂಟಾಗಿ ಅದರಿಂದಾಗಿ ಆತ ಕಾರ್ಡಿಯಾಕ್​ ಅರೆಸ್ಟ್​ಗೆ ಒಳಗಾಗುವಂತಾಗಿತ್ತು. ಆದರೆ ಈತನ ಗೆಳೆಯ ಕೂಡಲೇ ನೆರವಾಗಿದ್ದು, ಸಿಪಿಆರ್ ಕೂಡ ಮಾಡಲಾಗಿದ್ದು, ತಕ್ಷಣ ಆ್ಯಂಬುಲೆನ್ಸ್ ಕರೆಸಿ ಸಮೀಪದ ಆಸ್ಪತ್ರೆಗೆ ಕರೆದೊಯ್ದ ಕಾರಣ ಬದುಕುಳಿದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net