

ಬೆಂಗಳೂರು: ರಾಜ್ಯದಲ್ಲಿ ಒಂದು ಸ್ವಲ್ಪ ಧರ್ಮ ಸಂಘರ್ಷ ಉಂಟಾದರೂ ದೊಡ್ಡ ಗಲಭೆ-ದೊಂಬಿಗಳಿಗೆ ಕಾರಣವಾಗುವ ಸಾಧ್ಯತೆ ಅಧಿಕವಾಗಿರುತ್ತದೆ. ಅಂಥದ್ದೊಂದು ಸಂಭಾವ್ಯ ಸಂಘರ್ಷವನ್ನು ದಿಟ್ಟ ಪೊಲೀಸ್ ಅಧಿಕಾರಿಯೊಬ್ಬರು ತಪ್ಪಿಸಿದ್ದು, ಆ ವಿಡಿಯೋ ವೈರಲ್ ಆಗುತ್ತಿದೆ. ಮಾತ್ರವಲ್ಲ, ಪೊಲೀಸ್ ಅಧಿಕಾರಿಯ ನಡೆ ಕುರಿತು ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ಪುಚ್ಚೆಮೊಗರು ಎಂಬಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಹಿಂದೂಗಳ ಧಾರ್ಮಿಕ ಕಟ್ಟೆಯಲ್ಲಿ ಮುಸ್ಲಿಮರು ಅಕ್ರಮವಾಗಿ ಹಸಿರು ಬಣ್ಣದ ಧ್ವಜ ಹಾಕಿದ್ದರ ಹಿನ್ನೆಲೆಯಲ್ಲಿ ಈ ಎಲ್ಲ ಬೆಳವಣಿಗೆ ನಡೆದಿದೆ. ಧ್ವಜ ತೆರವುಗೊಳಿಸುವ ನಿಟ್ಟಿನಲ್ಲಿ ಮೂಡಬಿದಿರೆ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ತಕ್ಷಣ ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದಾರೆ.
ಕಟ್ಟೆಯಲ್ಲಿ ಹಸಿರು ಧ್ವಜ ಹಾಕಲು ಪಂಚಾಯಿತಿಯಿಂದ ಅನುಮತಿ ನೀಡಲಾಗಿದೆಯೇ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಪ್ರಶ್ನೆ ಮಾಡಿದಾಗ ಇಲ್ಲ ಎಂದು ಹೇಳಿದ್ದಾರೆ. ಅನುಮತಿ ಇಲ್ಲದಿದ್ದರೂ ಇದನ್ನು ಇಲ್ಲಿ ಹಾಕಲು ಬಿಟ್ಟಿದ್ದೇಕೆ ಎಂದು ಪಿಡಿಒಗೆ ಇನ್ಸ್ಪೆಕ್ಟರ್ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಆ ಕಟ್ಟೆಯಿಂದ ಅದನ್ನು ತೆರವುಗೊಳಿಸಿದ್ದಾರೆ. ಇನ್ಸ್ಪೆಕ್ಟರ್ದು ದಿಟ್ಟ ನಡೆ ಎಂದು ಬಹಳಷ್ಟು ಸಾರ್ವಜನಿಕರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ವಿಡಿಯೋ ಹಂಚಿಕೊಳ್ಳುತ್ತಿರುವುದರಿಂದ ಅದು ವೈರಲ್ ಆಗಲಾರಂಭಿಸಿದೆ.