

ಲಾಹೋರ್: ಭಾರತೀಯ ಯುವಕನೊಬ್ಬ ಪ್ರೀತಿಸಿದ ಹುಡುಗಿಗಾಗಿ ಪಾಕಿಸ್ತಾನಕ್ಕೆ ತೆರಳಿ ಸುಕ್ಕೂರ್ ಎಂಬಲ್ಲಿ ವಿವಾಹವಾಗಿದ್ದಾನೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದೆ.
ಸಂಜುಗತ ಕುಮಾರಿ ಎಂಬಾಕೆಯೊಂದಿಗೆ ವಿವಾಹವಾಗಲು ಮುಂಬೈ ಮೂಲದ ಮಹೇಂದ್ರ ಕುಮಾರ್ ತನ್ನ ಕುಟುಂಬದೊಂದಿಗೆ ಪಾಕಿಸ್ತಾನಕ್ಕೆ ತೆರಳಿದ್ದಾನೆ. ಸುಕ್ಕೂರಿನ ಸ್ಥಳೀಯ ಸಭಾಂಗಣವೊಂದರಲ್ಲಿ ಇಬ್ಬರ ಮದುವೆ ನಡೆದಿದ್ದು, ವಧು ಮತ್ತು ವರನ ಕುಟುಂಬಸ್ಥರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಹೇಂದ್ರ ಕುಮಾರ್ ಮತ್ತು ಸಂಜುಗತ ಕುಮಾರಿ ಅವರು ಸ್ನೇಹಿತರಾಗಿದ್ದು, ಪ್ರೀತಿಯಲ್ಲಿ ಬಿದ್ದಿದ್ದಾರೆ. ಮನೆಯವರಿಗೆ ತಿಳಿಸಿದ ನಂತರ ವ್ಯಾಟ್ಸಪ್ ಮೂಲಕ ಎರಡೂ ಕುಟುಂಬಗಳು ಮದುವೆ ಬಗ್ಗೆ ಮಾತುಕಥೆ ನಡೆಸಿ, ವಿವಾಹ ನಿರ್ಧರಿಸಿದ್ದಾರೆ. ಸಧ್ಯದಲ್ಲೇ ಕಾನೂನು ನಿಯಮಗಳನ್ನು ಪೂರ್ಣಗೊಳಿಸಿದ ನಂತರ ಇಬ್ಬರೂ ಭಾರತಕ್ಕೆ ಮರಳಲಿದ್ದಾರೆ ಎಂದು ವಧುವಿನ ಕುಟುಂಬಸ್ಥರು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)