

ಇತ್ತೀಚೆಗಷ್ಟೇ ನೆಟ್ಫ್ಲಿಕ್ಸ್ನಲ್ಲಿ ರಿಲೀಸ್ ಆಗಿರುವ ಗುಂಜನ್ ಸಕ್ಸೆನಾ; ದಿ ಕಾರ್ಗಿಲ್ ಗರ್ಲ್ ಸಿನಿಮಾ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ತೋರಿಸಿರುವುದಕ್ಕೂ, ಇಂಡಿಯನ್ ಏರ್ಫೊರ್ಸ್ನಲ್ಲಿರುವ ವ್ಯವಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂಬ ವಾದ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಇದೀಗ ಇದೇ ಚರ್ಚೆಗೆ ನಿವೃತ್ತ ವಿಂಗ್ ಕಮಾಂಡರ್ ಐ.ಕೆ. ಖನ್ನಾ ಪ್ರತಿಕ್ರಿಯಿಸಿದ್ದಾರೆ.
ಇಂಡಿಯನ್ ಏರ್ಪೋರ್ಸ್ನ ಮೊದಲ ಬ್ಯಾಚ್ನ ಮಹಿಳಾ ಪೈಲಟ್ಗಳಿಗೆ ಸ್ವತಃ ವಿಂಗ್ ಕಮಾಂಡರ್ ಖನ್ನಾ ತರಬೇತಿ ನೀಡಿದ್ದು, ಸಿನಿಮಾದಲ್ಲಿ ಮಾತ್ರ ತದ್ವಿರುದ್ಧವಾಗಿ ಬಿಂಬಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಸದ್ಯಕ್ಕೆ ಮೂರು; ಧನಂಜಯನ ಪ್ರಪಂಚ
‘ಚಿತ್ರದಲ್ಲಿ ತೋರಿಸಿರುವ ಅಂಶ ಸತ್ಯಕ್ಕೆ ದೂರವಾಗಿದೆ. ಎಲ್ಲವೂ ಸುಳ್ಳು. 1994ರಲ್ಲಿ ಮಹಿಳಾ ಪೈಲಟ್ಗಳ ಆಯ್ಕೆ ಆಗುತ್ತಿದ್ದಂತೆ, ಅವರಿಗಾಗಿಯೇ ಪ್ರತ್ಯೇಕ ಕೋಣೆಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಸಿನಿಮಾದಲ್ಲಿ ಮಾತ್ರ ಅದನ್ನು ಬೇರೆಯ ರೀತಿಯಲ್ಲಿಯೇ ಬಿಂಬಿಸಲಾಗಿದೆ. ಗುಂಜನ್ ಪಾತ್ರಕ್ಕೂ ಈ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಹರಿಹಾಯ್ದಿದ್ದಾರೆ.
ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾದಲ್ಲಿ ಜಾಹ್ನವಿ ಕಪೂರ್ ನಟಿಸಿದ್ದು, ಶರಣ್ ಶರ್ಮಾ ನಿರ್ದೇಶನದಲ್ಲಿ ಸಿದ್ಧವಾಗಿರುವ ಈ ಚಿತ್ರಕ್ಕೆ ಕರಣ್ ಜೋಹರ್ ಬಂಡವಾಳ ಹೂಡಿದ್ದಾರೆ. (ಏಜೆನ್ಸೀಸ್)