ದೇಶದಲ್ಲೇ 3ನೇ ಪ್ರಕರಣ, ಕೇರಳದಲ್ಲಿ ಮತ್ತೆ ಕಾಣಿಸಿಕೊಳ್ತು ಮಂಕಿಪಾಕ್ಸ್​: ಯುಎಇಯಿಂದ ಮರಳಿದ ಮಹಿಳೆಗೆ ಸೋಂಕು

Monkeypox
Published on

ಕೊಚ್ಚಿನ್​: ಕೇರಳದಲ್ಲಿ ಮತ್ತೆ ಮಂಕಿಪಾಕ್ಸ್​ ಸೋಂಕು ಕಾಣಿಸಿಕೊಂಡಿದ್ದು, ಯುಎಇಯಿಂದ ಶುಕ್ರವಾರ ಮರಳಿದ ಮಹಿಳೆಗೆ ಸೋಂಕು ಇರುವುದು ಪತ್ತೆಯಾಗಿದೆ.

ಅರಬ್​ ದೇಶದಿಂದ ಬಂದ 35ವರ್ಷದ ಮಹಿಳೆ ಜ್ವರದಿಂದ ಬಳಲುತ್ತಿದ್ದರು, ಇವರನ್ನು ಮಂಜೇರಿ ಮೆಡಿಕಲ್​ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಪರೀಕ್ಷೆ ವರದಿ ಬಂದ ಬಳಿಕ ಸೋಂಕು ಇರುವುದು ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.

ಆಕೆಯ ಸಂಪರ್ಕದಲ್ಲಿದ್ದ ಕುಟುಂಬ ಸದಸ್ಯರನ್ನು ಕೂಡ ಐಸೋಲೇಷನ್​ಗೆ ಒಳಪಡಿಸಲಾಗಿದ್ದು, ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವೆ ವೀಣಾ ಜಾರ್ಜ್​ ತಿಳಿಸಿದ್ದಾರೆ.

ಇನ್ನು ಉಳಿದೆರಡು ಮಂಕಿಪಾಕ್ಸ್ ಪ್ರಕರಣಗಳು ಕೇರಳದಲ್ಲೇ ಪತ್ತೆಯಾಗಿದ್ದು, ಕೊಲ್ಲಂ ಹಾಗೂ ಕಣ್ಣೂರಿನ ವ್ಯಕ್ತಿಗೆ ಮಂಕಿಪಾಕ್ಸ್​ ಇರುವುದು ದೃಢವಾಗಿತ್ತು. ಈ ಇಬ್ಬರು ಸಹ ಅರಬ್​ ರಾಷ್ಟ್ರದಿಂದಲೇ ಮರಳಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net