ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ ಸಹೋದರನಿಗೆ ಬೆಂಗಳೂರು ಪೊಲೀಸರಿಂದ ಸಮನ್ಸ್​ ಜಾರಿ: ಕಾರಣ ಇಲ್ಲಿದೆ

Shradhakapoorbrother
Published on

ಬೆಂಗಳೂರು: ಬಾಲಿವುಡ್​ ಖ್ಯಾತ ನಟಿ ಶ್ರದ್ಧಾ ಕಪೂರ್ ಸಹೋದರನಿಗೆ ಬೆಂಗಳೂರು ಪೊಲೀಸರು ಸಮನ್ಸ್​ ಜಾರಿ ಮಾಡಿದ್ದಾರೆ. ಕಳೆದ ಜೂನ್ 13ರಂದು ಬೆಂಗಳೂರಿನ ಎಂಜಿ ರಸ್ತೆಯ ಹೋಟೆಲ್​ವೊಂದರಲ್ಲಿ ಬಂಧಿಸಲಾಗಿದ್ದ ಸಿದ್ಧಾಂತ್ ಕಪೂರ್​ಗೆ  ನೋಟಿಸ್​ ನೀಡಲಾಗಿದೆ.

ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಅಲಸೂರು ಪೊಲೀಸ್ ಠಾಣೆಯಿಂದ ಸಮನ್ಸ್ ಜಾರಿ ಮಾಡಲಾಗಿದೆ. ಹೋಟೆಲ್​ನಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದ ಸಿದ್ಧಾಂತ್​​ ಡ್ರಗ್ಸ್​ ಸೇವಿಸಿದ್ದು ನಿಜವೆಂದು ಪ್ರಾಥಮಿಕ ತನಿಖೆಯಿಂದಲೂ ತಿಳಿದುಬಂದಿದೆ.

ಇದೀಗ ಪಾರ್ಟಿ ನಡೆಸಿದ್ದ ವೇಳೆ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿರುವ ಪೊಲೀಸರಿಗೆ ಸಿದ್ಧಾಂತ್ ಸಿಗರೇಟ್​ ಮೂಲಕ ಮಾದಕ ದ್ರವ್ಯ ತೆಗೆದುಕೊಳ್ಳುತ್ತಿರುವುದು ದೃಢವಾಗಿದೆ ಎನ್ನಲಾಗಿದೆ.

38ವರ್ಷದ ಸಿದ್ಧಾಂತ್​ ಬಂಧಿಸಿದ್ದ ವೇಳೆ ನಡೆಸಿದ್ದ ರಕ್ತ ಪರೀಕ್ಷೆಯಲ್ಲೂ ಕೂಡ ಮಾದಕ ದ್ರವ್ಯ ತೆಗೆದುಕೊಂಡಿರುವುದು ದೃಢವಾಗಿತ್ತು. ಬಂಧನದ ವೇಳೆ ಮೊಬೈಲ್ ಸೇರಿದಂತೆ ಕೆಲವು ದಾಖಲೆಗಳನ್ನು​ ಕೂಡ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಪೊಲೀಸರಿಂದ ಬಂಧನಕ್ಕೊಳಗಾದ ಬಳಿಕ ಜಾಮೀನು ಸಿಕ್ಕಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net