ಚಲಿಸುತ್ತಿದ್ದ ರೈಲಿನಲ್ಲಿ ಕಾಣಿಸಿಕೊಂಡ ಬೆಂಕಿ: ಸೇತುವೆ ಮೇಲಿಂದಲೇ ನದಿಗೆ ಹಾರಿದ ಮಹಿಳೆ!

Train
Published on

ಬೋಸ್ಟನ್​: ಸೇತುವೆ ಮೇಲೆ ಬರುತ್ತಿದ್ದಂತೆ ಚಲಿಸುತ್ತಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇತ್ತ ಪ್ರಯಾಣಿಕರು ಇಳಿಯಲೂ ಆಗದೇ, ಅಲ್ಲಿ ಇರಲೂ ಆಗದ ಪರಿಸ್ಥಿತಿಯಲ್ಲೂ ಮಹಿಳೆಯೊಬ್ಬಳು ಪ್ರಾಣ ಉಳಿಸಿಕೊಳ್ಳಲು ನದಿಗೆ ಹಾರಿರುವ ಘಟನೆ ನಡೆದಿದೆ.

ಶುಕ್ರವಾರ ಬೆಳಗ್ಗೆ ಅಮೆರಿಕದ ಬೋಸ್ಟನ್​ ಹೊರವಲಯದಲ್ಲಿರುವ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಮೇಲಿಂದ ಮಹಿಳೆ ನದಿಗೆ ಹಾರಿ ಪ್ರಾಣ ರಕ್ಷಿಸಿಕೊಂಡಿದ್ದಾರೆ.

ರೈಲಿನಲ್ಲಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಪ್ರಯಾಣಿಕರು ಕಿಟಕಿ ಸಹಾಯದಿಂದಲೇ ಹೊರಬರಲು ಹರಸಾಹಸ ಪಡುತ್ತಿದ್ದರೆ, ಇನ್ನೇನು ಬೆಂಕಿ ತಗುಲಬೇಕೆನ್ನುವಷ್ಟರಲ್ಲೇ ಮಹಿಳೆ ನದಿಗೆ ಹಾರಿದ್ದಾರೆ. ಇದೀಗ ಮಹಿಳೆ ನದಿಯಲ್ಲಿ ಹಾರಿ ಪ್ರಾಣ ರಕ್ಷಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದೆ.

ಬಹುತೇಕ ಎಲ್ಲಾ ಪ್ರಯಾಣಿಕರನ್ನು ಶೀಘ್ರದಲ್ಲೇ ರೈಲಿನಿಂದ ಹೊರತರುವ ಪ್ರಯತ್ನ ಮಾಡಲಾಯಿತು. ವೆಲ್ಲಿಂಗ್ಟನ್​ ಮತ್ತು ಅಸೆಂಬ್ಲಿ ನಿಲ್ದಾಣದ ನಡುವೆ ಇದ್ದ ಸೇತುವೆ ಮೇಲೆ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ನ್ಯೂಯಾರ್ಕ್​ ಟೈಮ್ಸ್​ ವರದಿ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net