More

    ಎರಡು ಮೂರು ತಲೆಮಾರಿನವರಿಗೆ ಆಸ್ತಿ ಮಾಡಿದ್ದೇವೆಂಬ ಹೇಳಿಕೆ: ಇದು ನನಗೆ ಗೊತ್ತೇ ಇಲ್ಲ ಅಂದ್ರು ಪರಮೇಶ್ವರ್​!

    ಮೈಸೂರು: ಆಸ್ತಿ ಮಾಡಿಕೊಂಡಿದ್ದಕ್ಕಾದರೂ ಕಾಂಗ್ರೆಸ್​ ಋಣ ತೀರಿಸಬೇಕೆಂಬ ಮಾಜಿ ಸಚಿವ ರಮೇಶ್​ ಕುಮಾರ್​ ಅವರ ಹೇಳಿಕೆಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಇದು ಅವರ ವೈಯಕ್ತಿಕ ಹೇಳಿಕೆಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಮೈಸೂರಿನಲ್ಲಿ ಮಾತನಾಡಿರುವ ಅವರು, ರಮೇಶ್​ ಕುಮಾರ್ ಅವರು ಯಾರನ್ನೋ ಉದ್ದೇಶಿಸಿ ಏನನ್ನೋ ಹೇಳಿದ್ದಾರೆ ಎಂಬುದು ಗೊತ್ತಿಲ್ಲ, ಈ ಬಗ್ಗೆ ಆಂತರಿಕವಾಗಿ ಚರ್ಚಸಲಾಗುವುದು ಎಂದು ಹೇಳಿದ್ದಾರೆ.

    ಜಾರಿ ನಿರ್ದೇಶನಾಲಯದಿಂದ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ವಿಚಾರಣೆ ವಿರೋಧಿಸಿ ಕಾಂಗ್ರೆಸ್​ ಪ್ರತಿಭಟನೆ ಕೈಗೊಂಡಿದ್ದು, ಈ ನಡುವೆ ನಾವು ಸಾಕಷ್ಟು ಆಸ್ತಿ ಮಾಡಿಕೊಂಡಿದ್ದೇವೆ,ಅದರ ಋಣ ತೀರಸೇಬೇಕೆಂದು ರಮೇಶ್​ ಕುಮಾರ್ ಹೇಳಿಕೆ ನೀಡಿದ್ದರು.

    ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಸಿಎಂ ಆಯ್ಕೆ: ಸಿಎಂ ಹುದ್ದೆಗೆ ಪೈಪೋಟಿಯಾಗುತ್ತಿದೆ ಎಂದರೆ ಅದರ ಅದರ ಅರ್ಥ ನಮ್ಮ ಪಕ್ಷದಲ್ಲಿ ಸಮರ್ಥ ನಾಯಕರು ತುಂಬಾ ಇದ್ದಾರೆ.ಮೊದಲ ಆದ್ಯತೆ ಪಕ್ಷವನ್ನು ಅಧಿಕಾರಕ್ಕೆ ತರುವುದು. ನಂತರ ಸಿಎಂ ಆಯ್ಕೆ ಸಿಎಲ್‌ಪಿಯಲ್ಲಿ ಆಗುತ್ತದೆ.ಪಕ್ಷ ಬಹುಮತ ಪಡೆದ ನಂತರ ಆಕಾಂಕ್ಷಿಗಳು ಪ್ರಯತ್ನ ಪಡಲಿ, ಐದರಿಂದ ಆರು ಜನರಿದ್ದಾರೆ ಎಲ್ಲರೂ ಪ್ರಯತ್ನ ಪಡಲಿ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದರು.

    ರಾಜ್ಯ ಸರ್ಕಾರದಿಂದ 40 ಪರ್ಸೆಂಟ್ ಕಮಿಷನ್ ವಿಚಾರ ಬಗ್ಗೆ ಮಾತನಾಡಿ, ವಿಧಾನಸೌಧದ ಪ್ರತಿ ಕಂಬಕ್ಕೂ ಇದು ಗೊತ್ತಿದೆ.ಯಾವ ಕಂಬ ತಟ್ಟಿದರು ಕಮಿಷನ್ ಬಗ್ಗೆ ಹೇಳುತ್ತದೆ.ನಾವು 5 ರಿಂದ 10 ಪರ್ಸೆಂಟ್ ಪಡೆಯುತ್ತಾರೆ ಅಂದುಕೊಂಡಿದ್ದೋ.ಆದರೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹೇಳಿದ ಮೇಲೆ ಗೊತ್ತಾಯಿತು.ಈಗ ಅದು ಇನ್ನೂ ಹೆಚ್ಚಾಗಿರಬಹುದು. ಈ ಬಗ್ಗೆಯೂ ಪರಿಶೀಲನೆ ಮಾಡುತ್ತೇವೆ.ನಿಷ್ಕ್ರಿಯ ಸಿಎಂ ಇದ್ದಾಗ ಇಂತಹ ಹಗರಣ ನಡೆಯುತ್ತವೆ. ಬೆಲೆ ಏರಿಕೆ, ಪಿಎಸ್‌ಐ ಹಗರಣದಂತಹ ಘಟನೆಗಳು ಸಾಮಾನ್ಯವಾಗಿ ಬಿಟ್ಟಿದೆ.ಜನ ಸಾಮಾನ್ಯರ ಆಶಯದಂತೆ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು. (ಏಜೆನ್ಸೀಸ್)

    ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ ಸಹೋದರನಿಗೆ ಬೆಂಗಳೂರು ಪೊಲೀಸರಿಂದ ಸಮನ್ಸ್​ ಜಾರಿ: ಕಾರಣ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts