

India: ಅಮೆರಿಕ ಭಾರತದ ಮೇಲೆ ಶೇ.50 ರಷ್ಟು ಸುಂಕ ವಿಧಿಸಿದ್ದು, ಇದು ಎರಡೂ ದೇಶಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುತ್ತಿದೆ. ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಹದಗೆಡುತ್ತಿದೆ. ಭಾರತವನ್ನು ಶತ್ರುವಿನಂತೆ ನಡೆಸಿಕೊಳ್ಳುವುದು ಸರಿಯಲ್ಲ ಎಂದು ವಿಶ್ವಸಂಸ್ಥೆಯ ಮಾಜಿ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರಂಪ್‌ಗೆ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕವು ಭಾರತೀಯ ಸರಕುಗಳ ಮೇಲೆ ಶೇ.25 ರಷ್ಟು ಸುಂಕವನ್ನು ವಿಧಿಸಿದ ನಂತರ, ಆಗಸ್ಟ್ 27 ರಿಂದ ಜಾರಿಗೆ ಬರುವಂತೆ ಹೆಚ್ಚುವರಿಯಾಗಿ ಶೇ.25 ರಷ್ಟು ಸುಂಕವನ್ನು ಘೋಷಿಸಿದ್ದು, ಒಟ್ಟು ಸುಂಕವನ್ನು ಶೇ.50 ಕ್ಕೆ ಹೆಚ್ಚಿಸಿದೆ.
ಸುಂಕಗಳ ಕುರಿತು ಅಮೆರಿಕ ಮತ್ತು ಭಾರತದ ನಡುವೆ ಹೆಚ್ಚುತ್ತಿರುವ ವಿವಾದದ ಬಗ್ಗೆ ವಿಶ್ವಸಂಸ್ಥೆಯ ಮಾಜಿ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲೆ ಪ್ರತಿಕ್ರಿಯಿಸಿ, ಭಾರತವನ್ನು ಶತ್ರುವಾಗಿ ಅಲ್ಲ, ಪ್ರಮುಖ ಪ್ರಜಾಸತ್ತಾತ್ಮಕ ಪಾಲುದಾರನಾಗಿ ಪರಿಗಣಿಸಬೇಕು. ನಮ್ಮ 25 ವರ್ಷಗಳ ಹಳೆಯ ಸಂಬಂಧದ ಬಲವನ್ನು ದುರ್ಬಲಗೊಳಿಸುವುದು ದೊಡ್ಡ ತಪ್ಪು ಎಂದು ಹ್ಯಾಲೆ ಎಚ್ಚರಿಸಿದ್ದಾರೆ.
ಭಾರತವನ್ನು ಯಾವಾಗಲೂ ಪ್ರಜಾಪ್ರಭುತ್ವ ಪಾಲುದಾರ ಎಂದು ನೋಡಬೇಕು. ಭಾರತವನ್ನು ಚೀನಾದಂತೆ ಎದುರಾಳಿ ಎಂದು ಪರಿಗಣಿಸಬಾರದು. ರಷ್ಯಾದಿಂದ ತೈಲ ಖರೀದಿಸುತ್ತದೆ ಎಂಬ ಕಾರಣಕ್ಕಾಗಿ ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸುವುದು ಸರಿಯಲ್ಲ. ಅಮೆರಿಕದ ಪ್ರತಿಸ್ಪರ್ಧಿ ಚೀನಾ ನಿರ್ಬಂಧಗಳಿಂದ ತಪ್ಪಿಸಿಕೊಂಡಿದೆ ಮತ್ತು ಭಾರತದ ಮೇಲೆ ಸುಂಕದ ಒತ್ತಡ ಹೇರಲಾಗುತ್ತಿದೆ. ಅಮೆರಿಕ ಮತ್ತು ಭಾರತದ ನಡುವಿನ ಪಾಲುದಾರಿಕೆ ಚೀನಾ ವಿರುದ್ಧ ಬಲವಾದ ಹೆಜ್ಜೆಯಾಗಬಹುದು. ಈ ಸಂಬಂಧ ದುರ್ಬಲಗೊಂಡರೆ, ಅದು ಕಾರ್ಯತಂತ್ರದ ವಿಪತ್ತಾಗಿ ಪರಿಣಮಿಸುತ್ತದೆ. ಚೀನಾಕ್ಕೆ ಹೋಲಿಸಿದರೆ ಭಾರತದ ಪ್ರಜಾಪ್ರಭುತ್ವದ ಬೆಳವಣಿಗೆ ಮುಕ್ತ ಜಗತ್ತಿಗೆ ಬೆದರಿಕೆಯಲ್ಲ. ಭಾರತವು ಅಮೆರಿಕಕ್ಕೆ ಪ್ರಮುಖ ಪೂರೈಕೆ ಸರಪಳಿ ಆಯ್ಕೆಯಾಗಬಹುದು ಎಂದಿದ್ದಾರೆ.
ಭಾರತವು ಚೀನಾದಂತೆ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ ದೇಶವಾಗಿದೆ. ಜವಳಿ, ಅಗ್ಗದ ಮೊಬೈಲ್‌ಗಳು, ಸೌರ ಫಲಕಗಳಂತಹ ದೇಶೀಯವಾಗಿ ತಕ್ಷಣ ಉತ್ಪಾದಿಸಲು ಸಾಧ್ಯವಾಗದಿದ್ದರೆ ಅದು ಅಮೆರಿಕದ ಜನರ ಅಗತ್ಯಗಳನ್ನು ಹೇಗೆ ಪೂರೈಸಬಹುದು ಎಂದು ಸಲಹೆ ನೀಡಿದ್ದಾರೆ.
ಏಷ್ಯಾದಲ್ಲಿ ಚೀನಾದ ಪ್ರಾಬಲ್ಯವನ್ನು ವಿರೋಧಿಸುವ ಏಕೈಕ ದೇಶ (ಭಾರತ)ದೊಂದಿಗಿನ ಸಂಬಂಧಗಳಲ್ಲಿನ 25 ವರ್ಷಗಳ ಉತ್ಕರ್ಷವನ್ನು ನಿಲ್ಲಿಸುವುದು ಕಾರ್ಯತಂತ್ರದ ವಿಪತ್ತು. ಚೀನಾವನ್ನು ಎದುರಿಸಲು ಅಮೆರಿಕ ಮತ್ತು ಭಾರತದ ನಡುವಿನ ಪಾಲುದಾರಿಕೆಯು ಸ್ವಯಂಪ್ರೇರಿತ ನಿರ್ಧಾರವಾಗಿರಬೇಕು ಎಂದು ಅವರು ಹೇಳಿದ್ದಾರೆ.
ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದ್ದು, ಶೀಘ್ರದಲ್ಲೇ ಜಪಾನ್ ಅನ್ನು ಹಿಂದಿಕ್ಕಲಿದೆ. ಭಾರತದ ಶಕ್ತಿ ಬೆಳೆದಂತೆ, ಚೀನಾದ ಮಹತ್ವಾಕಾಂಕ್ಷೆಗಳು ಕಡಿಮೆಯಾಗುತ್ತವೆ.ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ವಿವಾದವನ್ನು ಶಾಶ್ವತ ಬಿರುಕು ಆಗಿ ಪರಿವರ್ತಿಸುವುದು ದೊಡ್ಡ ತಪ್ಪು. ಚೀನಾ ಈ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುವ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು.