

ನವದೆಹಲಿ: ಕರೊನಾ ನಿಯಂತ್ರಣಕ್ಕೆ ಲಸಿಕೆ ಸಜ್ಜಾಗದಿದ್ದರೆ ದೇಶದಲ್ಲಿ ಮುಂದಿನ ವರ್ಷದ (ಮಾರ್ಚ್- ಮೇ) ವೇಳೆಗೆ ಪ್ರತಿದಿನ ಮೂರು ಲಕ್ಷ ಜನರಿಗೆ ಸೋಂಕು ಕಾಣಿಸಿಕೊಳ್ಳಲಿದೆ...!
ಇದೇ ವೇಳೆ ಜಗತ್ತಿನಲ್ಲಿ 25 ಕೋಟಿ ಜನರಿಗೆ ಸೋಂಕು ತಗುಲಲಿದ್ದು, ಕನಿಷ್ಠ 18 ಲಕ್ಷ ಜನರು ಮೃತಪಡಲಿದ್ದಾರೆ ಎಂದು ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಸಂಶೋಧಕರು ಆತಂಕಕಾರಿ ಮುನ್ಸೂಚನೆ ನೀಡಿದ್ದಾರೆ.
ಕರೊನಾ ಸೋಂಕಿನ ಜಾಗತಿಕ ಅಂದಾಜು ಎಂಬ ಶೀರ್ಷಿಕೆಯ ಈ ಅಧ್ಯಯನ ವರದಿಯನ್ನು ಹಾಜೀರ್ ರಹ್ಮಾನ್ದಾದ್, ಟಿ.ವೈ. ಲೀಮ್, ಜಾನ್ ಸ್ಟರ್ಮನ್ ಈ ಅಂದಾಜು ಮಾಡಿದ್ದಾರೆ. ಅದರಲ್ಲೂ ಭಾರತದಲ್ಲಿ ಅತಿ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಲಿವೆ ಎಂದು ತಿಳಿಸಿದ್ದಾರೆ.
84 ದೇಶಗಳಲ್ಲಿ ವರದಿಯಾಗುತ್ತಿರುವ ಪ್ರಕರಣಗಳು, ಸಾವು, ಪರೀಕ್ಷೆ ಹಾಗೂ ಇತರ ಹಲವು ಅಂಶಗಳನ್ನು ಪರಿಗಣಿಸಿ ಈ ಅಧ್ಯಯನ ಮಾಡಲಾಗಿದೆ. ಇದು ಜಗತ್ತಿನ ಶೇ.60 ಜನಸಂಖ್ಯೆಯನ್ನು ಒಳಗೊಂಡ ಅಧ್ಯಯನವಾಗಿದೆ.
ಸದ್ಯ ಅಮೆರಿಕ 30 ಲಕ್ಷ ಸೋಂಕಿತರನ್ನು ಒಳಗೊಂಡು, ಅತ್ಯಂತ ಹೆಚ್ಚು ಪ್ರಕರಣಗಳಿರುವ ದೇಶ ಎನಿಸಿದೆ. ಆದರೆ, ಸದ್ಯದಲ್ಲಿಯೇ ಅಮೆರಿಕವನ್ನು ಮೀರಿಸಿ ಭಾರತದಲ್ಲಿ ಹೊಸ ಪ್ರಕರರಣಗಳು ವರದಿಯಾಗಲಿವೆ ಎಮದು ಅಂದಾಜಿಸಲಾಗಿದೆ.
ಫೆಬ್ರವರಿ 2021ರ ವೇಳೆಗೆ ಅಮೆರಿಕದಲ್ಲಿ ನಿತ್ಯ 95 ಸಾವಿರ ಪ್ರಕರನಗಳು ವರದಿಯಾಗಿ ಎರಡನೇ ಸ್ಥಾನದಲ್ಲಿರಲಿದೆ. ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ- 21 ಸಾವಿರ ಪ್ರಕರಣ, ಇರಾನ್ -17 ಸಾವಿರ, ಇಂಡೋನೇಷ್ಯಾದಲ್ಲಿ ಪ್ರತಿದಿನದ ಪ್ರಕರಣಗಳ ಸಂಖ್ಯೆ 13 ಸಾವಿರ ಇರಲಿದೆ ಎಂದು ಲೆಕ್ಕ ಹಾಕಲಾಗಿದೆ.
ಈ ಅಂಕಿ-ಸಂಖ್ಯೆಗಳು ಸದ್ಯಕ್ಕಿಂತ 12 ಪಟ್ಟು ಹೆಚ್ಚಾಗಿವೆ. ಸಾವಿನ ಪ್ರಮಾಣವನ್ನು ಶೇ.50ಕ್ಕೂ ಅಧಿಕ. ಆದರೆ, ಪಸ್ತುತ ಎಲ್ಲ ದೇಶಗಳಲ್ಲಿ ಸಾಮುದಾಯಿಕ ಸೋಂಕಿನ ಪ್ರಮಾಣಕ್ಕಿಂತ ಕಡಿಮೆ ಪ್ರಕರಣಗಳಿವೆ ಎಂದು ಹೇಳಿದೆ.