ಭಾರತ ದುರ್ಬಲ ದೇಶವಲ್ಲ ಎಂದ ರಕ್ಷಣಾ ಸಚಿವ ಸಿಂಗ್

rajnath singh
Published on

ನವದೆಹಲಿ: ಭಾರತ ದುರ್ಬಲ ದೇಶವಾಗಿ ಉಳಿದುಕೊಂಡಿಲ್ಲ. ದೇಶದ ಗಡಿ, ಘನತೆ, ಗೌರವದ ವಿಷಯದಲ್ಲಿ ರಾಜಿಯಿಲ್ಲ. ನಮ್ಮ ಭದ್ರತಾ ಪಡೆಗಳು ಸಶಕ್ತವಾಗಿವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.

ಜಮ್ಮು- ಕಾಶ್ಮೀರದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ವರ್ಚುಯಲ್ ರ‍್ಯಾಲಿ ಯಲ್ಲಿ ಮಾತನಾಡಿದ ಅವರು, ‘ನಮ್ಮ ದೇಶ ಮೊದಲಿನಂತೆ ದುರ್ಬಲವಾಗಿಲ್ಲ. ಸೇನೆ ಹೆಚ್ಚು ಬಲಯುತವಾಗಿದೆ. ಹಾಗಂತ ಬೇರೆಯವರನ್ನು ಹೆದರಿಸುವುದು ನಮ್ಮ ಉದ್ದೇಶವಲ್ಲ, ಸ್ವರಕ್ಷಣೆಯನ್ನಷ್ಟೇ ನಮ್ಮ ಕಾಳಜಿ ಎಂದಿದ್ದಾರೆ. 370ನೇ ವಿಧಿ ರದ್ದತಿಯ ನಂತರ ಕಾಶ್ಮೀರದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ಇದರಿಂದ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶದಲ್ಲಿರುವವರು ಭಾರತಕ್ಕೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಪಿಒಕೆ ಭಾರತದ ಅವಿಭಾಜ್ಯ ಅಂಗ ಎಂದು ಎಲ್ಲರು ಒಪು್ಪವಂತೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ಗಡಿ ಬಿಕ್ಕಿಟ್ಟನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಚೀನಾ ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net