

ಪಾಲಸಮುದ್ರಂ (ಆಂಧ್ರಪ್ರದೇಶ): ಅಯೋಧ್ಯೆಯ ರಾಮ ಮಂದಿರದಲ್ಲಿ ಜನವರಿ 22ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇಡೀ ದೇಶ ರಾಮಮಯವಾಗುತ್ತಿದೆ. ಭಕ್ತಿಯಲ್ಲಿ ಮಿಂದೇಳುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಶ್ರೀರಾಮನ ಜೀವನ ಹಾಗೂ ಸ್ಪೂರ್ತಿಯ ಹರವು ಭಕ್ತಿಯನ್ನೂ ಮೀರಿದ್ದಾಗಿದ್ದು ಅವರು ಸಾಮಾಜಿಕ ಜೀವನದಲ್ಲಿ ಉತ್ತಮ ಆಡಳಿತದ ಒಂದು ಸಂಕೇತವಾಗಿದ್ದಾರೆ ಎಂದು ಕಸ್ಟಮ್್ಸ, ಪರೋಕ್ಷ ತೆರಿಗೆಗಳು ಮತ್ತು ಮಾದಕದ್ರವ್ಯಗಳ ರಾಷ್ಟಿŠೕಯ ಅಕಾಡೆಮಿಯ (ಎನ್ಎಸಿಐಎನ್) ಹೊಸ ಕ್ಯಾಂಪಸ್ ಉದ್ಘಾಟಿಸಿದ ನಂತರ ಮಾತನಾಡಿದ ಮೋದಿ ಹೇಳಿದರು. ಉತ್ತಮ ಆಡಳಿತಕ್ಕಾಗಿ ಎನ್ಎಸಿಐಎನ್ ಹೊಸ ಆಯಾಮಗಳನ್ನು ಸೖಷ್ಟಿಸಿ ದೇಶದಲ್ಲಿ ವಾಣಿಜ್ಯ ಮತ್ತು ವ್ಯಾಪಾರವನ್ನು ವೖದ್ಧಿಸಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು. ತಮ್ಮ ಭಾಷಣದಲ್ಲಿ ರಾಮಾಯಣದ ಅನೇಕ ದೃಷ್ಟಾಂತಗಳನ್ನು ಉಲ್ಲೇಖಿಸಿ, ಉತ್ತಮ ಸಾಮಾಜಿಕ ಆಡಳಿತದ ಸಂಕೇತವಾಗಿರುವ ಶ್ರೀರಾಮ ಈ ಸಂಸ್ಥೆಗೆ ಸ್ಪೂರ್ತಿಯಾಗಬಲ್ಲರು ಎಂದು ಅಭಿಪ್ರಾಯಪಟ್ಟರು.
ಲೇಪಾಕ್ಷಿ ಮಂದಿರದಲ್ಲಿ ಪ್ರಾರ್ಥನೆ: ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿರುವ ಲೇಪಾಕ್ಷಿಯ ಐತಿಹಾಸಿಕ ವೀರಭದ್ರ ದೇವಸ್ಥಾನದಲ್ಲಿ ಮೋದಿ ಮಂಗಳವಾರ ಪ್ರಾರ್ಥನೆ ಸಲ್ಲಿಸಿದರು. ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಕೇವಲ ಆರು ದಿನ ಬಾಕಿ ಇರುವಾಗ ರಾಮಾಯಣ ಮತ್ತು ಹಿಂದು ಧರ್ಮದಲ್ಲಿ ಮಹತ್ವ ಹೊಂದಿರುವ ಲೇಪಾಕ್ಷಿ ಮಂದಿರದಲ್ಲಿ ಮೋದಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಮಂದಿರದಲ್ಲಿ ರಾಮನನ್ನು ಸ್ತುತಿಸುವ ಹಾಡುಗಳನ್ನು ಹಾಡಿದ ಮೋದಿ, ತೆಲುಗಿನಲ್ಲಿ ಹಾಡಲಾದ ಮಂತ್ರಗಳನ್ನು ಆಲಿಸಿದರು. ಅಲ್ಲದೆ ರಾಮ, ಲಕ್ಷ್ಮಣ, ಸೀತೆ ಮತ್ತು ರಾವಣ ಪಾತ್ರಗಳನ್ನು ಒಳಗೊಂಡ ಬೊಂಬೆಯಾಟವನ್ನೂ ವೀಕ್ಷಿಸಿದರು. ಲೇಪಾಕ್ಷಿ, ಸೀತೆಯನ್ನು ಅಪಹರಿಸಿದ ರಾವಣನಿಂದ ಗಂಭೀರವಾಗಿ ಗಾಯಗೊಂಡ ಜಟಾಯು ಪಕ್ಷಿ ಬಿದ್ದ ಸ್ಥಳವೆಂದು ಐತಿಹ್ಯ ಹೇಳುತ್ತದೆ. ರಾವಣ ದಕ್ಷಿಣದತ್ತ ಸೀತೆಯನ್ನು ಒಯ್ಯುತ್ತಿದ್ದಾನೆ ಎಂದು ಮರಣಶಯ್ಯೆಯಲ್ಲಿದ್ದ ಜಟಾಯು ರಾಮನಿಗೆ ಹೇಳುತ್ತದೆ. ಜಟಾಯುಗೆ ರಾಮ ಮೋಕ್ಷ ಪ್ರಾಪ್ತಿ ಮಾಡುತ್ತಾನೆ ಎಂದೂ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಲೇಪಾಕ್ಷಿಗೂ ಮುನ್ನ ಮೋದಿ, ಮಹಾರಾಷ್ಟŠದ ನಾಸಿಕ್ನಲ್ಲಿರುವ ಶ್ರೀ ಕಾಲ ರಾಮ ದೇವಸ್ಥಾನಕ್ಕೆ ಭೇಟಿ ನೀಡಿದರು.
ಪ್ರಧಾನಮಂತ್ರಿ ಕಂಗಳಿಗೆ ನಟಿ ಕಂಗನಾ ಮೆಚ್ಚುಗೆ: ಪ್ರಧಾನಿ ಮೋದಿಯ ಕಣ್ಣುಗಳು ಅವರ ವ್ಯಕ್ತಿತ್ವದ ವಿಶೇಷ ಆಕರ್ಷಣೆಯಾಗಿದೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ವರ್ಣಿಸಿದ್ದಾರೆ. ‘ಮೋದಿ ಕಣ್ಣುಗಳು ಖಡ್ಗಕ್ಕಿಂತ ಹರಿತವೂ ಹೊಳಪುಳ್ಳವೂ ಆಗಿವೆ’ ಎಂದು ಮೋದಿಯ ಚಿತ್ರವೊಂದನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಂಗನಾ ಹೇಳಿದ್ದಾರೆ.
ಕೇರಳದಲ್ಲಿ ರೋಡ್ಶೋ: ಮಂಗಳವಾರ ಕೇರಳಕ್ಕೂ ಭೇಟಿ ನೀಡಿದ ಮೋದಿ, ಬಂದರು ನಗರಿ ಕೊಚ್ಚಿಯಲ್ಲಿ ಬೖಹತ್ ರೋಡ್ಶೋ ನಡೆಸಿದರು. ಎಡ ಜನತಾಂತ್ರಿಕ ರಂಗ (ಎಲ್ಡಿಎಫ್) ಅಧಿಕಾರದಲ್ಲಿದ್ದು ಪ್ರತಿಪಕ್ಷದ ಹಿಡಿತ ಬಲವಾಗಿರುವ ರಾಜ್ಯಕ್ಕೆ ಪ್ರಧಾನಿ ಭೇಟಿ ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವದ್ದಾಗಿದೆ. 1.3 ಕಿ.ಮೀ. ಉದ್ದಕ್ಕೆ ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು, ಎರ್ನಾಕುಳಂ ಮತ್ತು ತ್ರಿಶೂರು ಜಿಲ್ಲೆಗಳಲ್ಲಿ ಖಾಸಗಿ, ಸರ್ಕಾರಿ ಮತ್ತು ಪಕ್ಷದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ ಮೋದಿಯನ್ನು ಆತ್ಮೀಯವಾಗಿ ಸ್ವಾಗತಿಸಿದರು.