ಭಾರತದ್ದೇ ದಿಗ್ವಿಜಯ; ಗಲ್ವಾನ್​ನಿಂದ ಗೊಗ್ರಾವರೆಗೆ ವಾಸ್ತವ ಗಡಿರೇಖೆಯಿಂದ ಚೀನಿಯರನ್ನು ಹೊರಗಟ್ಟಿದ ಸೇನೆ

Galwan
Published on

ನವದೆಹಲಿ: ಚೀನಾ ಹಿಂಸಾತ್ಮಕ ಸಂಘರ್ಷದಲ್ಲಿ ತೊಡಗಿದ್ದರೂ ಗಲ್ವಾನ್​ ಗಡಿಯಿಂದ ಐದು ಕಿ.ಮೀ ದೂರಕ್ಕೆ ಚೀನಿಯರನ್ನು ಹೊರಗಟ್ಟಲು ಭಾರತೀಯ ಯೋಧರು ಯಶಸ್ವಿಯಾಗಿದ್ದಾರೆ.

ಗಡಿಯಿಂದ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿಯನ್ನು ಹಿಮ್ಮೆಟ್ಟಿಸಿರುವುದು ಉಪಗ್ರಹ ಚಿತ್ರಗಳಿಂದ ಸಾಬೀತಾಗಿದೆ. ಚೀನಿಯರು ಮೊದಲು ಎಲ್ಲಿದ್ದರೋ ಅದಕ್ಕಿಂತಲೂ ತುಂಬಾ ಹಿಂದಕ್ಕೆ ಸರಿದಿರುವುದು ಗೊತ್ತಾಗುತ್ತದೆ. ಲಡಾಖ್​ನ ಗೊಗ್ರಾ ಬಿಸಿ ನೀರು ಚಿಲುಮೆ ಪ್ರದೇಶದಲ್ಲಿ ಬೀಡು ಬಿಟ್ಟವರನ್ನು ತಾವಿದ್ದ ಪ್ರದೇಶದಿಂದ ಹಿಂದಕ್ಕೆ ಸರಿಯುವಂತೆ ಮಾಡಲಾಗಿದೆ.

ಖಾಸಗಿ ಒಡೆತನದ ಗೂಢಚಾರ ಸಂಸ್ಥೆ ಹಾಕ್​ ಐ ಉಪಗ್ರಹ ಚಿತ್ರಗಳು ಕಳೆದ ಮೇ ತಿಂಗಳಲ್ಲಿ ಗಲ್ವಾನ್​ ಪ್ರದೇಶದಲ್ಲಿ ಚೀನಾ ಸೇನೆ, ಯೋಧರನ್ನು ಸಾಗಿಸುವ ವಾಹನಗಳು ಹಾಗೂ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಪೇರಿಸಿರುವುದು ಕಂಡು ಬಂದಿತ್ತು. ಈಗ ಚೀನಿಯರು ಗಲ್ವಾನ್​ ಪ್ರದೇಶದ ಆಚೆಗೆ ನೂಕಲ್ಪಟ್ಟಿದ್ದಾರೆ.

ಭಾರತೀಯ ಯೋಧರು ಪರ್ವತ ಪ್ರದೇಶದಲ್ಲಿದ್ದ ಚೀನಿಯರನ್ನು ಐದು ಕಿ.ಮೀ.ವರೆಗೆ ದೂರಕ್ಕೆ ಕಳುಹಿಸಿದ್ದಾರೆ ಎಂದು ಐಪಿಸಿಎಸ್​ ಹಿರಿಯ ಅಧಿಕಾರಿ ಅಭಿಜಿತ್​ ಅಯ್ಯರ್​ ಮಿಶ್ರಾ ತಿಳಿಸಿದ್ದಾರೆ.

ಸದ್ಯ ಚೀನಾ ತನ್ನ ಗಡಿಯಲ್ಲಿ ಭಾರಿ ಸಂಖ್ಯೆಯಲ್ಲಿ ಸೇನೆಯನ್ನು ಜಮಾಯಿಸಿದೆ. ಹಿರಿಯ ಶ್ರೇಣಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಸಂಚಾರಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಅಂಬುಲೆನ್ಸ್​ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿರುವುದು ಗೊತ್ತಾಗುತ್ತದೆ. ಚೀನಾ ಕಡೆಯಲ್ಲಿ ಭಾರಿ ಪ್ರಮಾನದಲ್ಲಿ ಸಾವು-ನೋವು ಸಂಭವಿಸಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net