

ನವದೆಹಲಿ: ಲಡಾಖ್ನ ಗಲ್ವಾನ್ ಪ್ರದೇಶದಲ್ಲಿ ಹಿಂಸಾತ್ಮಕ ಸಂಘರ್ಷ ನಡೆಸಿದ್ದ ಚೀನಾಗೆ ಭಾರತ ಸದ್ದಿಲ್ಲದೇ ಭಾರಿ ತಿರುಗೇಟು ನೀಡಿದೆ.
ಚೀನಾ ವಸ್ತುಗಳನ್ನು ಬಹಿಷ್ಕರಿಸಿ (ಬಾಯ್ಕಾಟ್ ಚೀನಾ) ಕೂಗಿನ ನಡುವೆಯೇ ಚೀನಾ ಆರ್ಥಿಕತೆಗೆ ಭಾರತ ದೊಡ್ಡ ಹೊಡೆತ ನೀಡಿದ್ದಲ್ಲದೆ, ತನ್ನ ವ್ಯಾಪಾರ ಕೊರತೆಯನ್ನು ಐದು ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿಸಿಕೊಂಡಿದೆ.
ಚೀನಾದೊಂದಿಗಿನ ವ್ಯಾಪಾರ ಕೊರತೆ ( ಆಮದು ಹಾಗೂ ರಫ್ತಿನ ನಡುವಿನ ಅಂತರ) 48.7 ಬಿಲಿಯನ್ ಡಾಲರ್ಗೆ ಕಡಿಮೆ ಮಾಡಿದೆ. ಕಳೆದ ವರ್ಷ ವ್ಯಾಪಾರ ಕೊರತೆ ಮೊತ್ತ 53.6 ಬಿಲಿಯನ್ ಡಾಲರ್ ಆಗಿತ್ತು. ಇದು ಐದು ವರ್ಷಗಳಲ್ಲಿಯೇ ಅತ್ಯಂತ ಕಡಿಮೆಯಾಗಿದೆ. ಇದರರ್ಥ ಈ ವರ್ಷ ಚೀನಾದಿಂದ ಆಮದು ಕಡಿಮೆಯಾಗಿದ್ದು, ರಫ್ತು ಗಣನೀಯವಾಗಿ ಹೆಚ್ಚಿದೆ.
2019-20ರಲ್ಲಿ ಚೀನಾದಿಂದ ಆಮದು ಪ್ರಮಾಣ ಶೇ.7 ಕಡಿಮೆಯಾಗಿದ್ದು, 65 ಬಿಲಿಯನ್ ಡಾಲರ್ ಆಗಿದೆ. ಕಳೆದ ವರ್ಷದ ಈ ಪ್ರಮಾಣ 2014-15ರಲ್ಲಿದ್ದ ಪ್ರಮಾಣವನ್ನು ಸರಿದೂಗಿಸಿದೆ. ಕಳೆ ಕೆಲ ತಿಂಗಳಿನಿಂದ ಆಮದನ್ನು ತಗ್ಗಿಸಲು ಸರ್ಕಾರ ಕೈಗೊಂಡಿದ್ದ ಕ್ರಮಗಳು ಫಲ ನೀಡಿವೆ ಎಂದೇ ವಿಶ್ಲೇಷಿಸಲಾಗಿದೆ.
ಭಾರತ ಆಮದನ್ನು ತಗ್ಗಿಸಿ ರಫ್ತು ಹೆಚ್ಚಿಸಲು ಮುಂದಾಗಿದೆ ಎಂದರ್ಥವಲ್ಲ. ಆದರೆ, ಆರ್ಥಿಕತೆಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಳೆದ ಕೆಲ ತಿಂಗಳಿನಿಂದ ಶ್ರಮಿಸಲಾಗುತ್ತಿತ್ತು. ಅದು ಪರಿಣಾಮ ನಮ್ಮ ಮುಂದಿದೆ ಎಂದು ವಾಣಿಜ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದಡಿಯಲ್ಲಿ (ಆರ್ಇಸಿಇಪಿ) ಒಪ್ಪಂದದಿಂದ ದೂರವುಳಿಯಲು ಕೈಗೊಂಡ ನಿರ್ಧಾರ ಹಾಗೂ ಸಬ್ಸಿಡಿ ಸರಕುಗಳು ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಆಗಮಿಸುವುದಕ್ಕೆ ತಡೆ ಮೊದಲಾದ ಕಾರಣಗಳಿಂದ ವ್ಯಾಪಾರ ಕೊರತೆ ಕಡಿಮೆಯಾಗಿದೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚೀನಾದಿಂದ ಆಮದು ಕಡಿಮೆಯಾಗಿದ್ದಕ್ಕೆ, ಭಾರತಕ್ಕೆ ಅತಿ ಹೆಚ್ಚು ಆಮದು ಮಾಡಿದ ರಾಷ್ಟ್ರವಾಗಿ ಅಮೆರಿಕ ಹೊರಹೊಮ್ಮಿದೆ. ಅಮೆರಿಕದೊಂದಿಗೆ 88 ಬಿಲಿಯನ್ ಡಾಲರ್ ವಹಿವಾಟು ನಡೆಸಿದ್ದರೆ, ಭಾರತದೊಂದಿಗೆ ಚೀನಾದ ವಹಿವಾಟು 82 ಬಿಲಿಯನ್ ಡಾಲರ್ಗೆ ಇಳಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.