More

    ಚೀನಾ ಸಂಘರ್ಷದಲ್ಲಿ ಬಲಿಯಾದ ಯೋಧನ ಕುಟುಂಬಕ್ಕೆ ಐದು ಕೋಟಿ ರೂ., ಪತ್ನಿಗೆ ಸಹಾಯಕ ಆಯುಕ್ತೆ ಹುದ್ದೆ ನೀಡಿದ ತೆಲಂಗಾಣ

    ಹೈದರಾಬಾದ್​: ಲಡಾಖ್​ನ ಗಲ್ವಾನ್​ ಪ್ರದೇಶದಲ್ಲಿ ಚೀನಿಯರ ಅತಿಕ್ರಮಣ ತೆರವು ಕಾರ್ಯಾಚರಣೆ ವೇಳೆ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ ವೀರ ಮರಣವನ್ನಪ್ಪಿದ ಯೋಧನ ಕುಟುಂಬಕ್ಕೆ ತೆಲಂಗಾಣ ಸರ್ಕಾರ ಐದು ಕೋಟಿ ರೂ.ಗಳ ಪರಿಹಾರ ನೀಡಿದೆ.

    ಇದಷ್ಟೇ ಅಲ್ಲದೇ, ಯೋಧನ ಪತ್ನಿಗೆ ಗ್ರೂಪ್​ 1 ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ತಿಳಿಸಿದೆ. ಆ ಮೂಲಕ ಹುತಾತ್ಮ ಯೋಧನನ್ನು ಗೌರವ ಸಲ್ಲಿಸಿದೆ.

    ಇದನ್ನೂ ಓದಿ; ಸಂಘರ್ಷದ ನಡುವೆಯೇ ಮಹೋನ್ನತ ಸಾಹಸ; 72 ತಾಸುಗಳಲ್ಲಿ ಗಾಲ್ವಾನ್​ ನದಿ ಸೇತುವೆ ಕಾಮಗಾರಿ ಪೂರ್ಣ

    ತೆಲಂಗಾಣ ಸಿಎಂ ಕೆ. ಚಂದ್ರಶೇಖರ್​ ರಾವ್​ ಮೃತನ ಪತ್ನಿಗೆ 4 ಕೋಟಿ ರೂ. ಪರಿಹಾರ ಮೊತ್ತದ ಚೆಕ್​ ಹಸ್ತಾಂತರಿಸಿದರು. ಜತೆಗೆ, ಹುತಾತ್ಮನ ಪಾಲಕರಿಗೆ ಒಂದು ಕೋಟಿ ರೂ. ಚೆಕ್​ ವಿತರಿಸಿದರು.

    ಯೋಧನ ಕುಟುಂಬಕ್ಕೆ ಹೈದರಾಬಾದ್​ನಲ್ಲಿ 6,400 ಚದರಡಿ ವಸತಿ ನಿವೇಶನವನ್ನು ನೀಡಲಿದೆ. ಅಲ್ಲದೇ ಯೋಧನ ಪತ್ನಿಗೆ ಡೆಪ್ಯುಟಿ ಕಲೆಕ್ಟರ್​ ಹುದ್ದೆ ನೀಡುವುದಾಗಿ ಪ್ರಕಟಿಸಿದೆ.

    ಇದನ್ನೂ ಓದಿ; ಲಡಾಖ್​ಗೆ ಹರಿಯುವ ಗಾಲ್ವಾನ್​ ನದಿ ದಿಕ್ಕನ್ನೇ ಬದಲಿಸುತ್ತಿದೆ ಚೀನಾ; ಉಪಗ್ರಹ ಚಿತ್ರಗಳಿಂದ ಕುತಂತ್ರ ಬಯಲು

    ಹಿಂಸಾತ್ಮಕ ಸಂಘರ್ಷದಲ್ಲಿ ಬಲಿಯಾದ ಉಳಿದ 19 ಯೋಧರಿಗೆ ತಲಾ 10 ಲಕ್ಷ ರೂ. ನೀಡುವುದಾಗಿ ತೆಲಂಗಾಣ ಸರ್ಕಾರ ಘೋಷಿಸಿದೆ. ದೇಶವನ್ನು ರಕ್ಷಿಸುತ್ತಿರುವ ಯೋಧರ ಬೆಂಬಲಕ್ಕೆ ಇಡೀ ದೇಶವೇ ನಿಲ್ಲಬೇಕಿದೆ. ನಮ್ಮ ಕಾರ್ಯಗಳು ಅವರಲ್ಲಿ ವಿಶ್ವಾಸ ಹಾಗೂ ಧೈರ್ಯವನ್ನು ಮೂಡಿಸಬೇಕಿದೆ ಎಂದು ಸಿಎಂ ಚಂದ್ರಶೇಖರ್​ ರಾವ್​ ಹೇಳಿದರು.

    ಚೀನಾ ಗುರಿಯಾಗಿಸಿ ಕ್ಷಿಪಣಿ ಸಜ್ಜುಗೊಳಿಸಿರುವ ಜಪಾನ್​; ಯಾವುದರ ಮುನ್ಸೂಚನೆ ಇದು…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts