ಬಾಹ್ಯಾಕಾಶ ವಿಷಯದಲ್ಲಿ ಭಾರತ ಶ್ರೇಷ್ಠ

javalli
ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ ಬೆಂಗಳೂರು ಇಸ್ರೋ ಕೇಂದ್ರದ ನಿರ್ದೇಶಕ ಹನುಮಂತರಾಯ್ ಬಳೂರಗೆ ಅವರನ್ನು ಸನ್ಮಾನಿಸಲಾಯಿತು. ಬಿ.ಎಲ್. ನೀಲಕಂಠಮೂರ್ತಿ, ಶ್ರೀಕಾಂತ್ ಹೆಗಡೆ, ಡಾ. ಕೆ.ನಾಗರಾಜ್, ಡಾ. ರಜಿ ಜೋಸ್ೆ ಇತರರಿದ್ದರು.
Published on

ಹೊಳೆಹೊನ್ನೂರು: ನಿಮ್ಮ ಬಗ್ಗೆ ನೀವು ಅವಲೋಕಿಸಿಕೊಳ್ಳಿ. ಆಗ ಬೇರೆಯವರಿಗಿಂತ ಭಿನ್ನರಾಗುತ್ತೀರಿ ಎಂದು ಇಸ್ರೋ ವಿಜ್ಞಾನಿ ಡಾ. ಹನುಮಂತರಾಯ್ ಬಳೂರಗೆ ಹೇಳಿದರು.

ಜಾವಳ್ಳಿಯ ಜ್ಞಾನದೀಪ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಬೆಂಗಳೂರು ಇಸ್ರೋ ಕೇಂದ್ರದ ನಿರ್ದೇಶಕ ಹನುಮಂತರಾಯ್ ಬಳೂರಗೆ ಅವರೊಂದಿಗಿನ ಬಾಹ್ಯಾಕಾಶ ಅಧ್ಯಯನ ಕುರಿತ ಸಂವಾದ ಮತ್ತು ಕ್ರ್‌ಟಾ ಕಾರ್ನಿವಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೈಜ್ಞಾನಿಕವಾಗಿ ಹಿಂದಿನ ಮತ್ತು ಇಂದಿನ ಇತಿಹಾಸವನ್ನು ಗಮನಿಸಿದರೆ ಸೂರ್ಯ, ನಕ್ಷತ್ರ, ಗ್ರಹಗಳ ಚಲನೆ ಬಗ್ಗೆ ನಮ್ಮ ಹಿರಿಯರೆಲ್ಲರೂ ಕೂಡ ಗಮನಿಸಿದ್ದರು. ಅವರಲ್ಲಿ ಸಾವಿರಾರು ವರ್ಷಗಳ ಅರಿವನ್ನು ಕಾಣುತ್ತೇವೆ. ಬಾಹ್ಯಾಕಾಶದ ಎಲ್ಲ ಚಟುವಟಿಕೆಗಳಲ್ಲಿ ವಿಕಸನ ಸಾಧಿಸಿದ್ದೇವೆ. ಪ್ರಸ್ತುತ ಬಾಹ್ಯಾಕಾಶದಲ್ಲಿ ಭಾರತ ಶ್ರೇಷ್ಠತೆ ಸಾಧಿಸಿದೆ ಎಂದರು.

ತಂತ್ರಜ್ಞಾನ ಮುಂದುವರಿದಂತೆ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಇಂದು ನಾವು ಬಾಹ್ಯಾಕಾಶದ ಅಧ್ಯಯನ ಮಾಡುತ್ತಿದ್ದೇವೆ. ಬಾಹ್ಯಾಕಾಶಕ್ಕೆ ಚಲಿಸಲು ಆಂತರಿಕ ಒತ್ತಡ ನಿಭಾಯಿಸಬೇಕು. ಜತೆಗೆ ಬಾಹ್ಯಶಕ್ತಿಗಳ ಅವಲಂಬನೆಯೂ ಕೂಡ ಅವಶ್ಯಕವಾಗಿದೆ. ಇಂದು ಭಾರತ ಅನ್ಯದೇಶಗಳ ತಂತ್ರಜ್ಞಾನ ಅವಲಂಬಿಸಿಲ್ಲ. ತನ್ನದೇ ಆಗಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಚಂದ್ರಯಾನ -3, ಆದಿತ್ಯ -1 ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.

ಭಾರತವನ್ನು ದೂರದಿಂದ ಗಮನಿಸುತ್ತಿದ್ದ ದೇಶಗಳು ಇಂದು ಭಾರತದ ಜತೆಗೂಡಿ ಬಾಹ್ಯಾಕಾಶ ಅಧ್ಯಯನ ಆರಂಭಿಸಿದ್ದಾರೆ. ಬಾಹ್ಯಾಕಾಶದ ಅಧ್ಯಯನದಲ್ಲಿ ಅನೇಕ ಅಧ್ಯಯನದ ಕ್ಷೇತ್ರಗಳನ್ನು ನಾವು ಇವತ್ತು ಗುರುತಿಸಿದ್ದೇವೆ. ಕೇವಲ ತಂತ್ರಜ್ಞಾನ ಅಲ್ಲ, ಮನಃಶಾಸ್ತ್ರ, ಆರೋಗ್ಯ ಶಾಸ, ಔಷಧ ಕ್ಷೇತ್ರ, ಆಹಾರ ಕ್ಷೇತ್ರ ಮುಂತಾದ ಸಂಶೋಧನಾ ಕ್ಷೇತ್ರಗಳ ಅಧ್ಯಯನ ಅಗತ್ಯ. ಬಾಹ್ಯಾಕಾಶದ ಅಧ್ಯಯನಕ್ಕಾಗಿ ಪೂರ್ವ ತರಬೇತಿಗಳ ಅವಶ್ಯಕತೆ ಮತ್ತು ಅವುಗಳ ಪ್ರಾಮುಖ್ಯತೆ ಗಮನಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಬಿ.ಎಲ್.ನೀಲಕಂಠಮೂರ್ತಿ, ಪ್ರಾಚಾರ್ಯ ಶ್ರೀಕಾಂತ್ ಹೆಗಡೆ, ಪ್ರಾಚಾರ್ಯ ಡಾ. ಕೆ.ನಾಗರಾಜ್, ಉಪಪ್ರಾಚಾರ್ಯ ಡಾ. ರಜಿ ಜೋಸ್ೆ, ಉಪ ಪ್ರಾಚಾರ್ಯೆ ವಾಣಿ ಕೃಷ್ಣಪ್ರಸಾದ್, ಕೆ.ಎಸ್.ಪ್ರಿಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net