ಪಾಕಿಸ್ತಾನದಿಂದ ಬರುವ ಮೇಲ್​, ಪಾರ್ಸೆಲ್​ ಸೇವೆಗಳ ನಿರ್ಬಂಧಿಸಿದ ಭಾರತ | Parcel Services

dk - 2025-05-03T152224.841
Published on

Parcel Services : ಪಾಕಿಸ್ತಾನದಿಂದ ವಾಯು ಮತ್ತು ಮೇಲ್ಮೈ ಮಾರ್ಗಗಳ ಮೂಲಕ ಬರುವ ಎಲ್ಲಾ ವರ್ಗದ ಒಳಬರುವ ಮೇಲ್ ಮತ್ತು ಪಾರ್ಸೆಲ್‌ಗಳ ವಿನಿಮಯವನ್ನು ಭಾರತ ಸರ್ಕಾರ ನಿರ್ಬಂಧಿಸಿದೆ.

ಎಲ್ಲಾ ತರಹದ ಮೇಲ್​ ಹಾಗೂ ಪಾರ್ಸೆಲ್​ಗಳ ವಿನಿಮಯನ್ನು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸಂವಹನ ಸಚಿವಾಲಯ ಶನಿವಾರ ಹೊರಡಿಸಿದ ಸೂಚನೆಯಲ್ಲಿ ಈ ಕುರಿತು ತಿಳಿಸಿದೆ.

ಇದೇ ಏ.22 ರಂದು ಜಮ್ಮು- ಕಾಶ್ಮೀರದ ಪಹಲ್ಗಾಮ್​ನಲ್ಲಿ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ನಂತರ ಪಾಕಿಸ್ತಾನ ವಿರುದ್ಧ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಭಯೋತ್ಪಾದನೆ ದಾಳಿ ಬಳಿಕ ಸಿಂಧು ನದಿ ನೀರು ಒಪ್ಪಂದವನ್ನು ಸ್ಥಗಿತ ಸೇರಿದಂತೆ ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾದ ಎಲ್ಲಾ ವಿಶೇಷ ವೀಸಾಗಳನ್ನು ರದ್ದುಗೊಳಿಸುವುದು. ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಬಂದ್​ ಮತ್ತು ಅಮೃತಸರದ ಅಟ್ಟಾರಿ-ವಾಘಾ ಗಡಿಯನ್ನು ಮುಚ್ಚುವುದು ಸೇರಿದಂತೆ ಪಾಕಿಸ್ತಾನದ ವಿರುದ್ಧ ಸರ್ಕಾರ ಹಲವಾರು ಕ್ರಮಗಳನ್ನು ಭಾರತ ಸರ್ಕಾರ ಈಗಾಲೇ ತೆಗೆದುಕೊಂಡಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net