ಭೀಕರ ಅಪಘಾತ : ಸ್ಥಳದಲ್ಲೇ ಏಳು ಜನರ ದುರ್ಮರಣ, ಹಲವರಿಗೆ ಗಾಯ|Yellowstone

Yellowstone
Published on: 

Yellowstone: ಪಿಕಪ್​​ ಮತ್ತು ಟೂರ್​​ ವ್ಯಾನ್​​ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಸಾವನ್ನಪ್ಪಿದ ಘಟನೆ ಅಮೆರಿಕದ ವ್ಯೋಮಿಂಗ್‌ನ ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನವನದ ಬಳಿ ಗುರುವಾರ (ಮೇ.1) ಸಂಜೆ ನಡೆದಿದೆ.

ಪೂರ್ವ ಇಡಾಹೊದ ಹೆನ್ರಿಯ ಲೇಕ್ ಸ್ಟೇಟ್ ಪಾರ್ಕ್ ಬಳಿಯ ಹೆದ್ದಾರಿಯಲ್ಲಿ ಪಿಕಪ್ ಟ್ರಕ್ ಮತ್ತು ಟೂರ್ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಇಡಾಹೊ ರಾಜ್ಯ ಪೊಲೀಸರು ತಿಳಿಸಿದ್ದಾರೆ.

ಅಪಘಾತದ ನಂತರ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಡಾಡ್ಜ್ ರಾಮ್ ಪಿಕಪ್ ಟ್ರಕ್‌ನ ಚಾಲಕ ಮತ್ತು ಮರ್ಸಿಡಿಸ್ ಪ್ಯಾಸೆಂಜರ್ ವ್ಯಾನ್‌ನಲ್ಲಿದ್ದ ಆರು ಜನರು ಸಾವನ್ನಪ್ಪಿದ್ದಾರೆ.

ಪ್ಯಾಸೆಂಜರ್ ವ್ಯಾನ್‌ 14 ಜನರ ಪ್ರವಾಸಿ ಗುಂಪನ್ನು ಹೊತ್ತೊಯ್ಯುತ್ತಿತ್ತು, ಅಪಘಾತಕ್ಕೆ ಕಾರಣವೇನು ಎನ್ನುವುದಕ್ಕೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶುಕ್ರವಾರ ಬೆಳಿಗ್ಗೆಯವರೆಗೆ ಫ್ರೀಮಾಂಟ್ ಕೌಂಟಿ ಕರೋನರ್ ಕಚೇರಿಯು ಸಾವನ್ನಪ್ಪಿದವರ ಹೆಸರನ್ನು ಬಿಡುಗಡೆ ಮಾಡಿಲ್ಲ. ಜೊತೆಗೆ ಈ ಅಪಘಾತದಲ್ಲಿ ಇಡಾಹೊ ರಾಜ್ಯ ಪೊಲೀಸರು ಎಷ್ಟು ಜನರು ಗಾಯಗೊಂಡಿದ್ದಾರೆಂದು ಹೇಳಿಲ್ಲ. (ಏಜೆನ್ಸೀಸ್​)