

Bihar SIR Exercise: ರಾಷ್ಟ್ರೀಯ ಜನತಾ ದಳದ ರಾಜ್ಯ ಘಟಕವು ಮಂಗಳವಾರ (ಸೆ 30) ರಾತ್ರಿಯಿಂದಲೇ ಬಿಹಾರದಲ್ಲಿನ ವಿಶೇಷ ತೀವ್ರ ಪರಿಷ್ಕರಣೆ ನಂತರ ಬಿಡುಗಡೆಯಾಗಿರುವ ಅಂತಿಮ ಮತದಾರರ ಪಟ್ಟಿಯನ್ನು ಪರಿಶೀಲಿಸುವ ಕಾರ್ಯವನ್ನು ಪ್ರಾರಂಭಿಸಿದ್ದು, ಈ ಹೊಣೆಯನ್ನು ಜಿಲ್ಲಾ ಮಟ್ಟದ ಆರ್‌ಜೆಡಿ ಪದಾಧಿಕಾರಿಗಳಿಗೆ ವಹಿಸಲಾಯಿತು ಅದರ ಬಳಿಕವೇ ಸಂಬಂಧಪಟ್ಟ ಬೂತ್ ಏಜೆಂಟ್‌ಗಳಿಗೆ ನೀಡಲಾಯಿತು ಎಂದು ವರದಿಯಾಗಿದೆ.
ಬುಧವಾರ ಬೆಳಿಗ್ಗೆಯ ವೇಳೆ ಬಿಎಲ್‌ಎಗಳಿಂದ ಪ್ರತಿಕ್ರಿಯೆ ಜಿಲ್ಲೆಯ ಕೇಂದ್ರ ಕಚೇರಿಗೆ ತಲುಪಲು ಪ್ರಾರಂಭಿಸಿದ್ದು, ಬಕ್ಸಾರ್ ಸಂಸದ ಸುಧಾಕರ್ ಸಿಂಗ್ ಬೃಹತ್ ದತ್ತಾಂಶ ಪರಿಶೀಲನಾ ಅಭಿಯಾನದ ಮೇಲ್ವಿಚಾರಣೆ ನಡೆಸಿದರು ಎನ್ನಲಾಗಿದೆ.
ಈ ವಿಷಯವಾಗಿ ಇಂಡಿಯಾ ಟುಡೇ ಜೊತೆ ಮಾತನಾಡಿದ ಸಂಸದ ಸುಧಾಕರ್ ಸಿಂಗ್, ನಾವು ನಿನ್ನೆ ರಾತ್ರಿಯೇ ನಮ್ಮ ಬಿಎಲ್‌ಎಗಳಿಗೆ ಮತದಾರರ ಪಟ್ಟಿಗಳನ್ನು ಹಸ್ತಾಂತರಿಸಿದ್ದೇವೆ. ಅವರು ಡೇಟಾವನ್ನು ಸರಿಯಾಗಿ ಪರಿಶೀಲಿಸುತ್ತಿದ್ದಾರೆ, ಮತ್ತು ವರದಿ ಮಾಡುತ್ತಿದ್ದಾರೆ ಎಂದರು.
ಮತದಾರರ ಪಟ್ಟಿಯಿಂದ ಪುರುಷರ ಹೆಸರುಗಳನ್ನು ತೆಗೆದುಹಾಕಲಾಗಿದೆ ಮತ್ತು ಕುಟುಂಬದ ಮಹಿಳಾ ಸದಸ್ಯರು ಅದೇ ಪಟ್ಟಿಯಲ್ಲಿ ಉಳಿದಿದ್ದಾರೆ ಎಂಬ ದೂರುಗಳು ಬಂದಿದ್ದು, ಅವರ ಹೆಸರುಗಳು 2024 ರ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ, ಆದರೆ ಅಂತಿಮ ಪಟ್ಟಿಯಿಂದ ಕಾಣೆಯಾಗಿವೆ. ಆರ್‌ಜೆಡಿ ಕಳೆದ ಮೂರು ತಿಂಗಳುಗಳಲ್ಲಿ ಈ ವಿಷಯವಾಗಿ ತನ್ನ ಬಿಎಲ್‌ಎಗಳಿಗೆ ತರಬೇತಿ ನೀಡಿದ್ದು, ಈ ಹಿಂದೆ ರಾಜಕೀಯ ಪಕ್ಷಗಳು ಇಷ್ಟು ದೊಡ್ಡ ಮಟ್ಟದಲ್ಲಿ ಮತದಾರರ ಪಟ್ಟಿಯ ಪರಿಶೀಲನೆ ನಡೆಸುವ ಸಂದರ್ಭ ಎದುರಾಗುತ್ತದೆ ಎನ್ನುವುದನ್ನು ಊಹಿಸಿರಲಿಲ್ಲ, ಮುಂದಿನ ಎರಡು ದಿನಗಳಲ್ಲಿ ಪರಿಶೀಲನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ ಎಂದರು.
ಸಿಪಿಐ-ಎಂಎಲ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಮಾತನಾಡಿದ್ದು, ಹೊಸ ಮತದಾರರಿಗಾಗಿ ಫಾರ್ಮ್ 6 ಅನ್ನು ಸಲ್ಲಿಸಬೇಕಾಗಿತ್ತು. ಆದರೆ ಎಸ್‌ಐಆರ್ ಪ್ರಕ್ರಿಯೆಯ ಸಮಯದಲ್ಲಿ ಇಸಿಐ ಫಾರ್ಮ್ 6 ರ ಸ್ವರೂಪವನ್ನು ಬದಲಾಯಿಸಿತು. ಹೆಸರು ಅಳಿಸಲ್ಪಟ್ಟವರಿಗೆ ಫಾರ್ಮ್ 6 ಆಯ್ಕೆಯನ್ನು ಬಳಸದೆ ಮತ್ತೆ ಸೇರಿಸಲು ಯಾವುದೇ ಆಯ್ಕೆ ಇರಲಿಲ್ಲ ಎಂದು ಭಟ್ಟಾಚಾರ್ಯ ಹೇಳಿದರು.
ಇಷ್ಟು ದೊಡ್ಡ ಪ್ರಮಾಣದ ಪ್ರಕ್ರಿಯೆಗೆ, ಇಸಿಐ ಸುತ್ತೋಲೆಯೊಂದಿಗೆ ಪ್ರಾರಂಭವಾಗಿ ಕೇವಲ ಪತ್ರಿಕಾ ಪ್ರಕಟಣೆಯೊಂದಿಗೆ ಕೊನೆಗೊಂಡಿರುವುದು ಆಶ್ಚರ್ಯಕರವಾಗಿದ್ದು, ರಾಜಕೀಯ ಪಕ್ಷಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸಲಾಗಿಲ್ಲ, ಯಾವುದೇ ದತ್ತಾಂಶವನ್ನು ಹಸ್ತಾಂತರಿಸಲಾಗಿಲ್ಲ. ಬಿಎಲ್‌ಎಗಳು, ಕೇಡರ್ ಮತ್ತು ಮತದಾರರು ಸಹ ಹಬ್ಬಗಳಲ್ಲಿ ನಿರತರಾಗಿದ್ದಾರೆ, ಇದರಿಂದಾಗಿ ಡೇಟಾವನ್ನು ಪರಿಶೀಲಿಸುವುದು, ಪ್ರತಿಕ್ರಿಯೆಗಳನ್ನು ಸಂಗ್ರಹಿಸುವುದು ಮತ್ತು ಸಮಯಕ್ಕೆ ಅನುಗುಣವಾಗಿ ಆಕ್ಷೇಪಣೆಗಳನ್ನು ಸಲ್ಲಿಸುವುದು ಕಷ್ಟಕರವಾಗಿದೆ ಎಂದು ತಿಳಿಸಿದರು.
ಎಸ್‌ಐಆರ್ ಪ್ರಕ್ರಿಯೆಯ ವಿರುದ್ಧದ ಅರ್ಜಿದಾರರಲ್ಲಿ ಒಬ್ಬರಾದ ಯೋಗೇಂದ್ರ ಯಾದವ್ ಕೂಡ ಈ ಪ್ರಕ್ರಿಯೆಯನ್ನು ಟೀಕಿಸಿದ್ದು, ಇದರಿಂದ ಬಿಹಾರದಲ್ಲಿ ಕನಿಷ್ಠ 1.5 ಕೋಟಿ ಮತದಾರರ ಮತದಾನದ ಹಕ್ಕು ಕಳೆದುಕೊಳ್ಳುವ ಸಾಧ್ಯತೆಗಳಿದ್ದವು ಎಂದರು. (ಏಜೆನ್ಸೀಸ್)