

ನವದೆಹಲಿ: ಭಾರತವು ಜಾಗತಿಕ ಮಾರುಕಟ್ಟೆಗೆ ಉತ್ಪನ್ನಗಳನ್ನು ವಿನ್ಯಾಸಗೊಳಿಸುವ ಮಹತ್ವದ ಕೇಂದ್ರವಾಗಿದೆ, ಇದು 2027 ರ ವೇಳೆಗೆ ದ್ವಿಗುಣಗೊಳ್ಳಲಿದೆ ಎಂದು ಥೇಲ್ಸ್(ಫ್ರೆಂಚ್ ಮಿಲಿಟರಿ ಮತ್ತು ಸೈಬರ್ ಸೆಕ್ಯುರಿಟಿ ಸಾಫ್ಟ್‌ವೇರ್ ಗ್ರೂಪ್) ಸಿಇಒ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ಯಾಟ್ರಿಸ್ ಕೇನ್ ತಿಳಿಸಿದ್ದಾರೆ.
ರಕ್ಷಣಾ ವಲಯ ಮತ್ತು ಏರ್‌ಲೈನ್ ಆಪರೇಟರ್‌ಗಳಿಂದ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಭಾರತವನ್ನು ಭರವಸೆಯ ಮಾರುಕಟ್ಟೆಯಾಗಿ ನೋಡುತ್ತಿದ್ದೇವೆ, ಕಂಪನಿಯು ಭಾರತವನ್ನು ಸಂಶೋಧನೆ ಮತ್ತು ಅಭಿವೃದ್ಧಿಯ ಕೇಂದ್ರವಾಗಿ ಪರಿಗಣಿಸುತ್ತದೆ, ಅದರ ಹೇರಳವಾದ ಎಂಜಿನಿಯರಿಂಗ್ ಪ್ರತಿಭೆಗಳಿಗೆ ಧನ್ಯವಾದ ಹೇಳಲೇಬೇಕಾಗುತ್ತದೆ. ಥೇಲ್ಸ್ ಈಗಾಗಲೇ ಭಾರತದಲ್ಲಿ ಎಂಜಿನಿಯರಿಂಗ್ ಕೇಂದ್ರಗಳನ್ನು ಹೊಂದಿದ್ದು, ದೇಶದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಯೋಜಿಸಿದೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಸರ್ಕಾರವು ಸ್ಥಳೀಯ ಉತ್ಪಾದನೆಗೆ ಆದ್ಯತೆ ನೀಡಿದೆ. ಭಾರತದಲ್ಲಿ 1,500 ಜನರಿಗೆ ಉದ್ಯೋಗ ನೀಡಿರುವ ಕಂಪನಿಯು ಭಾರತದಲ್ಲಿ ವಿನ್ಯಾಸಗೊಳಿಸಿದ ಉತ್ಪನ್ನಗಳನ್ನು ನೆಚ್ಚಿಕೊಂಡಿದೆ. ಇವುಗಳ ಗುಣಮಟ್ಟವೂ ಉದ್ಭುತವಾಗಿದೆ. ಈ ಎಲ್ಲ ಕಾರಣಗಳಿಂದ ಭಾರತ ಭರವಸೆಯಾಗಿ ಕಾಣುತ್ತಿದೆ ಎಂದು ಹೇಳಿದ್ದಾರೆ.