More

    ವಂದೇ ಭಾರತ್​ ಸ್ಲೀಪರ್​ ಟ್ರೈನ್​ಗೆ ಜಾಗತಿಕ ರೈಲುಗಳೇ ಸ್ಫೂರ್ತಿ: ರಾಜಧಾನಿ ಎಕ್ಸ್​ಪ್ರೆಸ್​ಗಿಂತಲೂ ಅತ್ಯುತ್ತಮ

    ನವದೆಹಲಿ: ಮುಂದಿನ ವರ್ಷ ಕಾರ್ಯಾಚರಣೆ ಆರಂಭಿಸಲಿರುವ ವಂದೇ ಭಾರತ್​ ಸ್ಲೀಪರ್​ ಕೋಚ್​ ರೈಲುಗಳು ರಾಜಧಾನಿ ಎಕ್ಸ್​ಪ್ರೆಸ್​ ರೈಲುಗಳಿಗಿಂತಲೂ ಅತ್ಯುತ್ತಮವಾಗಿರಲಿದೆ ಎಂದು ಭಾರತ್ ಅರ್ಥ್​ ಮೂವರ್ಸ್​ ಲಿಮಿಟೆಡ್​ (ಬಿಇಎಂಎಲ್) ಮುಖ್ಯಸ್ಥ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಾಂತನು ರಾಯ್​ ಹೇಳಿದ್ದಾರೆ.

    ರಕ್ಷಣಾ ಕ್ಷೇತ್ರದ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಒಂದಾಗಿರುವ ಬಿಇಎಂಎಲ್​, ರೋಲಿಂಗ್​ ಸ್ಟಾಕ್​ ಅಥವಾ ರೈಲುಗಳ ತಯಾರಿಕೆಯಲ್ಲಿಯೂ ಖ್ಯಾತಿಯನ್ನು ಪಡೆದಿದ್ದು, ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಸಹಯೋಗದೊಂದಿಗೆ ಮೊದಲ ವಂದೇ ಭಾರತ್​ ಸ್ಲೀಪರ್​ ಟ್ರೈನ್​ ನಿರ್ಮಾಣ ಮಾಡುತ್ತಿದೆ.

    ವಂದೇ ಭಾರತ್​ ಸ್ಲೀಪರ್​ ಟ್ರೈನ್​ನ ಮೊದಲ ಮೂಲ ಮಾದರಿ 2024ರ ಮಾರ್ಚ್​ ತಿಂಗಳಲ್ಲಿ ಚಾಲನೆ ಆರಂಭಿಸಲಿದೆ ಎಂದು ಭಾರತೀಯ ರೈಲ್ವೇ ಭರವಸೆ ವ್ಯಕ್ತಪಡಿಸಿದೆ. ಇನ್ನೂ ಕೆಲವೇ ದಿನಗಳಲ್ಲಿ ಉತ್ಪಾದನಾ ಪ್ರಕ್ರಿಯೆಯನ್ನು ಪ್ರಾರಂಭಿಸಲು ಬಿಇಎಂಎಲ್ ಎದುರು ನೋಡುತ್ತಿದೆ. ಇದರ ನಡುವೆ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿರುವ ಶಾಂತನು ರಾಯ್, ವಂದೇ ಭಾರತ್​ ಟ್ರೈನ್​ ಬಿಇಎಂಎಲ್​ಗೆ ಒಂದು ದೊಡ್ಡ ಅವಕಾಶವನ್ನು ಸೆಟ್​ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ವಂದೇ ಭಾರತ್​ ಸ್ಲೀಪರ್​ ಟ್ರೈನ್ ವಿಶೇಷ
    ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಸ್ತುತ ಎಲ್ಲ ಹವಾನಿಯಂತ್ರಿತ ಚೇರ್ ಕಾರ್ ಸೇವೆಯಾಗಿದ್ದು, ಅಂತಿಮವಾಗಿ ಇದು ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳನ್ನು ಬದಲಾಯಿಸುವ ಗುರಿಯನ್ನು ಹೊಂದಿದೆ. ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುವ ಸೆಮಿ ಹೈಸ್ಪೀಡ್ ಸ್ವಯಂ ಚಾಲಿತ ರೈಲು ಭಾರತೀಯ ರೈಲ್ವೆಯಲ್ಲಿ ಮುಂದಿನ ಪೀಳಿಗೆಯ ವಿಶ್ವ ದರ್ಜೆಯ ಪ್ರಯಾಣದ ಆದ್ಯತೆಯಾಗಿ ಕಂಡುಬರುತ್ತದೆ. ಈ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಪ್ರೀಮಿಯಂ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಒಂದು ಉತ್ತಮ ಆವೃತ್ತಿಯಾಗಿದ್ದು, ವೇಗ ಮತ್ತು ಹೆಚ್ಚು ಆರಾಮದಾಯಕ ದೂರದ ರಾತ್ರಿಯ ಪ್ರಯಾಣವನ್ನು ನೀಡುತ್ತದೆ.

    ಶಾಂತನು ರಾಯ್ ಅವರ ಪ್ರಕಾರ ವಂದೇ ಭಾರತ ರೈಲು, ರಾಜಧಾನಿ ಎಕ್ಸ್​ಪ್ರೆಸ್​ ರೈಲಿಗಿಂತ ಕ್ಲಾಸಿಕ್​ ಆಗಿ ಮತ್ತು ಅತ್ಯುತ್ತಮವಾಗಿರಲಿದೆ. ಇದು ನೋಸ್​ ಕೋನ್​ನೊಂದಿಗೆ​ ವಾಯುಬಲವೈಜ್ಞಾನಿಕವಾಗಿ ವಿನ್ಯಾಸಗೊಳಿಸಲ್ಪಟ್ಟಿದೆ ಮತ್ತು ಇದು ಲೋಕೋಮೋಟಿವ್​ ಚಾಲಿತವಾಗಿದೆ. ರೈಲಿನ ಒಳಾಂಗಣ ವಿನ್ಯಾಸವೂ ಕೂಡ ರಾಜಧಾನಿ ರೈಲಿಗಿಂತ ತುಂಬಾ ವಿಭಿನ್ನವಾಗಿದೆ. ವಿದೇಶಗಳಲ್ಲಿ ಓಡುವ ಅತ್ಯಂತ ಉನ್ನತ ರೈಲುಗಳಲ್ಲಿರುವ ವಿನ್ಯಾಸ ಇದರಲ್ಲಿರಲಿದೆ ಎಂದು ಎಂದು ಶಾಂತನು ರಾಯ್​ ತಿಳಿಸಿದ್ದಾರೆ.

    ವಂದೇ ಭಾರತ್​ ಸ್ಲೀಪರ್​ ಟ್ರೈನ್​ 16 ಕೋಚ್​ಗಳನ್ನು ಹೊಂದಿರಲಿದೆ. ಅವುಗಳಲ್ಲಿ 11 ಎಸಿ 3-ಟೈರ್ (611 ಬರ್ತ್‌ಗಳು), 4 ಎಸಿ 2-ಟೈರ್ (188 ಬರ್ತ್‌ಗಳು) ಮತ್ತು 24 ಬರ್ತ್‌ಗಳೊಂದಿಗೆ 1 ಫಸ್ಟ್ ಎಸಿ ಸೇರಿ ರೈಲಿನ ಒಟ್ಟು ಸಾಮರ್ಥ್ಯವನ್ನು 823 ಬರ್ತ್‌ಗಳಿಗೆ ಕೊಂಡೊಯ್ಯುತ್ತದೆ.

    ಬಿಇಎಂಎಲ್​ಗೆ ಬಹುದೊಡ್ಡ ಅವಕಾಶ
    ವಂದೇ ಭಾರತ್ ಪ್ರಾಜೆಕ್ಟ್ ವಿಚಾರದಲ್ಲಿ ಭವಿಷ್ಯದ ಅವಕಾಶಗಳ ದೃಷ್ಟಿಯಲ್ಲಿ ಬಿಇಎಂಎಲ್​ ದೊಡ್ಡ ಸಾಮರ್ಥ್ಯವನ್ನು ಎದುರು ನೋಡುತ್ತದೆ ಎಂದು ರಾಯ್ ತಿಳಿಸಿದ್ದಾರೆ. 2023ರ ಹೊತ್ತಿಗೆ 800 ಟ್ರೈನ್​ಗಳು ಬೇಕು ಎಂದು ರೈಲ್ವೆ ಇಲಾಖೆ ಹೇಳಿದೆ. ಇದು ಬಿಇಎಂಎಲ್​ಗೆ ಒಂದು ದೊಡ್ಡ ಅವಕಾಶವಾಗಿದೆ. ನಿಖರವಾಗಿ ಹೇಳಬೇಕೆಂದರೆ 1.5 ಲಕ್ಷ ಕೋಟಿ ರೂಪಾಯಿಯ ದೊಡ್ಡ ಅವಕಾಶ. ಇದರಲ್ಲಿ ನಾವು 50% ಯಶಸ್ಸಿನ ಪ್ರಮಾಣವನ್ನು ಹೊಂದಿದರೂ ಮುಂಬರುವ 5 ರಿಂದ 7 ವರ್ಷಗಳಲ್ಲಿ ಬಿಇಎಂಎಲ್​ಗೆ ಕನಿಷ್ಟ 75,000 ಕೋಟಿ ರೂ. ಅವಕಾಶ ಸಿಗಲಿದೆ ಎಂದರು. (ಏಜೆನ್ಸೀಸ್​)

    ಹಮಾಸ್​ ಕೃತ್ಯ ಖಂಡಿಸಿ ಪೋಸ್ಟ್​ ಮಾಡಿದ ಮಂಗಳೂರು ಮೂಲದ ವೈದ್ಯ ಬಹರೇನ್​ನಲ್ಲಿ ಬಂಧನ: ಕೆಲಸದಿಂದಲೂ ವಜಾ

    ದೆಹಲಿ ಮಾಲಿನ್ಯ: ಇಂದಿನಿಂದ ಏರಿಕೆಯಾಗುವ ನಿರೀಕ್ಷೆ, ಮತ್ತೊಮ್ಮೆ ಅಪ್ಪಳಿಸಲಿದೆ ವಿಷಪೂರಿತ ಗಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts