ಬಂದೂಕು ತರಬೇತಿಯಿಂದ ಜವಾಬ್ದಾರಿ ಹೆಚ್ಚಳ

riffle
ಸೊರಬದಲ್ಲಿ ಹಮ್ಮಿಕೊಂಡಿದ್ದ ನಾಗರಿಕ ಬಂದೂಕು ತರಬೇತಿ ಶಿಬಿರಾರ್ಥಿಗಳಿಗೆ ಸಚಿವ ಮಧು ಬಂಗಾರಪ್ಪ ಅರ್ಹತಾ ಪತ್ರ ವಿತರಿಸಿದರು. ಎನ್.ಎಸ್.ಬೋಸರಾಜು, ಜಿ.ಕೆ.ಮಿಥುನ್‌ಕುಮಾರ್, ದೃಷ್ಟಿ ಜೈಸ್ವಾಲ್, ಪಿಎಸ್‌ಐ ಮಂಜುನಾಥ ಇತರರಿದ್ದರು.
Published on

ಸೊರಬ: ಸಮಾಜದಲ್ಲಿ ಬಂದೂಕು ತರಬೇತಿ ಅತ್ಯವಶ್ಯ. ಪ್ರತಿಯೊಬ್ಬರೂ ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾಗರಿಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅರ್ಹತಾ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಬಂದೂಕು ತರಬೇತಿಯಿಂದ ಸಾರ್ವಜನಿಕರಲ್ಲಿ ಜವಾಬ್ದಾರಿ ಹೆಚ್ಚಾಗಿದೆ ಎಂದರು.

ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಜನಸಾಮಾನ್ಯರು ಸಾರ್ವಜನಿಕ ಜೀವನ ನಡೆಸುತ್ತಿರುವಾಗ ಸಮಾಜಘಾತಕ ಶಕ್ತಿಗಳನ್ನು ಮಟ್ಟಹಾಕಲು, ಅಹಿತಕರ ಘಟನೆಗಳು ನಡೆಯದಂತೆ ತಾಳ್ಮೆಯಿಂದ ವರ್ತಿಸಲು ಇದೊಂದು ಕಲಿಕೆಯ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮಾತನಾಡಿ, ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ಕೆಲವರು ತಪ್ಪು ಅಭಿಪ್ರಾಯ ಹರಡುತ್ತಾರೆ. ಅದಕ್ಕೆ ಕಿವಿಗೊಡದೆ ಪೊಲೀಸ್ ಇಲಾಖೆ ಜತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

12 ದಿನಗಳ ಕಾಲ ಬಂದೂಕು ತರಬೇತಿ ಪಡೆದವರಿಗೆ ಅರ್ಹರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಾಗರ ಎಸಿ ದೃಷ್ಟಿ ಜೈಸ್ವಾಲ್, ತರಬೇತುದಾರರಾದ ಪಿಎಸ್‌ಐ ಮಂಜುನಾಥ, ಹೆಡ್ ಕಾನ್‌ಸ್ಟೆಬಲ್‌ಗಳಾದ ಲಕ್ಷ್ಮೀಕಾಂತ, ಪ್ರವೀಣ್‌ಕುಮಾರ್, ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net