ವಾರದಲ್ಲಿ 3ನೇ ಬಾರಿಗೆ ಇಮ್ರಾನ್​ಗೆ ಜೈಲು ಶಿಕ್ಷೆ: ಮದುವೆ 'ಇದ್ದತ್​' ಕೇಸ್​ ಹೂಡಿರುವುದೇಕೆ ಪತ್ನಿಯ ಮಾಜಿ ಪತಿ!

imran
Published on

ಇಸ್ಲಾಮಾಬಾದ್: ಭ್ರಷ್ಟಾಚಾರ ಮತ್ತು ಅಧಿಕೃತ ರಹಸ್ಯಗಳನ್ನು ಬಹಿರಂಗಪಡಿಸಿದ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿ ಜೈಲು ಸೇರಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಬಾನ್ ಗೆ ಹೆಗಲೇರಿರುವ ಸಂಕಷ್ಟಗಳು ಬಿಡುವ ಲಕ್ಷಣ ಕಾಣುತ್ತಿಲ್ಲ. ಇತ್ತೀಚೆಗೆ ಅವರು ಮತ್ತೊಂದು ಹಿನ್ನಡೆ ಅನುಭವಿಸುತ್ತಿದ್ದಾರೆ.

ಪಾಕಿಸ್ತಾನದ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು ಶನಿವಾರ ಇಸ್ಲಾಂ ಧರ್ಮದ ನಿಯಮಗಳಿಗೆ ವಿರುದ್ಧವಾದ 'ನಿಕಾಹ್' ಪ್ರಕರಣದಲ್ಲಿ ಇಮ್ರಾನ್ (ಟಿಎಸ್) ಮತ್ತು ಬುಪ್ರಾ ಬೀಬಿ (49) ದಂಪತಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 5 ಲಕ್ಷ ರೂಪಾಯಿ ದಂಡ ವಿಧಿಸಿದೆ.

ರಾವಲ್ಪಿಂಡಿಯ ಅಡಿಯಾಲ ಜೈಲಿನ ಆವರಣದಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ಪ್ರಕಟಿಸಿದಾಗ ನ್ಯಾಯಾಲಯದ ಮುಂದೆ ಇಮ್ರಾನ್ ದಂಪತಿಗಳಿಬ್ಬರೂ ಇದ್ದರು. ಇದೇ ತಿಂಗಳ 8ರಂದು ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಇಂತಹ ಸಮಯದಲ್ಲಿ ಇಮ್ರಾನ್‌ ಖಾನ್​ರನ್ನು ಸತತವಾಗಿ ಜೈಲಿಗಟ್ಟುತ್ತಿರುವುದರಿಂದ ಅವರ ನಾಯಕತ್ವದ 'ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್' (ಪಿಟಿಐ) ಪಕ್ಷಕ್ಕೆ ಪ್ರಬಲ ಹಿನ್ನಡೆಯಾಗುವ ಲಕ್ಷಣ ಕಂಡುಬರುತ್ತಿದೆ.

ಇಸ್ಲಾಮಿಕ್ ನಿಯಮಗಳ ಪ್ರಕಾರ, ಗಂಡನ ಮರಣದ ನಂತರ ಅಥವಾ ಪತಿಯಿಂದ ವಿಚ್ಛೇದನದ ನಂತರ ಮರುಮದುವೆಗೆ ನಿಗದಿತ ಮಧ್ಯಂತರ (ಇದ್ದತ್) ಇರಬೇಕು. ಸಾಮಾನ್ಯವಾಗಿ ಇದು ಮೂರು ತಿಂಗಳವರೆಗೆ ಇರುತ್ತದೆ. ಈ ನಿಬಂಧನೆಯನ್ನು ಉಲ್ಲಂಘಿಸಿದ್ದಕ್ಕಾಗಿ ಫರೀದ್ ತನ್ನ ಮಾಜಿ ಪತ್ನಿ ಬುಪ್ರಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೇಲಾಗಿ ಬುಪ್ರಾ ಮೊದಲಿನಿಂದಲೂ. ಇಮ್ರಾನ್ ನಡುವೆ ವಿವಾಹೇತರ ಸಂಬಂಧ ಮುಂದುವರಿದಿತ್ತು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net